ಮಂಡ್ಯ ಕಲ್ಲುತೂರಾಟ ಘಟನೆ,ಸರಕಾರದ ಆಡಳಿತ ವೈಫಲ್ಯ: ಡಾ.ಭರತ್‌ ಶೆಟ್ಟಿ ಕಿಡಿ

Thursday, September 12th, 2024
bharath-shetty

ಸುರತ್ಕಲ್: ಮಂಡ್ಯದಲ್ಲಿ ಗಣೇಶ ಚತುರ್ಥಿ ಬಳಿಕ ಶೋಭಾಯಾತ್ರೆ ಸಂದರ್ಭ ನಡೆದ ಹಿಂದೂ ಭಕ್ತರ ಮೇಲೆ ಕಲ್ಲು ತೂರಾಟ ಘಟನೆ ಸರಕಾರದ ವೈಫಲ್ಯವಾಗಿದೆ. ಸೂಕ್ತ ಭದ್ರತೆ ಹಾಗೂ ಗುಪ್ತಚರ ವರದಿ ಸಂಗ್ರಹದಲ್ಲಿ ನಿರ್ಲಕ್ಷ್ಯವಾಗಿದೆ.ಈ ನಡುವೆ ಗೃಹ ಸಚಿವರು ಕಲ್ಲು ತೂರಾಟ ಅನಿರೀಕ್ಷಿತ, ಕೋಮು ವೈಷಮ್ಯವಲ್ಲ ಇದು ಸಣ್ಣವಿಚಾರ ಎಂದಿರುವುದು ಆಘಾತಕಾರಿ ಎಂದು ಶಾಸಕ ಡಾ.ಭರತ್‌ ಶೆಟ್ಟಿ ವೈ ಹೇಳಿದ್ದಾರೆ. ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ, ನನ್ನಮೇಲೆ ಕೇಸು ದಾಖಲಿಸಲು ಅತುರ ತೋರಿಸುವ ಕಾಂಗ್ರೆಸ್ ಆಡಳಿತ ಹಿಂದೂಗಳ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ‘ಮಂಗಳೂರು ದಸರಾ’ ಶೋಭಾಯಾತ್ರೆ

Wednesday, October 25th, 2023
mangalore-Dasara

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ‘ಮಂಗಳೂರು ದಸರಾ’ ಶೋಭಾಯಾತ್ರೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲ ಸ್ತಂಭನದೊಂದಿಗೆ ಸಮಾಪನಗೊಂಡಿದೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹಾಗಣಪತಿ, ಶಾರದಾ ಮಾತೆಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪೂಜೆ ಯೊಂದಿಗೆ ಮಂಗಳವಾರ ಸಂಜೆ ಶೋಭಾಯಾತ್ರೆ ಮೆರವಣಿಗೆ ಆರಂಭಗೊಂಡಿತ್ತು. ಸುಮಾರು 7 ಕಿ.ಮೀ. ನಗರ ಪ್ರದಕ್ಷಿಣೆಯ ಬಳಿಕ ಬುಧವಾರ ಮುಂಜಾನೆ ಮರಳಿ […]

ಮಂಗಳೂರು : ದಸರಾ ವೈಭವದ ಶೋಭಾಯಾತ್ರೆಯಲ್ಲಿ ತುಂಬಿದ ಜನಸಾಗರ

Wednesday, October 9th, 2019
mangaluru-dasara

ಮಂಗಳೂರು : ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಆರಂಭಗೊಂಡು, ಬುಧವಾರ ಮುಂಜಾನೆ ವರೆಗೆ ನಡೆಯಿತು. ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರುಗಳ ಸಹಸ್ರಾರು ಜನರು ಕಣ್ತುಂಬಿಕೊಂಡರು. ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ […]

ಹಿಂದೂ ಯುವಸೇನೆಯ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭಯುತ ಶೋಭಾಯಾತ್ರೆ

