Blog Archive

ಸಾಮಾಜಿಕ ಚಿಂತನೆ ಹಾಗೂ ಕಳಕಳಿಯಿಂದ ಕೆಲಸ ಮಾಡುವ ಧರ್ಮಸ್ಥಳ ಧರ್ಮ ಪ್ರೇರಣೆಯಲ್ಲಿ ಮಾದರಿಯಾಗಿದೆ: ರುದ್ರಪ್ಪ ಮಾನಪ್ಪ

Tuesday, October 25th, 2016
dharmasthala-functions

ಬೆಳ್ತಂಗಡಿ: ಜನರ ಧಾರ್ಮಿಕ ಭಾವನೆಗೆ ಅನುಗುಣವಾಗಿ ಸಾಮಾಜಿಕ ಚಿಂತನೆ ಹಾಗೂ ಕಳಕಳಿಯಿಂದ ಕೆಲಸ ಮಾಡುವ ಧರ್ಮಸ್ಥಳ ಧರ್ಮ ಪ್ರೇರಣೆಯಲ್ಲಿ ಮಾದರಿಯಾಗಿದೆ ಎಂದು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದ್ದಾರೆ. ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 49ನೇ ಪಟ್ಟಾಭಿಷೇಕ ವರ್ಧಂತಿಯಲ್ಲಿ ಮಾತನಾಡಿದರು. ವೀರೇಂದ್ರ ಹೆಗ್ಗಡೆಯವರು ಭಾರತಮಾತೆಯ ಹೆಮ್ಮೆಯ ಪುತ್ರ. ಕ್ಷೇತ್ರದ ಮೂಲಕ ಅನೇಕ ಚಟುವಟಿಕೆಗಳನ್ನು ನಡೆಸಿ ಗ್ರಾಮಾಂತರ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸ್ತ್ರೀಶಕ್ತಿ ಸಂಘಟನೆಗಳ ಮೂಲಕ […]

ನಶೆಮುಕ್ತಿಗೆ ದೃಢಸಂಕಲ್ಪದ ಆವಶ್ಯಕತೆಯಿದೆ: ಡಾ| ಡಿ. ವೀರೇಂದ್ರ ಹೆಗ್ಗಡೆ

Tuesday, September 27th, 2016
heggade

ಬೆಳ್ತಂಗಡಿ: ನಶೆಮುಕ್ತಿಗೆ ದೃಢಸಂಕಲ್ಪದ ಆವಶ್ಯಕತೆಯಿದೆ. ಮದ್ಯ ಮನುಷ್ಯನಲ್ಲಿ ಭ್ರಮೆ ತುಂಬಿ ಪಾಪದ ಕೆಲಸಗಳನ್ನು ಮಾಡಿಸುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ಸಂಜೆ ಇಲ್ಲಿನ ಎಸ್‌ಡಿಎಂ ಕಲಾಭವನದಲ್ಲಿ ನಡೆಯುತ್ತಿರುವ 1000ನೇ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು. ಮದ್ಯವ್ಯಸನಿಗಳನ್ನು ಜಗತ್ತು ತಮಾಷೆಯ ವಸ್ತುವಾಗಿ, ಕನಿಕರ, ಅವಮಾನಕಾರಿ, ಅವಹೇಳನಕಾರಿಯಾಗಿ ನೋಡುತ್ತದೆ. ಆದ್ದರಿಂದ ಬುದ್ಧಿ ಭ್ರಮಣೆ ಮಾಡುವ, ಚಿತ್ತಚಾಂಚಲ್ಯಗೊಳಿಸುವ, ನಾಲಿಗೆ ಚಾಪಲ್ಯ ಕೆಡಿಸುವ, ಇಂದ್ರಿಯಗಳ ಹತೋಟಿ ತಪ್ಪಿಸುವ ಮದ್ಯವ್ಯವ್ಯಸನದಿಂದ ದೂರವಾಗಲು ಸ್ಥಿರತೆ ಬೇಕು ಎಂದರು. […]

ಎತ್ತಿನಹೊಳೆ ಯೋಜನೆ ಕುರಿತು ಸರಕಾರಕ್ಕೆ ತಜ್ಞರಿಂದ ಮಾಹಿತಿ ನೀಡಿ ಗೊಂದಲ ನಿವಾರಿಸಲಿ: ವೀರೇಂದ್ರ ಹೆಗ್ಗಡೆ

