Blog Archive

ಸಮೃದ್ಧ ಮಂಗಳೂರು ಅಭಿವೃದ್ಧಿ ಆಗ್ರಹಿಸಿ, ಸಿಪಿಐ(ಎಂ) ಪಾದಯಾತ್ರೆ ಉದ್ಘಾಟನೆ

Thursday, December 7th, 2017
jds Padayatre

ಮಂಗಳೂರು: ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಪ್ರಶ್ನೆಯಲ್ಲಿ ದಶಕಗಳಿಂದಲೂ ಮಂಗಳೂರು ನಗರಪಾಲಿಕೆಗೆ ಸಿಪಿಐ(ಎಂ) ಪಕ್ಷವು ಪ್ರತಿಭಟನೆ, ಆಗ್ರಹ, ಪ್ರಸ್ತಾವಿಕೆಗಳನ್ನು ಕಾಲಕಾಲಕ್ಕೆ ಸಲ್ಲಿಸುತ್ತಾ ಬಂದಿದೆ. ಪಾಲಿಕೆ ಆಡಳಿತ ನಡೆಸುತ್ತಿರುವ ಪಕ್ಷಗಳು ಇವುಗಳನ್ನು ಕಡೆಗಣಿಸಿ, ಜನತೆಯ ಹಿತವನ್ನು ಅಲಕ್ಷಿಸಿದೆ. ಈ ನಿಟ್ಟಿನಲ್ಲಿ ಇಂದು ನಗರಪಾಲಿಕೆಯ ವೈಫಲ್ಯವನ್ನು ಮನವರಿಕೆ ಮಾಡಿ ಪರ್ಯಾಯಗಳನ್ನು ಮುಂದಿಡುವ ಸಿಪಿಐ(ಎಂ) ಪಕ್ಷದ ಆಗ್ರಹಗಳಿಗೆ ಜನತೆ ಬೆಂಬಲ ನೀಡಬೇಕಾಗಿದೆ ಎಂಬುದಾಗಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ‍್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆ […]

ಕರಾವಳಿ ಸೌಹಾರ್ದ ಸಮಾವೇಶದ ಸಿದ್ಧತೆಗಾಗಿ ಸಿಪಿಐಎಂ ಕಾಲ್ನಡಿಗೆ ಜಾಥಾ

Friday, February 24th, 2017
cpim

ಮಂಗಳೂರು : ನೆಹರೂ ಮೈದಾನದಲ್ಲಿ ಫೆ. 25ರಂದು ಸಿಪಿಎಂ ವತಿಯಿಂದ ನಗರದಲ್ಲಿ ನಡೆಯುವ ಕರಾವಳಿ ಸೌಹಾರ್ದ ರ್ಯಾಲಿ ಹಾಗೂ ಸಮಾವೇಶ ಪ್ರಯುಕ್ತ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐಎಂ ಹಮ್ಮಿಕೊಂಡಿದ್ದ ಕಾಲ್ನಡಿಗೆ  ಜಾಥಾಕ್ಕೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿದರು. ಸೌಹಾರ್ದ ರ‍್ಯಾಲಿಯನ್ನು ನಿಲ್ಲಿಸಿ ಇಲ್ಲದಿದ್ದರೆ ಬಂದ್ ಕರೆ ನೀಡಿರುವುದನ್ನು ವಾಪಾಸು ಪಡೆಯಿರಿ ಸಂಘಪರಿವಾರದ ಯಾವ ಬೆದರಿಕೆಗೂ ಮಣಿಯುವುದಿಲ್ಲ. ಬಂದ್ ಇದ್ದರೂ ಕಾಲ್ನಡಿಯಲ್ಲಾದರೂ ಬಂದು ನೆಹರೂ ಮೈದಾನದಲ್ಲಿ ಸೇರುವ ಮೂಲಕ ಸೌಹಾರ್ದ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದು […]