Thursday, September 20th, 2018
ಹಿಂದೂ ಯುವಸೇನೆಯ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭಯುತ ಶೋಭಾಯಾತ್ರೆ

ಮಂಗಳೂರು : ಹಿಂದೂ ಯುವಸೇನೆಯ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕೇಂದ್ರ ಮೈದಾನಿನ ಛತ್ರಪತಿ ಶಿವಾಜಿ ಮಂಟಪದಲ್ಲಿ ಬುಧವಾರ  ಸಂಜೆ ಬಹಳ ವಿಜೃಭಂಣೆಯಿಂದ ಜರಗಿತು. ಕಳೆದ 7 ದಿನಗಳಿಂದ ಪೂಜಿಸುತ್ತಿದ್ದ ಗಣಪತಿಯ ಉತ್ಸವ ಮೂರ್ತಿಯನ್ನು ಮಹಾಪೂಜೆಯೊಂದಿಗೆ ಸಂಜೆ 6.40 ರಿಂದಲೇ ವೈಭಯುತ ಶೋಭಾಯಾತ್ರೆ ಗೆ ಅಣಿಗೊಳಿಸಲಾಯಿತು. ಬಳಿಕ ಆಕರ್ಷಕ ಮೆರವಣಿಗೆಯೊಂದಿಗೆ  ಗಣಪತಿಯ ಶೋಭಾಯಾತ್ರೆ ನಡೆಯಿತು. ಬುಧವಾರ  ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಪೂಜಾಕಾರ್ಯಕ್ರಮಗಳು ನಡೆದವು, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯ ಬಳಿಕ  ವೈಭವದ ಶೋಭಯಾತ್ರೆ ಕೇಂದ್ರ ಮೈದಾನದಿಂದ ಹೊರಟು […]

ಹೆಣ್ಣುಮಕ್ಕಳಿಗೆ ಚುಡಾಯಿಸುತ್ತಿದ್ದ ವ್ಯಕ್ತಿಗೆ ಪೊಲೀಸರಿಂದ ಧರ್ಮದೇಟು

Saturday, October 15th, 2016
Traffic police

ಮಂಗಳೂರು: ಸಂಚಾರಿ ಪೊಲೀಸ್‌ ಅಧಿಕಾರಿಯೊಬ್ಬರು ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೀಗ ವೈರಲ್ ಆಗುತ್ತಿದೆ. ನವರಾತ್ರಿ ಅಂಗವಾಗಿ ವೆಂಕಟರಮಣ ದೇವಸ್ಥಾನದ ಬಳಿ ನಡೆದ ಶಾರದೋತ್ಸವ ಮೆರವಣಿಗೆಯ ವೇಳೆ ಅತಿರೇಕವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಸಂಚಾರಿ ಪಶ್ಚಿಮ ವಿಭಾಗದ ಪೇದೆ ಗಜೇಂದ್ರ ಎನ್ನುವವರು ಥಳಿಸಿದ ದೃಶ್ಯಾವಳಿ ಇದೀಗ ಪೊಲೀಸ್ ಕಮೀಷನರ್ ಅವರಿಗೂ ತಲುಪಿದೆ. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಸಂಚಾರಿ ಎಸಿಪಿ ತಿಲಕ್‌ಚಂದ್ರ ಅವರಿಗೆ ಸೂಚಿಸಿದ್ದಾರೆ. ರಥಬೀದಿ ಬಳಿ ಶಾರದೋತ್ಸವದಂಗವಾಗಿ ನಡೆದ ಶೋಭಾಯಾತ್ರೆಯ ಸಂದರ್ಭ ಯುವಕರ […]

ಹಿಂದೂ ಯುವಸೇನೆಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭಯುತ ಶೋಭಾಯಾತ್ರೆ

