ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ : ಹಳೆ ಅಡಿಕೆ ಕಿಲೋ. 179 ರೂ.

Saturday, August 27th, 2011
Arecanut Bunch/ಅಡಿಕೆ

ಪುತ್ತೂರು : ಅಡಿಕೆ ಮಾರುಕಟ್ಟೆಗೆ ಸರಿಯಾಗಿ ಪೂರೈಕೆ ಆಗದಿರುವುದರಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇನ್ನಷ್ಟು ಚೇತರಿಕೆ ಉಂಟಾಗಿದೆ. ಶುಕ್ರವಾರ ಹಳೆ ಅಡಿಕೆ ಕೆ.ಜಿ.ಯೊಂದರ 179 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಯೊಂದರ 168 ರೂ.ಗಳಿಗೆ ವಿಕ್ರಯಗೊಂಡಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದಾರೆ. ಗಡಿ ಪ್ರದೇಶ ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಲ ಪ್ರದೇಶದಲ್ಲಿ ಅಡಿಕೆ ಧಾರಣೆ ಪುತ್ತೂರಿಗಿಂತ ಕೆ.ಜಿ.ಯೊಂದರ 1 ರೂ. ಹೆಚ್ಚಿತ್ತು. ಎಂಬ ಮಾಹಿತಿಗಳು ಕೂಡಾ ಕೃಷಿಕರಿಂದ ಲಭ್ಯವಾಗಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪರಿಸ್ಥಿತಿ […]

ಭ್ರಷ್ಟಾಚಾರದ ವಿರುದ್ದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

Saturday, August 27th, 2011
ABVP-protst/ ಎ.ಬಿ.ವಿ.ಪಿ ಪ್ರತಿಭಟನೆ

ಮಂಗಳೂರು : ನಗರದ ಕೆ.ಪಿ.ಟಿ. ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಬಸವೇಶ್ವರ ವೃತ್ತದಲ್ಲಿ ಮತ್ತು ಹಂಪನಕಟ್ಟೆ ಸಿಗ್ನಲ್‌ ವೃತ್ತದಲ್ಲಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಹಾಗೂ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಎ.ಬಿ.ವಿ.ಪಿ. ಕಾರ್ಯಕರ್ತರು ಮಾನವ ಸರಪಳಿ ರಚಿಸಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ. ಮಂಗಳೂರು ನಗರ ಸಂಘಟನಾ ಕಾರ್ಯದರ್ಶಿ ವಿನಯ್‌ ಮತ್ತು ಮಿಥೇಶ್‌ ನೇತೃತ್ವ ವಹಿಸಿದ್ದರು. ಹಂಪನಕಟ್ಟೆ ಸಿಗ್ನಲ್‌ ವೃತ್ತದಲ್ಲಿ ಎ.ಬಿ.ವಿ.ಪಿ. ದ.ಕ. […]

170 ವಿದ್ಯಾರ್ಥಿಗಳಿಗೆ ಸುಮಾರು 1 ಕೋ.ರೂ. ವಿದ್ಯಾರ್ಥಿವೇತನ ವಿತರಣೆ

Saturday, August 27th, 2011
Konkani Scholarship/ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ

ಮಂಗಳೂರು : ಸಂಸ್ಕೃತಿ ಪ್ರತಿಷ್ಠಾನ ಹಾಗೂ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಆಶ್ರಯದಲ್ಲಿ 170 ವಿದ್ಯಾರ್ಥಿಗಳಿಗೆ ಸುಮಾರು 1 ಕೋ.ರೂ. ವಿದ್ಯಾರ್ಥಿವೇತನವನ್ನು ನಗರದ ಟಿ.ವಿ.ರಮಣ್ ಪೈ ಕಾನ್ ವೆನ್ ಶನ್ ಹಾಲ್ ನಲ್ಲಿ ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ್‌ ಯುನಿವರ್ಸಲ್‌ ಲರ್ನಿಂಗ್‌ನ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್‌ ಪೈ ಕೊಂಕಣಿ ಭಾಷೆ, ಸಂಸ್ಕೃತಿ ಶ್ರೀಮಂತ ಹಾಗೂ ಸಮೃದ್ಧ ಪರಂಪರೆಯನ್ನು ಹೊಂದಿದೆ. ಭಾಷೆ ಬಾಂಧವ್ಯನ್ನು ಬೆಸೆಯುತ್ತದೆ. ಭಾಷೆ, ಸಂಸ್ಕೃತಿ ನಾಶವಾದರೆ ನಮ್ಮ ಅನನ್ಯತೆಯನ್ನು ಕಳೆದುಕೊಂಡಂತೆ. ಇದನ್ನು ಉಳಿಸಿ […]

