ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬಾಂಬ್‌ ಬೆದರಿಕೆ

Wednesday, August 31st, 2011
MCC BOMB

ಮಂಗಳೂರು : ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ ಎಂಬ ಅನಾಮಧೇಯ ಪತ್ರವೊಂದು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಕಚೇರಿಗೆ ತಲುಪಿದ ಹಿನ್ನಲೆಯಲ್ಲಿ ಪೊಲೀಸರು ಪಾಲಿಕೆಯ ಕಟ್ಟಡ ವನ್ನು ತೀವ್ರ ಶೋಧ ನಡೆಸಿದರು. ಪೊಲೀಸ್‌ ಆಯುಕ್ತರಿಗೆ ಸಿಕ್ಕಿದ ಪತ್ರದಲ್ಲಿ ಪಾಲಿಕೆಯ ಕಚೇರಿಗೆ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಬರೆಯಲಾಗಿತ್ತು. ಪಾಲಿಕೆಯ ಸಾಮಾನ್ಯ ಸಭೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿತ್ತು. ಕೂಡಲೇ ಜಾಗೃತರಾದ ಪೊಲೀಸರು ಪಾಲಿಕೆ ಕಚೇರಿ ಹಾಗೂ ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದರು. […]

ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಒಂದು ಕೋಟಿಗೂ ಮಿಕ್ಕಿ ಚೆಕ್ ವಿತರಣೆ

Tuesday, August 30th, 2011
Karnataka Minorities Development Corporation

ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ 2011-12ನೇ ಸಾಲಿನ ವಿವಿಧ ಸಾಲ ಯೋಜನೆಗಳಡಿ ಮಂಗಳೂರು ಉತ್ತರ, ದಕ್ಷಿಣ ಮತ್ತು ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 1,194 ಫ‌ಲಾನುಭವಿಗಳಿಗೆ 34.98 ಲಕ್ಷ ರೂ. ಸಹಾಯಧನ ಸೇರಿ ಒಟ್ಟು 1,45,10,000 ರೂ. ಮೊತ್ತದ ಚೆಕ್‌ಗಳನ್ನು ವಿತರಿಸಿಸಲಾಯಿತು. ಫ‌ಲಾನುಭವಿಗಳಿಗೆ ಚೆಕ್‌ ವಿತರಿಸಿದ ಬಳಿಕ ಮಾತನಾಡಿದ ಸಚಿವರು ಬಡ ಅಲ್ಪಸಂಖ್ಯಾಕರಿಗೆ ಭೂ ಖರೀದಿ ಹಾಗೂ ಮನೆ ನಿರ್ಮಿಸಲು ಅನುಕೂಲವಾಗುವ ಹೊಸ ಯೋಜನೆಯ ಪ್ರಸ್ತಾವ ಸರಕಾರದ […]

ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಎನ್‌.ಯೋಗೀಶ್‌ ಭಟ್‌ ರಿಗೆ ಸನ್ಮಾನ

Monday, August 29th, 2011
Yogish-Bhat/ ಎನ್‌.ಯೋಗೀಶ್‌ ಭಟ್‌ ರಿಗೆ ಸನ್ಮಾನ

ಮಂಗಳೂರು : ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌.ಯೋಗೀಶ್‌ ಭಟ್‌ ಅವರನ್ನು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಸೇವಾಂಜಲಿ ವರ್ಷದ ವ್ಯಕ್ತಿ -2011 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮಂಗಳೂರು ನಗರದ ಅಭಿವೃದ್ದಿಗೆ 150ಕೋ.ರೂ.ಅನುದಾನವನ್ನು ಒದಗಿಸು ವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದೂವರೆ ವರ್ಷದ ಕಾಲದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ.ಈ ಅವಧಿಯಲ್ಲಿ […]

4 ದಿನದ ಹಸುಳೆಯನ್ನು 2000 ರೂ.ಗಳಿಗೆ ಮಾರಿದ ತಂದೆ

Monday, August 29th, 2011
Baby/4 ದಿನಗಳ ಹಸುಳೆ

ಮಂಗಳೂರು : ಹಾಸನ ಕಲಂದರ್‌ ಯಾನೆ ರವಿ ಎಂಬಾತ 4 ದಿನಗಳ ಹಸುಳೆಯನ್ನು ಹಣದ ಆಸೆಗಾಗಿ ಬೋಳಾರದ ಅನ್ವರ್‌ ಎಂಬವನಿಗೆ ಮಾರಾಟ ಮಾಡಿದ್ದಾನೆ. ಅನ್ವರ್ ಎಂಬಾತ 2000 ರೂ.ಗಳಿಗೆ ಮಗುವನ್ನು ಖರೀದಿಸಿದ್ದ ಎಂದು ವಿಚಾರಣೆಯ ವೇಳೆ ಹೇಳಿದ್ದಾನೆ. ಮೋರ್ಗನ್ಸ್‌ ಗೇಟ್‌ನಲ್ಲಿ ಮಗು ಮಾರಾಟ ಯತ್ನ ಪ್ರಕರಣದಲ್ಲಿ ಶನಿವಾರ ರಾತ್ರಿ ಬಂಧಿತನಾಗಿರುವ ಅನ್ವರ್‌ ನನ್ನು ರವಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ಸೆ. 8 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರ್ಥಿಕ ಸಂಕಷ್ಟದ ಕಾರಣ ಕಲಂದರ್‌ ಯಾನೆ […]