Monday, August 29th, 2016
Heggade

ಬೆಳ್ತಂಗಡಿ: ಎತ್ತಿನಹೊಳೆ ಯೋಜನೆ ಕುರಿತು ದ.ಕ. ಜನರಲ್ಲಿ ಸಾಕಷ್ಟು ತಾಂತ್ರಿಕ ಗೊಂದಲಗಳಿದ್ದು, ಸರಕಾರ ಇವುಗಳ ಕುರಿತು ತಜ್ಞರಿಂದ ಮಾಹಿತಿ ಕೊಡಿಸಬೇಕಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ, ಮನವಿ ಮಾಡಿದ್ದರೂ ಸರಕಾರ ಸ್ಪಂದಿಸಲಿಲ್ಲ. ಇನ್ನಾದರೂ ಮಾಹಿತಿ ನೀಡಿ ಗೊಂದಲ ನಿವಾರಿಸಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ರವಿವಾರ ಶ್ರೀ ಕ್ಷೇತ್ರದಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಜಿಲ್ಲಾ ನಿಯೋಗ ತಮ್ಮನ್ನು ಭೇಟಿ ಮಾಡಿದಾಗ ಮಾತನಾಡಿದರು. ಮಾಹಿತಿ ನೀಡಿ ಗೊಂದಲ ನಿವಾರಿಸಿ ಒಂದೇ […]

ಉಭಯ ಸಂಸ್ಥೆಗಳು ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ: ಟಿ.ಸಿ. ನೌತಿಯಾಲ್‌

Friday, August 19th, 2016
Rudset

ಬೆಳ್ತಂಗಡಿ: ಧರ್ಮಸ್ಥಳದ ರುಡ್‌ಸೆಟ್‌ ಸಂಸ್ಥೆಯ ನಾಯಕತ್ವದಲ್ಲಿ ಅದೇ ಮಾದರಿಯಲ್ಲಿ ದೇಶದಲ್ಲಿ 583ಆರ್‌ಸೆಟಿಗಳು ಕೂಡ ಕೆಲಸ ಮಾಡುತ್ತಿವೆ. ಉಭಯ ಸಂಸ್ಥೆಗಳು ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ ಎಂದು ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಟಿ.ಸಿ. ನೌತಿಯಾಲ್‌ ಹೇಳಿದರು. ಅವರು ಗುರುವಾರ ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ನಡೆದ ದೇಶದ 17 ರಾಜ್ಯಗಳ 27 ರುಡ್‌ಸೆಟ್‌ ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಹೆಗ್ಗಡೆ ಸ್ಫೂರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. […]

ಸೌಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದರ ಪಾತ್ರ ಇಲ್ಲ: ಸಿಬಿಐ ವರದಿ

Wednesday, August 10th, 2016
Soujanya

ಬೆಂಗಳೂರು: ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದರ ಪಾತ್ರ ಇಲ್ಲವೆಂದು ಸಿಬಿಐ ವರದಿ ಸಲ್ಲಿಸಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪರ ವಕೀಲ ಪಿ.ಪಿ. ಹೆಗ್ಡೆ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡಗಡೆ ಮಾಡಿರುವ ಅವರು, ಈ ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ ಕೃತ್ಯ ಎಸೆಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿಎ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಾರಂಭ: ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

Monday, December 7th, 2015
Lakshadeepa

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉದ್ಘಾಟಿಸಿದರು. ನಾವೆಲ್ಲರೂ ಜಾತಿ-ಮತ, ಭೇದ ಮರೆತು ಪರಸ್ಪರ ಪ್ರೀತಿ-ವಿಶ್ವಾಸದಿಂದ ದೇಶದ ಪ್ರಗತಿಗಾಗಿ ಸಂಘಟಿತ ಪ್ರಯತ್ನ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು […]

‘ಚಾಲಿಪೋಲಿಲು’ ಉತ್ತಮ ಸಂದೇಶ ಸಾರುವ ಚಿತ್ರ: ಡಾ. ಡಿ. ವೀರೇಂದ್ರ ಹೆಗ್ಗಡೆ

Wednesday, August 12th, 2015
v.heggade chali polilu

ಮಂಗಳೂರು: ’ಚಾಲಿಪೋಲಿಲು’ ಉತ್ತಮ ಸಂದೇಶ ಸಾರುವ ಚಿತ್ರವಾಗಿದ್ದು ಮನೋರಂಜನೆಯ ಜೊತೆಗೆ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಉತ್ತಮ ಕಥಾ ಹಂದರವನ್ನೊಳಗೊಂಡ ಈ ಚಿತ್ರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದ್ದಾರೆ. ಅವರು ನಗರದ ಪಾಂಡೇಶ್ವರದ ಫಾರಂ ಫಿಜ್ಜಾ ಮಾಲ್‌ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ ಚಾಲಿಪೋಲಿಲು ತುಳು ಚಿತ್ರವನ್ನು ತನ್ನ ಕುಟುಂಬಿಕರ ಜೊತೆಯಲ್ಲಿ ವೀಕ್ಷಿಸಿ ತನ್ನ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. ಸಾಮಾನ್ಯವಾಗಿ ಬಹುತೇಕ ಸಿನಿಮಾಗಳಲ್ಲಿ […]