ಮಂಗಳೂರಿನಲ್ಲಿ ಗ್ಯಾಸ್‌ಪೈಪ್‌ ಲೈನ್‌ ವಿರೋಧಿಸಿ ಪ್ರತಿಭಟನೆ

Friday, August 26th, 2011
Bajpe pipeline

ಬಜಪೆ : ಗುರುಪುರ ಶ್ರೀ ವೈದ್ಯನಾಥ ಸಭಾಭವನದಲ್ಲಿ ಕೊಚ್ಚಿ-ಕುಟ್ಟಿನಾಡು-ಮಂಗಳೂರು-ಬೆಂಗಳೂರು ಗ್ಯಾಸ್‌ಪೈಪ್‌ ಲೈನ್‌ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾದೀನ ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟನಾ ಸಭೆ ನಡೆಸಿದರು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಪೈಪ್‌ಲೈನ್‌ ಹಾದು ಹೋಗಲು ಆವಕಾಶ ನೀಡದೆ ಆದನ್ನು ವಿರೋಧಿಸಿ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಒಟ್ಟು 13ಗ್ರಾಮಗಳಿಗೆ ಯೋಜನೆಯ ಭೂಸ್ವಾದೀನಕ್ಕೆ ನೋಟೀಸು ನೀಡಲಾಗಿದೆ. ಎಂಆರ್‌ಪಿಎಲ್‌ ನ ಒಂದು ಪೈಪ್‌ಲೈನ್‌ ಕೆಲವು ಗ್ರಾಮಗಳಿಂದ ಹಾದು ಹೋಗಿದೆ.ಪೈಪ್‌ ಲೈನ್‌ ಇರುವಲ್ಲಿ ಯಾವುದೇ ರಸ್ತೆ ಹಾದುಹೋಗುವಂತಿಲ್ಲವಾಗಿದೆ. ಇದರಿಂದ […]

ಅಣ್ಣಾ ಅಂದದ್ದೇ ಸೈ : ಒಮ್ಮತದ ಲೋಕಪಾಲಗೆ ಇಂದು ನಿರ್ಣಯ

Friday, August 26th, 2011
Anna Hazare

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು,ಅವರ ಆರೋಗ್ಯ ಕ್ಷಿಣಿಸುತ್ತಿದೆ. ಆದರೂ ಸ್ಥಿರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ. ರಕ್ತ ಮಾದರಿ ಪರೀಕ್ಷೆಯಿಂದ ಅಣ್ಣಾ ಆರೋಗ್ಯ ಉತ್ತಮವಾಗಿದೆ. ಆದರೆ ಅವರ ದೇಹ ತೂಕ ಆರು ಕೆ.ಜಿ.ಯಷ್ಟು ಕಡಿಮೆ ಆಗಿದೆ.ಇದು ಆತಂಕಕ್ಕೆ ಕಾರಣವಾದ ಅಂಶ ಎಂದು ಅಣ್ಣಾ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಖ್ಯಾತ ಹೃದ್ರೋಗ ತಜ್ಞ ನರೇಶ್ ಟ್ರೆಹಾನ್ ತಿಳಿಸಿದರು. ಅಣ್ಣಾ ಆರು ಲೀಟರ್ ನೀರು ಕುಡಿದಿದ್ದು, ಇದು […]

ನಮ್ಮ ಮೆಟ್ರೋ ಸೆ.15ಕ್ಕೆ ಸಂಚಾರ ಆರಂಭ

Wednesday, August 24th, 2011
DV-Sadananda Gowda

ಬೆಂಗಳೂರು : ನಮ್ಮ ಮೆಟ್ರೋ ರೈಲು ವಾಣಿಜ್ಯ ಓಡಾಟ ಸೆ.15ರಿಂದ ಆರಂಭವಾಗಲಿದೆ ಎಂದು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಮೇಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಲಿದ್ದಾರೆ. ಪ್ರಧಾನಿಯವರು ಸೆಪ್ಟೆಂಬರ್ ಮೊದಲ ವಾರ ಬಾಂಗ್ಲಾದೇಶ ಪ್ರವಾಸ ಹೊರಡಲಿರುವುದರಿಂದ. ಸೆ.15 ರಂದು ಬಿಎಂಆರ್ ಸಿಎಲ್ ಮೆಟ್ರೋ ರೈಲು ಉದ್ಘಾಟನೆಗೊಳ್ಳಲಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎಂದರು. ಬಿಎಂಆರ್ ಸಿಎಲ್ ಅಧಿಕಾರಿಗಳೋಡನೆ ಮಂಗಳವಾರ […]