ಕೌಟುಂಬಿಕ ಕಲಹಕ್ಕೆ ಇನ್ಸ್ ಪೆಕ್ಟರ್ ಸುದರ್ಶನ್ ಪತ್ನಿ ಬಲಿ

Sunday, August 28th, 2011
Shobha/ಶುಭಾ

ಬೆಂಗಳೂರು : ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್ಸ್ ಪೆಕ್ಟರ್ ಸುದರ್ಶನ್ ಎಂಬುವರ ಪತ್ನಿ ಶುಭಾ ತನ್ನ ಪತಿಯ ಸರ್ವಿಸ್ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಶನಿವಾರ ಮಧ್ಯ ರಾತ್ರಿ ವೇಳೆ ಪ್ರಾಣ ಬಿಟ್ಟಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳಲಾಗದೆ ಪತಿಯೊಡನೆ ಸದಾ ಜಗಳವಾಡುತ್ತಿದ್ದ ಶುಭಾ ಅವರು ಸಾವಿನಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಹಾಸನ ಮೂಲದ ಶುಭಾ ಅವರು 12 ವರ್ಷದ ಹಿಂದೆ ಸುದರ್ಶನ್ ಪಿಎಸ್ ಎಂಬ ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದರು. ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ […]

ಎಂಆರ್‌ಪಿಎಲ್‌ ವಾರ್ಷಿಕ ವಹಿವಾಟು -1,177 ಕೋ.ರೂ. ನಿವ್ವಳ ಲಾಭ

Sunday, August 28th, 2011
mrpl/ಅಧ್ಯಕ್ಷ ಎ.ಕೆ.ಹಝಾರಿಕಾ

ಮಂಗಳೂರು: ಎಂಆರ್‌ಪಿಎಲ್‌ನ 23ನೇ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂಸ್ಥೆ ಯ ಅಧ್ಯಕ್ಷ ಎ.ಕೆ.ಹಝಾರಿಕಾ ಎಂಆರ್‌ಪಿಎಲ್‌ನ ಮೂರನೇ ಹಂತದ ಕಾಮಗಾರಿ 2012 ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದ್ದು , ಜೂನ್‌ನಿಂದ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಹೇಳಿದರು. ಘಟಕದ ಸಂಸ್ಕರಣಾ ಸಾಮರ್ಥ್ಯವನ್ನು 15 ಎಂಎಂಟಿಪಿಎಗೆ (ಈಗ 12 ಎಂಎಂಟಿಪಿಎ) ಏರಿಸುವ ಮೂರನೇ ಹಂತದ ಕಾಮಗಾರಿ ಆಗಸ್ಟ್‌ 15ಕ್ಕೆ ಶೇ.86.26ರಷ್ಟು (ಶೇ.97.4 ನಿಗದಿತ ಗುರಿ) ಪೂರ್ಣಗೊಂಡಿದೆ. ಕೆಲವೊಂದು ಸ್ಥಳೀಯ ಸಮಸ್ಯೆಗಳಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗಿದ್ದು , ಮುಂದಿನ ದಿನಗಳಲ್ಲಿ ಅದನ್ನು ಸರಿದೂಗಿಸಿ […]

ದೇಶಾಭಿಮಾನದ ಜೊತೆ ಸಂಸ್ಕಾರ ರೂಪಿಸುವ ಅಗತ್ಯವಿದೆ : ಡಿ. ಎಚ್‌. ಶಂಕರಮೂರ್ತಿ

Sunday, August 28th, 2011
Ramakrishna math/ಶೈಕ್ಷಣಿಕ ಸಮಾವೇಶ

ಮಂಗಳೂರು : ದ.ಕ ಜಿಲ್ಲಾ ಪಂಚಾಯತ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಮಕೃಷ್ಣ ಮಠದ ಸಹಭಾಗಿತ್ವದಲ್ಲಿ ಮಠದಲ್ಲಿ ಶನಿವಾರ ಆಯೋಜಿಸಿದ ‘ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರೀಯಾಶೀಲ ಆಡಳಿತ’ ಪ್ರತಿಭಾ ಪುರಸ್ಕಾರ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಮಾವೇಶವನ್ನು ಕರ್ನಾಟಕ ವಿಧಾನಪರಿಷತ್‌ ಸಭಾಪತಿ ಡಿ. ಎಚ್‌. ಶಂಕರಮೂರ್ತಿ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದೊಂದಿಗೆ ದೇಶಾಭಿಮಾನ ಮತ್ತು ಸಂಸ್ಕಾರ ರೂಪಿಸುವ ಅಗತ್ಯವಿದೆ, ಸ್ವಾತಂತ್ರ್ಯಪೂರ್ವದಲ್ಲಿ ಹಿರಿಯರು, ದೇಶಭಕ್ತರು ವ್ಯವಸ್ಥೆ ಬದಲಾವಣೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಇಂದು […]