ಡಾ. ಅಬ್ದುಲ್ ಕಲಾಂ ನಿಧನಕ್ಕೆ ವೀರೇಂದ್ರ ಹೆಗ್ಗಡೆಯವರ ಸಂತಾಪ

Tuesday, July 28th, 2015
Kalam

ಮಂಗಳೂರು : ನಮ್ಮ ರಾಷ್ಟ್ರದ ಮೇರು ವ್ಯಕ್ತಿತ್ವದ ಡಾ. ಅಬ್ದುಲ್ ಕಲಾಂ ಅವರು ಸರ್ವಮಾನ್ಯರು, ಅಜಾತ ಶತ್ರು. ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಹಾಗೂ ವ್ಯರ್ಥವಾಗದಂತೆ ಬದುಕಿದವರು. ಅವರು ಆಯುಷ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡದಲ್ಲದೆ, ಸದುಪಯೋಗ ಪಡಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಆಗಾಗ ಭೇಟಿ ಕೊಡುತ್ತಾ ಕನ್ನಡಿಗರ ಸ್ನೇಹಾಕಾಂಕ್ಷಿಗಳಾಗಿದ್ದರು. ಶ್ರೀ ಕ್ಷೇತ್ರದ ಮೇಲೆ ಅವರಿಗೆ ವಿಶೇಷ ಅಭಿಮಾನ ಹಾಗೂ ಗೌರವನ್ನು ಹೊಂದಿದ್ದರು. ಅವರ ನಿಧನದಿಂದ ಶತಮಾನದ ಶ್ರೇಷ್ಠ ವ್ಯಕ್ತಿಯೋರ್ವ ರನ್ನು […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪುಟಾಣಿಗಳಿಂದ ಮಹಾವೀರ ಜಯಂತಿ ಆಚರಣೆ

Friday, April 3rd, 2015
Mahaveera Jayanti

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬದವರ ಮಾರ್ಗದರ್ಶನದಂತೆ, ಮಹಾವೀರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ತೀರ್ಥಂಕರರ ಮೂರ್ತಿಯ ಮೆರವಣಿಗೆ ನಂತರ ಅಷ್ಟದ್ರವ್ಯಗಳಿಂದ ಅಭಿಷೇಕ, ಅಷ್ಟವಿಧಾರ್ಚನೆ ಪೂಜೆ ನಡೆದವು. ಸ್ಥಳೀಯ ಮಕ್ಕಳಿಂದ ವಿವಿಧ ಕಾರ‍್ಯಕ್ರಮಗಳು ನಡೆದವು ಕುಮಾರಿ ಲಾವಣ್ಯ, ವಜ್ರಶ್ರೀ, ಸಂಚಿತ ಹಾಡಿದ ಮಹಾವೀರ ಅಷ್ಟಕಕ್ಕೆ ಮಾ. ದರ್ಶನ್ ಹಾಗೂ ಕು. ಪ್ರಾಪ್ತಿ ಕನ್ನಡ ಅರ್ಥಾನುವಾದ ಹೇಳಿದರು, ಕುಮಾರಿ ಸೌಖ್ಯಳಿಂದ ಮಹಾವೀರರ ಬಾಲ್ಯ ಹಾಗೂ ಜೀವನ […]

ಧರ್ಮಸ್ಥಳದ ಸೇವಾ ಗಂಗೆ ರಾಷ್ಟ್ರವ್ಯಾಪಿ ಪಸರಿಸಿದೆ : ವಿಶ್ವೇಶತೀರ್ಥ ಸ್ವಾಮೀಜಿ

Friday, March 20th, 2015
Darmasthala

ಧರ್ಮಸ್ಥಳ : ಇಲ್ಲಿಗೆ ಬರುವ ಭಕ್ತರ ಅಭೀಷ್ಟಗಳು ನೆರವೇರುತ್ತವೆ. ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುವ ಚತುರ್ವಿಧ ದಾನಗಳು ಹಾಗೂ ಸೇವಾ ಕಾರ್ಯಗಳು ಇಂದು ರಾಷ್ಟ್ರವ್ಯಾಪಿ ಪಸರಿಸಿದ್ದು ಸರ್ವರಿಗೂ ಕಲ್ಯಾಣಕಾರಿಯಾಗಿವೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬುಧವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ನಾಡಿಗೆ ಸೀಮಿತವಾಗಿದ್ದ ಧರ್ಮಸ್ಥಳದ ಸೇವಾಕಾರ್ಯ ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಇಂದು ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಿರುವ ಬಗ್ಗೆ ಅವರು […]