ಧಾರ್ಮಿಕ ಒಗ್ಗಟ್ಟಿನಿಂದ ಶಾಂತಿನೆಲೆಸಲು ಸಾಧೄ :ವೀರೇಂದ್ರ ಹೆಗ್ಗಡೆ

Monday, August 22nd, 2011
Krishna Janmashtami/ಶ್ರೀಕೃಷ್ಣ ಜನ್ಮಾಷ್ಟಮಿ

ಉಡುಪಿ : ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಸ್ಪರ್ಧಾ ಮಹೋತ್ಸವವನ್ನು ರವಿವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ನಮ್ಮ ದೇಶ ಧರ್ಮದ ಆಧಾರದಲ್ಲಿ ಬೆಳೆದು ನಿಂತಿದೆ. ಧಾರ್ಮಿಕ ಒಗ್ಗಟ್ಟಿನಿಂದ ಶಾಂತಿನೆಲೆಸಲು ಸಾಧೄ ಅಲ್ಲದೆ ವಿರೋಧಿಗಳ ಮನಸ್ಸನ್ನು ಕರಗಿಸುವ ಶಕ್ತಿ ನಮ್ಮ ಧರ್ಮಕ್ಕೆ ಇದೆ ಎಂದು ಅವರು ಹೇಳಿದರು. ಉಡುಪಿ ಕ್ಷೇತ್ರ ಪರಿಚಯ’ ಪುಸ್ತಕವನ್ನು ಡಾ| ವೀರೇಂದ್ರ ಹೆಗ್ಗಡೆ ಅವರು ಅನಾವರಣಗೊಳಿಸಿ. ಕೃಷ್ಣ ಪುಟಾಣಿಯಾಗಿದ್ದಾಗಲೇ ಬಹಳ ತುಂಟನಾಗಿದ್ದ. ಅಮ್ಮನಿಗೆ ಬಹಳ ಕಷ್ಟ ಕೊಡುತ್ತಿದ್ದ. ಆದರೂ […]

ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಂಡ ಕೃಷ್ಣ ವೈಭವ

Monday, August 22nd, 2011
Kadri Krishan Vesha Spardhe/ಕೃಷ್ಣ ವೇಷ ಸ್ಪರ್ಧೆ

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರವಿವಾರ ಕದ್ರಿ ಶ್ರೀ ಮಂಜುನಾಥ ದೇವಳದ ಪ್ರಾಂಗಣದಲ್ಲಿ ಆಯೋಜಿಸಿದ ಕೃಷ್ಣ ವೇಷ ಸ್ಪರ್ಧೆ-ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಯರಾಮ ಭಟ್‌ ಹಾಗೂ ಹಿರಿಯ ಗಮಕ ವಿಧ್ವಾಂಸ ಹೊಸಬೆಟ್ಟು ವಾಗೀಶ್‌ ಆಚಾರ್‌ ಉದ್ಘಾಟಿಸಿದರು. ಮಾತೆಯರು ಕಡೆಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವ ಹಾಗೂ ಗೋ ಪೂಜೆ ನೆರವೇರಿಸುವ ಮೂಲಕ ಸಾಂಪ್ರದಾಯಿಕವಾಗಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಹಿನ್ನೆಲೆಯಲ್ಲಿ ವಿದ್ವಾನ್‌ ಸತ್ಯವತಿ ಮುಡಂಬಡಿತ್ತಾಯ ಅವರ ಬಳಗ ಹಾಗೂ […]

ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡರೆ ಅಭಿವೃದ್ಧಿ ಸಾಧಿಸಲು ಸಾಧ್ಯ: ಹೆಗ್ಗಡೆ

Sunday, August 21st, 2011
D Veerendrahegde/ಡಾ| ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವಶಿಕ್ಷಣ ಅಭಿಯಾನದ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಕುರಿತ ಶೈಕ್ಷಣಿಕ ಸಮಾವೇಶ ಹಾಗೂ ಮಾಹಿತಿ ಕಾರ್ಯಾಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯದ ಬಳಿಕ ದೇಶ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಕ್ರಾಂತಿ ದೇಶದ ಒಟ್ಟು ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಿದೆ ಸುಮಾರು 40 ವರ್ಷಗಳ […]

ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಆಡಳಿತ ಕ್ರಮ : ಡಿ.ವಿ.ಎಸ್

Sunday, August 21st, 2011
ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಆಡಳಿತ ಕ್ರಮ : ಡಿ.ವಿ.ಎಸ್

ಮಂಗಳೂರು: ಉಡುಪಿ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿರುವ ಮುಖ್ಯಮಂತ್ರಿಗಳು ಶನಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ವಾರದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಹಿಡಿದು ತಹಶೀಲ್ದಾರ್‌ ವರೆಗಿನ ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ಕೆಲವೇ ದಿನಗಳಲ್ಲಿ ರಾಜ್ಯದ ಆಡಳಿತ ಯಂತ್ರಕ್ಕೆ ವೇಗ ನೀಡಲಾಗುವುದು ಎಂದು ಅವರು ಹೇಳಿದರು. ಈವರೆಗೆ 20 ಇಲಾಖೆಗಳ ಪ್ರಗತಿ ಕುರಿತಂತೆ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ಕಾರ್ಯಗಳಿದ್ದರೂ ಅದನ್ನು ಜಾರಿಗೊಳಿಸುವವರು ಕೆಳಗಿನ ಅಧಿಕಾರಿಗಳು. ಹಾಗಾಗಿ ಅವರೊಂದಿಗೆ […]