Blog Archive

ಮೇಲ್ಮನೆ ಇರುವುದೇ ಜಯಪ್ರಕಾಶ್ ಹೆಗ್ಡೆಯಂತವರ ಸೇವೆ ಪಡೆಯಲು ಎನ್ನುವುದು ಅಕ್ಷರಶ: ಸತ್ಯ….

Saturday, December 26th, 2015
jayaprakash hegde

ಮಂಗಳೂರು : ರಾಜ್ಯ ಕಂಡ ಸಂಭಾವಿತ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿ ಇರುವವರು ಕೆ.ಜಯಪ್ರಕಾಶ್ ಹೆಗ್ಡೆ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಆ ಪಕ್ಷಕ್ಕೊಂದು ಘನತೆ ತಂದುಕೊಡುವವರು. ಜನತಾ ಪರಿವಾರದಲ್ಲಿ ಇದ್ದಷ್ಟು ಸಮಯ ಆ ಪಕ್ಷದ ಆಸ್ತಿಯಂತೆ ಕೆಲಸ ಮಾಡಿದರು. ಅದನ್ನು ಬಿಟ್ಟ ಬಳಿಕ ಯಾವುದೇ ಪಕ್ಷದ ರಗಳೆಯೇ ಬೇಡವೆಂದು ಪಕ್ಷೇತರರಾಗಿ ಇದ್ದರು. ಆಗಲೂ ಗೆದ್ದು ಜನಸೇವೆ ಮಾಡಿದರು. ಮತ್ತೆ ಕಾಂಗ್ರೆಸ್ ಸೇರಿದರು. ಆಗಲೂ ಗೆದ್ದರು. ಸಂಸತ್ತಿನಲ್ಲಿ ಧ್ವನಿ ಮೊಳಗಿಸಿದರು. ಬಳಿಕ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಸೋತು ಹೋದರು. ಕಾಂಗ್ರೆಸ್ಸಿನ […]

ಹರಿಕೃಷ್ಣ ಬಂಟ್ವಾಳ್ ರನ್ನು ಕಡೆಗಣಿಸಿದ ಕಾಂಗ್ರೆಸ್ ಗೆ ತಕ್ಕ ಪಾಠ

Saturday, December 26th, 2015
Harikrishna Bantwal

ಮಂಗಳೂರು : ಒಬ್ಬ ಸ್ವಾಭಿಮಾನಿ ನಾಯಕ ತನ್ನ ಬದುಕಿನ ಬಹಳ ಪ್ರಮುಖ ಕಾಲಘಟ್ಟದ 43 ವರ್ಷಗಳನ್ನು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಶ್ರಮಿಸಿದ ಬಳಿಕವೂ ಆ ಪಕ್ಷ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಸುವರ್ಣಯುಗದಲ್ಲಿ ಇರುವಾಗಲೂ ಯಾವ ಅಧಿಕಾರ, ಸ್ಥಾನಮಾನ ಪಡೆದಿಲ್ಲ ಎಂದರೆ ಅದಕ್ಕಿಂತ ಆಶ್ಚರ್ಯ ಬೇರೆ ಇಲ್ಲ. ಅಂತಹ ವ್ಯಕ್ತಿಗಳು ಪಕ್ಷದಲ್ಲಿ ಇರ‍್ತಾರಾ ಎನ್ನುವುದು ಒಂದು ಕಡೆಯಾದರೆ ಅಂತಹ ಒಬ್ಬ ಸಕ್ರಿಯ ಕಾರ್ಯಕರ್ತನನ್ನು ಆ ಪರಿ ದುಡಿಸಿದ ಬಳಿಕವೂ ಆತನ ರಾಜಕೀಯ ಬದುಕಿನಲ್ಲಿ ಆತನಿಗೆ ಏನೂ ಮಾಡದ ಪಕ್ಷವೊಂದಿದೆ […]

ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆ

Wednesday, March 12th, 2014
CP-Yogeshwar

ನವದೆಹಲಿ: ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಏಕೈಕ ಶಾಸಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಎಐಸಿಸಿ ಯೋಗೇಶ್ವರ್ಗೆ ಹಸಿರು ನಿಶಾನೆ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಲೋಕಸಭಾ ಉಪ ಚುನಾವಣೆ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳು ಬದಲಾಗಿವೆ. ಜೆಡಿಎಸ್ ವಶದಲ್ಲಿದ್ದ ಆ ಕ್ಷೇತ್ರವನ್ನು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಡಿ.ಕೆ.ಶಿವಕುಮಾರ್ ಅವರ ಸಹೋದರ […]

ನಂದನ್ ನಿಲೇಕಣಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

Monday, March 10th, 2014
Nandan-Nilekani

ಬೆಂಗಳೂರು: ‘ಆಧಾರ್‌’ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಿಲೇಕಣಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಸಚಿವರು ಹಾಗೂ ಶಾಸಕರು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಿಲೇಕಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು, […]

ಲೋಕಸಮರ: ಮಾಜಿ ಸಿಎಂಗಳ ವಿರುದ್ಧ ಮಹಿಳೆಯರ ರಣಕಹಳೆ

Thursday, March 6th, 2014
Lok-Sabha-Election

ಬೆಂಗಳೂರು: ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಪ್ರಮುಖ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿ ನಿಂತಿವೆ. ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಬಹುತೇಕ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಖೈರುಗೊಂಡಿದ್ದರೂ, ಯಾವುದೇ ಪಕ್ಷ ಇದುವರೆಗೂ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಕೆಲವು ಪ್ರಮುಖ ಕ್ಷೇತ್ರಗಳಿಗೆ ಪ್ರಭಾವಿ ಅಭ್ಯರ್ಥಿಗಳ ಆಯ್ಕೆಗೆ ತೆರೆಮರೆಯಲ್ಲಿ ಕಸರತ್ತು ನಡೆದಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ವಿರುದ್ಧ ತಮ್ಮ ಸೊಸೆ […]

ಗಾಂಧೀಜಿ ಪ್ರಪಂಚದಾದ್ಯಂತ ಇನ್ನೂ ಜೀವಂತವಾಗಿದ್ದಾರೆ : ಬಿ‌ಎ.ಮೊಯ್ದಿನ್

Wednesday, October 2nd, 2013
Congress Office Gandhi Jayanti

ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ( ಅ. 2) ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಮಾಜಿ ಸಚಿವ ಬಿ‌ಎ.ಮೊಯ್ದಿನ್  ಮಾತನಾಡಿ  ಯುವಕರಿಗೆ ಗಾಂಧೀಜಿ ತತ್ವಗಳನ್ನು ತಿಳಿಸುವುದರ ಮೂಲಕ ದೇಶ ಪ್ರೇಮವನ್ನು ಬೆಳೆಸಬೇಕು. ಯುವಕರಲ್ಲಿ ಸಹನಾಶೀಲತೆ ಸೃಷ್ಟಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ.  ಸ್ವದೇಶಿ ಕಾರ್ಯಕ್ರಮದ ಆಂದೋಲನದ ಮೂಲಕ ಅಹಿಂಸೆಯನ್ನು ಭೋಧಿಸಿದ್ದರೂ ಹಾಗಾಗಿ ಗಾಂಧಿ ತತ್ವಗಳು ಇಂದಿಗೂ ಅಮರವಾಗಿದೆ ಎಂದು ಅವರು ಹೇಳಿದರು. ಗಾಂಧಿ ಬ್ರಿಟಿಷರ […]

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಮುಂದುವರಿಯಲಿದ್ದಾರೆ : ಸುಷ್ಮಾ ಸ್ವರಾಜ್