ಕೊರಗರ ಸರಿಪಳ್ಳದ ನಿವೇಶನ ಸ್ಥಳ ಸಮತಟ್ಟುಗೊಳಿಸಲು ಸಿಪಿಐ(ಎಂ) ಪ್ರತಿಭಟನೆ

Tuesday, January 24th, 2017
Koragaru

ಮಂಗಳೂರು: ಹೆದ್ದಾರಿ ನಿರ್ಮಾಣಕ್ಕೆ ಒಕ್ಕಲೆಬ್ಬಿಸಿದ  ಕೊರಗ ಕುಟುಂಬಗಳಿಗೆ ನೀಡಲಾಗಿರುವ ಪದವು ಸರಿಪಳ್ಳದ ನಿವೇಶನ ಸ್ಥಳ ಸಮತಟ್ಟುಗೊಳಿಸಬೇಕೆಂದು ಹಾಗೂ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಪಾಲಿಕೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸದಸ್ಯರು, ಸಿಪಿಐ(ಎಂ)  ನಗರದ ಮೂಲನಿವಾಸಿ ಎಂಟು ಕೊರಗ ಕುಟುಂಬದ ಸದಸ್ಯರುಗಳನ್ನು ಬೀದಿಪಾಲು ಮಾಡಿದ ಮಹಾನಗರ ಪಾಲಿಕೆಗೆ ಧಿಕ್ಕಾರ, ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಿರಿ, ಕೊರಗ ಕುಟುಂಬಗಳಿಗೆ ಮನೆ ಒದಗಿಸಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್,   ಮಾತನಾಡಿ ಜಿಲ್ಲೆಯ […]

ಕೋಮುವಾದದ ವಿರುದ್ಧ ದ.ಕ. ಜಿಲ್ಲಾ ಸೌಹಾರ್ದ ಸಮಾವೇಶ

Tuesday, December 13th, 2016
CPM

ಮಂಗಳೂರು: ಸೌಹಾರ್ದದ ನೆಲೆಯಾಗಿದ್ದ ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಮುವಾದ ತಳವೂರಿದ್ದು, ಕಾಂಗ್ರೆಸ್ಸಿಗಾಗಲೀ, ಪ್ರಾದೇಶಿಕ ಪಕ್ಷಗಳಿಗಾಗಲೀ ಇಂತಹ ದಾಳಿಗಳನ್ನು ತಡೆಯುವ ಶಕ್ತಿಯಿಲ್ಲ. ಏಕೆಂದರೆ ಅವುಗಳು ಅಧಿಕಾರಕ್ಕಾಗಿ ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದ್ದಾರೆ. ನಗರದ ಪುರಭವನದಲ್ಲಿ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕೋಮುವಾದದ ವಿರುದ್ಧ ದ.ಕ. ಜಿಲ್ಲಾ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೌದ್ಧಿಕ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳನ್ನು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. […]