Monday, September 16th, 2013
Hindu Yuva sene Ganapathi

ಮಂಗಳೂರು  : ಹಿಂದೂ ಯುವಸೇನೆಯ 21ನೇ ವರ್ಷದ  ಸಾರ್ವಜನಿಕ ಶ್ರೀ ಗಣೇಶೋತ್ಸವವು  ಕೇಂದ್ರ ಮೈದಾನಿನ ಛತ್ರಪತಿ ಶಿವಾಜಿ ಮಂಟಪದಲ್ಲಿ  ಭಾನುವಾರ ಸಂಜೆ ಬಹಳ ವಿಜೃಭಂಣೆಯಿಂದ ಜರಗಿತು. ಕಳೆದ 7 ದಿನಗಳಿಂದ ಆರ್ಶ್ರಾಧಿಸುತ್ತಿದ್ದ  ಗಣಪತಿಯ ಉತ್ಸವ ಮೂರ್ತಿಯನ್ನು ವೈಭಯುತ ಶೋಭಾಯಾತ್ರೆಯ ಮೂಲಕ ವಿಸರ್ಜಿಸಲಾಯಿತು. ಭಾನುವಾರ  ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಪೂಜಾಕಾರ್ಯಕ್ರಮಗಳು ನಡೆದವು, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯ ಬಳಿಕ ಸಂಜೆ ಆರಂಭಗೊಂಡ ವೈಭವದ ಶೋಭಯಾತ್ರೆ ಕೇಂದ್ರ ಮೈದಾನದಿಂದ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ […]

ಕುದ್ರೋಳಿ ದಸರಾ ಮೆರವಣಿಗೆ ವಾಹನ ಸಂಚಾರದಲ್ಲಿ ಬದಲಾವಣೆ

Wednesday, October 24th, 2012
Kudroli Temple

ಮಂಗಳೂರು: ಅ.24 ರಂದು ಸಂಜೆ 4 ಗಂಟೆಗೆ ಕುದ್ರೋಳಿ ದಸರಾ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಹೊರಡಲಿದೆ. ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ ಬಾಗ್, ಪಿವಿಎಸ್, ನವಭಾರತ್ ವೃತ್ತ, ಕೆ.ಎಸ್.ರಾವ್ ರಸ್ತೆ, ಕೆ.ಬಿ.ವೃತ್ತ, ಗಣಪತಿ ಹೈಸ್ಕೂಲ್ ರಸ್ತೆ, ಮೋಹಿನಿ ವಿಲಾಸ, ಓಂ ಮಹಲ್ ಜಂಕ್ಷನ್, ರಥಬೀದಿ, ಲೋವರ್ ಕಾರ್ ಸ್ಟ್ರೀಟ್, ನ್ಯೂಚಿತ್ರ, ಅಳಕೆಯ ಮೂಲಕ ಕುದ್ರೋಳಿ ದೇವಳಕ್ಕೆ ಬಂದು  ದೇವಳದ ಕೆರೆಯಲ್ಲಿ ವಿಗ್ರಹ ಜಲಸ್ತಂಭನಗೊಳ್ಳಲಿದೆ. ಈ ಸಂದರ್ಭದಲ್ಲಿ 30,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿರುವುದರಿಂದ […]

ವರ್ಣವಯ ಶೋಭಾಯಾತ್ರೆ ಯೊಂದಿಗೆ ‘ಮಂಗಳೂರು ದಸರಾ’ ಸಮಾಪನ

Friday, October 7th, 2011
Mangalore-dasara

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಗುರುವಾರ ಸಂಜೆ ಶಾರದೆ, ಆದಿಶಕ್ತಿ, ಮಹಾಗಣಪತಿ ಸಹಿತ ನವದುರ್ಗೆಯರ ಅತ್ಯಾಕರ್ಷಕ ಶೋಭಾಯಾತ್ರೆಯೊಂದಿಗೆ ಆರಭಂಗೊಂಡಿತು. ಶೋಭಾಯಾತ್ರೆ ನೇತೃತ್ವವನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ವಹಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಸಂದೇಶ ಸಾರುವ ಟ್ಯಾಬ್ಲೋ ಸಹಿತ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯ ನೂರಾರು ಟ್ಯಾಬ್ಲೋಗಳು, ಪುಣ್ಯಕ್ಷೇತ್ರಗಳ ಸಹಕಾರದ ವರ್ಣಮಯ ಟ್ಯಾಬ್ಲೋಗಳು, ತ್ರಿಶೂರ್‌ನ ವರ್ಣರಂಜಿತ ಕೊಡೆಗಳು, ಕರಾವಳಿಯ ಹುಲಿವೇಷ, ಕೇರಳದ ಚೆಂಡೆವಾದ್ಯ, ಮಹಾರಾಷ್ಟ್ರದ ಡೋಲು ನೃತ್ಯ, […]

ಹಿಂದೂ ಯುವಸೇನೆಯ ವತಿಯಿಂದ 19ನೇ ವರ್ಷದ ವೈಭವದ ಶೋಭಾಯಾತ್ರೆ

Friday, September 9th, 2011
Neharu Maidan Ganapati

ಮಂಗಳೂರು : ಹಿಂದೂ ಯುವಸೇನೆಯ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ 7ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ಬುಧವಾರ ಸಂಜೆ ವಿಜೃಭಂಣೆಯಿಂದ ನಗರದ ಕೇಂದ್ರ ಮೈದಾನದಲ್ಲಿ ಜರಗಿತು. ಮಹಾಗಣಪತಿಯ ಉತ್ಸವ ಮೂರ್ತಿಯ ಸಾರ್ವಜನಿಕ ಮೆರವಣಿಗೆಯು ನೆಹರೂ ಮೈದಾನದಿಂದ ಕೇರಳದ ಪ್ರಸಿದ್ಧ ಚೆಂಡೆವಾದನ,ನಾಸಿಕ್ ಬ್ಯಾಂಡ್, ವಿವಿಧ ವಿನ್ಯಾಸದ ಟ್ಯಾಬ್ಲೊಗಳು, ವಾದ್ಯ ಘೋಷಗಳೊಂದಿಗೆ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ,ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್,ಡೊಂಗರಕೇರಿ, ನ್ಯೂಚಿತ್ರ ಟಾಕೀಸ್,ರಥಬೀದಿಯಾಗಿ ಸಾಗಿ ಶ್ರೀ […]

ದಿಲ್ಲಿ ಸ್ಫೋಟ ಮಂಗಳೂರು ನಗರದಲ್ಲಿ ಬಿಗಿ ಬಂದೋಬಸ್ತು

Thursday, September 8th, 2011
Delhi Blast/ದಿಲ್ಲಿ ಸ್ಫೋಟ

ಮಂಗಳೂರು: ದಿಲ್ಲಿಯಲ್ಲಿ ಹೈಕೋರ್ಟ್ ಆವರಣದಲ್ಲಿ ನಿನ್ನೆ ಸಂಭವಿಸಿದ ಸ್ಫೋಟ ಹಾಗೂ ನಗರದ ನೆಹರು ಮೈದಾನಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಬುಧವಾರ ಆಯ್ದ ಸ್ಥಳಗಳಲ್ಲಿ ವ್ಯಾಪಕ ತಪಾಸಣೆ ನಡೆಸಲಾಗಿದ್ದು, ಪೊಲೀಸ್‌ ಬಂದೋಬಸ್ತು ಬಿಗಿಗೊಳಿಸಲಾಗಿತ್ತು. ಮಹಾವೀರ ವೃತ್ತ, ನಂತೂರು ಜಂಕ್ಷನ್, ಸರ್ವೀಸ್‌ ಬಸ್‌ ನಿಲ್ದಾಣ ಮತ್ತು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಮಾಲ್‌, ಬಂದರು ಮತ್ತಿತರ ಕಡೆಗಳಲ್ಲಿ ಎರಡೆರಡು ಬಾರಿ ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನ ದಳದವರು ತಪಾಸಣೆ […]