Friday, April 26th, 2013
Sushma Swaraj

ಮಂಗಳೂರು : ಕಾಂಗ್ರೆಸ್ ಪಕ್ಷ ಒಳಜಗಳದಿಂದಾಗಿ ಒಡೆದು ಚೂರು ಚೂರಾಗಿದೆ. ಆದರೆ ರಾಜ್ಯ ಬಿಜೆಪಿಯಲ್ಲಿ ಇದೀಗ ಬಿನ್ನಾಭಿಪ್ರಾಯಗಳು ಶಮನಗೊಂಡಿದೆ, ರಾಜ್ಯದಲ್ಲಿ ಕೆಜೆಪಿ, ಜೆಡಿಎಸ್ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳಿವೆಯೇ ಹೊರತು ಅವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು. ಚುನಾವಣಾ ಕಾರ್ಯದ ನಿಮಿತ್ತ ಶುಕ್ರವಾರ ನಗರಕ್ಕಾಗಮಿಸಿದ ಅವರು, ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ರಾಜ್ಯ ಬಿಜೆಪಿ ಯಲ್ಲಿ ಅನೇಕ ಗೊಂದಲಗಳಿದ್ದು ಇಂದು ಅವೆಲ್ಲವೂ ಶಮನಗೊಂಡಿದ್ದು. ಮುಖ್ಯಮಂತ್ರಿ ಜಗದೀಶ್ […]

ಕಾರ್ಯಕರ್ತರು ಪಕ್ಷದ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು :ಜನಾರ್ಧನ ಪೂಜಾರಿ

Thursday, April 25th, 2013
Activities join Congress

ಮಂಗಳೂರು : ಬಿಜೆಪಿ, ಜೆಡಿಎಸ್, ಕೆಜೆಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷದ ಕಾರ್ಯಕರ್ತರು ಗುರುವಾರ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ, ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ಜನಾರ್ಧನ ಪೂಜಾರಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಕಾರ್ಯನಿರ್ವಹಿಸುವುದರಿಂದ ಪಕ್ಷ ಬಲಗೊಳ್ಳುವುದಲ್ಲದೆ, ಬಿಜೆಪಿ ಸರ್ಕಾರದ  […]

ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಸಂಪೂರ್ಣ ವಿವರ

Monday, March 25th, 2013

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 7 ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸುಳ್ಯ ಹೊರತುಪಡಿಸಿ ಉಳಿದೆಡೆ ಬಿಜೆಪಿ ಧೂಳೀಪಟವಾಗಿದೆ. ಜೆಡಿಎಸ್, ಸಿಪಿಎಂ, ಎಸ್ ಡಿಪಿಐ ಖಾತೆ ತೆರೆದಿದ್ದರೆ ಹೊಸ ಪಕ್ಷಗಳಾದ ಕೆಜೆಪಿ, ಡಬ್ಲುಪಿಐ, ಬಿಎಸ್ಆರ್ ಹಳೆ ಪಕ್ಷಗಳಾದ ಜೆಡಿಯು, ಸಿಪಿಐ, ಐಎಂಎಲ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಜಿಲ್ಲೆಯ 189 ಸ್ಥಾನಗಳ ಪೈಕಿ ಕಾಂಗ್ರೆಸ್ 108, ಬಿಜೆಪಿ 63, ಜೆಡಿಎಸ್ 6, ಎಸ್ ಡಿಪಿಐ 5, ಸಿಪಿಎಂ 2 […]

ಮತದಾರ ಬದಲಾಗುತ್ತಿದ್ದಾನೆ ಪಕ್ಷಗಳು ಎಚ್ಚರವಾಗಬೇಕಿದೆ

Monday, March 25th, 2013

ಮಂಗಳೂರು : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳನ್ನು ನೋಡಿದರೆ ಮತದಾರ ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ನಿರೀಕ್ಷೆಯಂತೆಯೇ ಆಡಳಿತರೂಢ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ನತ್ತ ಮತದಾರ ಒಲವು ತೋರಿದ್ದಾನೆ. ಹಣದ ಹೊಳೆಯೇ ಹರಿದರೂ ಮತದಾರ ಕೆಲವು ಕಡೆಯಾದರೂ ಅದರಿಂದ ಪ್ರಭಾವಿತನಾದಂತೆ ಕಾಣುತ್ತಿಲ್ಲ. ಹಲವು ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾನೆ. ಸಂಘ ಪರಿವಾರದವರು ಅಟ್ಟಹಾಸದಿಂದ ಮೆರೆದ ದಕ್ಷಿಣ ಕನ್ನಡದಲ್ಲಿ ಜನರು ಬಿಜೆಪಿಯನ್ನು ಮಣ್ಣು ಮುಕ್ಕಿಸಿದ್ದಾರೆ. ಮುಖ್ಯಮಂತ್ರಿ […]