ಅಣ್ಣಾ ಬೇಡಿಕೆ : ಕೊನೆಗೂ ಧ್ವನಿಮತದಿಂದ ಸಮ್ಮತಿಸಿದ ಸರಕಾರ

Saturday, August 27th, 2011
Anna Hazare/ ಅಣ್ಣಾ ಹಜಾರೆ

ನವ ದೆಹಲಿ: ಲೋಕಸಭೆಯಲ್ಲಿ ಲೋಕಪಾಲ ಮಸೂದೆಯ ಚರ್ಚೆಯ ನಂತರ ಸಂಸತ್ತಿನಲ್ಲಿ ಧ್ವನಿಮತದ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಲೋಕಪಾಲ ಚರ್ಚೆಯ ನಂತರ ಧ್ವನಿಮತಕ್ಕೆ ಹಾಕುವ ಕೇಂದ್ರ ಸರಕಾರದ ನಿರ್ಧಾರದಿಂದ ಸಂತೋಷವಾಗಿದೆ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾದ ನಂತರ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ಪತ್ರದೊಂದಿಗೆ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್, ಅಣ್ಣಾ ಹಜಾರೆಯವರ ಭೇಟಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಜಾರಿಗೊಳಿಸುವಂತೆ […]

ಕರಾವಳಿ ಉತ್ಸವ ಮೈದಾನಿನಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

Saturday, August 27th, 2011
National Consumer Fair/ ರಾಷ್ಟ್ರೀಯ ಗ್ರಾಹಕರ ಮೇಳ

ಮಂಗಳೂರು : ನಗರದ ಕರಾವಳಿ ಉತ್ಸವ ಮೈದಾನಿನಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಾಹಕರ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್‌ ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಬೃಹತ್‌ ಗ್ರಾಹಕ ಮೇಳವನ್ನು ಗ್ರಾಹಕರಿಗೆ ಮನರಂಜನೆ ನೀಡುವ ಹಾಗೂ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ನೆರವಾಗುವಂತೆ ರೂಪಿಸಬೇಕು ಎಂದರು. ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಈ ಗ್ರಾಹಕರ ಮೇಳವನ್ನು ಏರ್ಪಡಿಸಲಾಗುತ್ತಿದೆ. ಈ ರೀತಿಯ ಉಪಯುಕ್ತ ಮೇಳಗಳನ್ನು ಪ್ರತಿವರ್ಷವೂ ಏರ್ಪಡಿಸುವ ಅಗತ್ಯವಿದೆ. ಇದು ಹೆಚ್ಚಿನ […]

ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಕಾಲಿಟ್ಟ ‘ಒರಿಯರ್ದೊರಿ ಅಸಲ್‌’

Saturday, August 27th, 2011
Asal film/ಒರಿಯರ್ದೊರಿ ಅಸಲ್‌

ಬೆಂಗಳೂರು : “ಒರಿಯರ್ದೊರಿ ಅಸಲ್‌’ ತುಳು ಚಿತ್ರ ಬೆಂಗಳೂರಿನಲ್ಲಿ ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ನಲ್ಲಿ ತೆರೆ ಕಂಡಿದೆ . ದಕ್ಷಿಣ ಕನ್ನಡದಲ್ಲಿ ತೆರೆಕಂಡು ಯಶಸ್ವಿ 60 ದಿನಗಳನ್ನು ದಾಟಿ ಮುನ್ನುಗುತ್ತಿರುವ ಅಸಲ್‌ 40 ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಯಾವ ಚಿತ್ರಕ್ಕೂ ಈ ರೀತಿಯ ಪ್ರೋತ್ಸಾಹ ಸಿಕ್ಕಿಲ್ಲ ಎಂದು ನಿರ್ಮಾಪಕ ವಿಜಯ್‌ ಕುಮಾರ್‌ ಕೊಡಿಯಾಲ್ ಬೈಲ್ ಹೇಳಿದ್ದಾರೆ. ಮಸ್ಕತ್‌, ದೋಹಾ, ಕತಾರ್‌, ದುಬೈಗಳಲ್ಲೂ ಚಿತ್ರ ಬಿಡುಗಡೆ ಸದ್ಯದಲ್ಲೇ ಮಾಡಲಾಗುವುದು. ಅಷ್ಟೇಅಲ್ಲ, ಅಮೆರಿಕಾಕ್ಕೂ ಈ ಸಿನಿಮಾ ಕೊಂಡೊಯ್ಯುವ ಪ್ರಯತ್ನ […]