ಛಲವಾದಿ ಹೋರಾಟಗಾರ ಸಿಪಿಐ(ಎಂ)ನ ಕೆ.ಯಾದವ ಶೆಟ್ಟಿ

Wednesday, February 17th, 2016
Yadava Shetty

ಮೂಡಬಿದಿರೆ : ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮೀಣ ಅಬಿವೃದ್ಧಿ ಬಗ್ಗೆ ವಿಶೇಷವಾದ ಆಸಕ್ತಿ ಇರುವ ಸಿಪಿಐ(ಎಂ) ಪಕ್ಷದ ಕೆ.ಯಾದವ ಶೆಟ್ಟಿ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 21 ವರ್ಷ ಪ್ರಾಯದ ಯುವಕನಾಗಿದ್ದಾಗಲೇ ಮಂಡಲ ಪಂಚಾಯತ್ ಸದಸ್ಯನಾಗಿ ಮೂರು ಸಲ ಪಂಚಾಯತ್ ಸದಸ್ಯನಾಗಿ ಸಾಕ್ಷರತಾ ಆಂದೋಲನ ಶ್ರಮದಾನ ಆಂದೋಲನ ಗ್ರಾಮ/ವಾರ್ಡ್ ಅಭಿವೃದ್ಧಿ ಸಮಿತಿ ಮುಖಾಂತರ ಮಾಡಿದ ಕೆಲಸ ನೋಡಿ ಅಂದಿನ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಾಲಿನಿ ಗೋಯಲ್ ಸ್ಥಳದಲ್ಲೇ ಇವರಿಗೆ ಬಹುಮಾನ ಘೋಷಿಸಿದ್ದರು. ಸಿಪಿಐ(ಎಂ) ಪಕ್ಷದ ರಾಜ್ಯ […]

ನಿವೇಶನರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪ್ರತಿಭಟನೆ

Monday, October 13th, 2014
cpim protest

ಮಂಗಳೂರು : ಅಜಿ೯ದಾರರಿಗೆ ಮನೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ನೇತೃತ್ವದಲ್ಲಿ ನಿವೇಶನರಹಿತರು ಮಂಗಳೂರು ಮಹಾನಗರ ಪಾಲಿಕೆಯೆದುರು ಅ13 ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಜ್ಯೋತಿ ವೃತ್ತದಿಂದ ಪಾಲಿಕೆಯವರೆಗೆ ಮೆರವಣಿಗೆ ನಡೆಸಿದರು. ಈಗಾಗಲೇ ನೀಡಿರುವ ಅಜಿ೯ಗಳನ್ನು ನಿವೇಶನರಹಿತರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಿಪಿಐ(ಎಂ) ನಗರ ಕಾರ್ಯದಶಿ೯ ಸುನೀಲ್ ಕುಮಾರ್ ಬಜಾಲ್, ಮಾತನಾಡಿಪ್ರತಿ ವರ್ಷ ಭೂರಹಿತರಿಗೆ ಭೂಮಿ ನೀಡಬೇಕೆಂದಿದ್ದರೂ, ಕಳೆದ 20 ವರ್ಷಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ತುಂಡು ಭೂಮಿ ನೀಡದೆ ಬಡಜನರಿಗೆ ವಂಚಿಸಲಾಗಿದೆ ಎಂದು […]

ಎಪಿಎಲ್-ಬಿಪಿಎಲ್ ಬೇದ ಬೇಡ ಎಲ್ಲರಿಗೂ ತಿಂಗಳಿಗೆ 1.00. ದರದಲ್ಲಿ 35 ಕೆ.ಜಿ. ಅಕ್ಕಿ ನೀಡಿ : ಸಿಪಿಐ(ಎಂ)

Monday, September 2nd, 2013
ration card problem

ಮಂಗಳೂರು : ಸಿಪಿಐ(ಎಂ) ಮಂಗಳೂರು ನಗರ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ ರೇಶನ್ ಅವ್ಯವಸ್ಥೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ ನಡೆಯಿತು. ರೇಶನ್ ಪದ್ಧತಿಯಲ್ಲಿ ಎಪಿಎಲ್-ಬಿಪಿಎಲ್ ಭೇದ ಸಲ್ಲದು, ಎಲ್ಲಾ ಕುಟುಂಬಗಳಿಗೂ ತಿಂಗಳಿಗೆ 1.00. ದರದಲ್ಲಿ 35 ಕೆ.ಜಿ. ಅಕ್ಕಿ ವಿತರಣೆಯಾಗಬೇಕು ಎಂದು ಸಿಪಿಐ(ಎಂ) ಮಂಗಳೂರು ನಗರ ಸಮಿತಿಯ ಬಿ.ಮಾದವ ಹೇಳಿದರು. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರವು ಹೊಸ ರೇಶನ್ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ […]

ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಪಿಐಎಂ ಪ್ರತಿಭಟನೆ

Wednesday, October 31st, 2012
CPIM

ಮಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನಾ ಸಭೆ ನಡೆಯುತ್ತಿದ್ದು ಅದರ ಅಂಗವಾಗಿ ಜಿಲ್ಲಾಧಿಕಾರಿ ಕಛೇರಿ ಬಳಿ ನಿನ್ನೆ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಬಿ.ಮಾಧವ ಮಾತನಾಡಿ ವಿಕೃತ ಮನೋಭಾವದ ಜನರಿಂದ ಈ ಸಮಾಜದಲ್ಲಿ ಪೊಲೀಸರು ಮತ್ತು ಸರಕಾರ ಮಹಿಳೆಯರ ಮಾನ ರಕ್ಷಣೆ ಮಾಡುವಲ್ಲಿ ವಿಫಲವಾಗುತ್ತಿದೆ. ಹರ್ಯಾಣದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ […]

ಒಬಾಮ ಭಾರತ ಭೇಟಿಯನ್ನು ವಿರೋಧಿಸಿ ಎಡಪಕ್ಷಗಳ ಪ್ರತಿಭಟನೆ

Monday, November 8th, 2010
ಎಡಪಕ್ಷಗಳ ಪ್ರತಿಭಟನೆ

ಮಂಗಳೂರು : ಅಮೇರಿಕ ಸಂಯುಕ್ತ ಸಂಸ್ಥಾನದ  ಅದ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದನ್ನು ವಿರೋಧಿಸಿ ಸಿಪಿಐ(ಎಂ) ಸಿಪಿಐ, ಮತ್ತು ಆರ್ ಎಸ್ ಪಿ ಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಸಂಜೆ ಮಂಗಳೂರಿನಲ್ಲೂ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಯಿತು. ನವ-ಪ್ರತಿಗಾಮಿ ಬುಷ್ ಆಡಳಿತದ ನಂತರ. ಮೊದಲ ಆಘ್ರೋ-ಅಮೇರಿಕನ್ ಆಗಿ ಅದಿಕಾರಕ್ಕೆ ಬಂದಿದ್ದರಿಂದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ನಿರೀಕ್ಷೆಗಳು ಆಗದ ಹಿನ್ನಲೆಯಲ್ಲಿ ಹಾಗೂ ಸಂಯುಕ್ತ ರಾಷ್ಟ್ರವು ತನ್ನ ಜಾಗತಿಕ ಅದಿಪತ್ಯದ ನೀತಿಗಳ ಭಾಗವಾಗಿ. ರಾಷ್ಟ್ರೀಯ […]

ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ’

Wednesday, September 22nd, 2010
ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ'

ಮಂಗಳೂರು: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ತೀರ್ಪನ್ನು ಅಲಹಾಬಾದ್ ಕೋರ್ಟ್ ಸೆಪ್ಟೆಂಬರ್ 24 ರಂದು ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಕೋಮಿನವರು ಶಾಂತಿ ಕಾಪಾಡಬೇಕೆಂದು ಸಿಪಿಐಯಂ ನ ಕಾರ್ಯಕರ್ತರು ಗಾಂಧಿ ಪ್ರತಿಮೆಯ ಮುಂಭಾಗದಿಂದ ಡಿಸಿ ಕಛೇರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಕಾಲ್ನಡಿಗೆಯಲ್ಲಿ `ಶಾಂತಿಗಾಗಿ ಸೌಹಾರ್ದ ನಡಿಗೆ’ಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಯಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ್ ಅವರು ನ್ಯಾಯಾಲಯ ನೀಡುವ ತೀರ್ಪನ್ನು ಹಿಂದೂಗಳು ಮತ್ತು ಮುಸ್ಲೀಮರು ಸೌಹಾರ್ದಯುತವಾಗಿ ಸ್ವೀಕರಿಸಬೇಕು. ಕಾನೂನು ಮತ್ತು […]