ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವ

Friday, March 22nd, 2013
Kanila Temple

ಮಂಜೇಶ್ವರ : ಕನಿಲ ಶ್ರೀ ಭಗವತೀ  ಕ್ಷೇತ್ರ ಮಂಜೇಶ್ವರ ಕಾಸರಗೋಡು ಜಿಲ್ಲೆ. ಇಲ್ಲಿ ಭರಣಿ ಮಹೋತ್ಸವವು ಮಾರ್ಚ್ 21 ಗುರುವಾರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರುಂಭಣೆಯಿಂದ ನಡೆಯಿತು. ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮುಜರಾಯಿ ಮತ್ತು ದತ್ತಿ ಇಲಾಖೆ ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಜೇಶ್ವವರದ ಗುಡ್ಡದ ಮೇಲಿರುವ ಈ ಸುಂದರ ಕ್ಷೇತ್ರ ಧಾರ್ಮಿಕ ಪಾವಿತ್ರ್ಯತೆ ಹಾಗೂ ಮನಸ್ಸಿನ ನಿಯಂತ್ರಣಕ್ಕೆ ಪ್ರಶಾಂತ ತಾಣ ಎಂದು ಹೇಳಿದರು. ಭಗವಂತನ ನಿತ್ಯ […]

ದೇಶಾದ್ಯಂತ ಎಪ್ರಿಲ್ 11ರಿಂದ ಮೇ 13ರ ತನಕ ಶ್ರೀರಾಮ ನಾಮ ಜಪಾನುಷ್ಟಾನ

Friday, March 22nd, 2013
Rama Yajnas across nation

ಮಂಗಳೂರು : ಶ್ರೀರಾಮ ಜನ್ಮ ಭೂಮಿಯಾದ ಅಯೋಧ್ಯೆ ಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕ್ಕೆ ಸಂಬಂಧಪಟ್ಟಂತೆ  ಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಎಪ್ರಿಲ್  11ರಿಂದ ಮೇ 13ರ ತನಕ ಒಟ್ಟು 33 ದಿನಗಳ ವಿಜಯ ಮಹಾಮಂತ್ರ ಜಪಾನುಷ್ಠಾನ ಹಮ್ಮಿಕೊಳ್ಳಲಾಗಿದ್ದು,  ಕಳೆದ ಫೆಬ್ರವರಿ  6 ಮತ್ತು 7ರಂದು ಪ್ರಯಾಗದಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ದೇಶದ ವಿವಿಧ ಹಿಂದೂ ಸಂಘಟನೆಗಳ ಸಂತರ ಸಮ್ಮೇಳನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದಾಗಿ ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಪ್ರಾಂತ […]

ಏರ್ ಇಂಡಿಯಾ ಹಾಗು ಜೆಟ್ ಏರ್ ವೇಸ್ ನ ಮಂಗಳೂರು – ದುಬೈ ವಿಮಾನ ಯಾನದಲ್ಲಿ ಬದಲಾವಣೆ

Thursday, March 21st, 2013
Jet Air flights

ಮಂಗಳೂರು : ಭಾರತದ ಪ್ರಮುಖ ವಿಮಾನ ಯಾನ ಸಂಸ್ಥೆಗಳಾದ  ಏರ್ ಇಂಡಿಯಾ ಹಾಗು ಜೆಟ್ ಏರ್ ವೇಸ್ ಸಂಸ್ಥೆಗಳು ಮಂಗಳೂರು – ದುಬಾಯಿಗೆ ಪ್ರಾರಂಭಿಸಿದ್ದ ತಮ್ಮ ವಿಮಾನ ಯಾನದ ಸಮಯವನ್ನು ಬದಲಿಸಿದ್ದು ಇದು ಮಾರ್ಚ್ ೩೧ ರಿಂದ ಜಾರಿಗೆ ಬರಲಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಎರಡು ವಿಮಾನಗಳಲ್ಲಿ ಮೊದಲ ವಿಮಾನವು ದುಬಾಯಿಯಿಂದ ಮುಂಜಾನೆ ಬೆಳಿಗ್ಗೆ 4.25 ಕ್ಕೆ ಹೊರಟು ಬೆಳಿಗ್ಗೆ 9.30 ಕ್ಕೆ ಮಂಗಳೂರು ತಲುಪಲಿದೆ. ಎರಡನೇ ವಿಮಾನದ ಸಮಯವನ್ನು ಬದಲಿಸದೇ ಇದ್ದು, ಈ […]

ದ.ಕ. ಜಿಲ್ಲಾಡಳಿತದಿಂದ ಮತದಾರರ ಹೆಸರು ಪರಿಶೀಲಿಸಲು ಸಹಾಯವಾಣಿ ಪ್ರಾರಂಭ : ಎನ್.ಪ್ರಕಾಶ್

Thursday, March 21st, 2013
SVEEP

ಮಂಗಳೂರು : ಮತದಾರರ ಪಟ್ಟಿಯಲ್ಲಿ  ನೂತನವಾಗಿ ಹೆಸರು ಸೇರ್ಪಡೆಗೊಳಿಸಲು ಹಾಗು ಪ್ರತಿ ಚುನಾವಣಾ ಸಂದರ್ಭದಲ್ಲೂ ಮತದಾರ ಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟು ಹೋಗಿರುವುದು, ಹಾಗು ಇನ್ನಿತರೇ ಹಲವಾರು ಸಮಸ್ಯೆಗಳು ಮತದಾನದ ವೇಳೆಯಲ್ಲಿ ಕಂಡುಬರುತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ರೀತಿಯ ಗೊಂದಲಗಳು ಮರುಕಳಿಸದಂತೆ ಮಾಡಲು ದ.ಕ. ಜಿಲ್ಲಾಡಳಿತವು ಜಿಲ್ಲೆಯ ಪಾಲಿಕೆ ಹಾಗೂ ಎಲ್ಲಾ ಪುರಸಭೆ, ನಗರಸಭೆ, ತಹಶೀಲ್ದಾರ್ ಕಚೇರಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಎನ್.ಪ್ರಕಾಶ್ ತಿಳಿಸಿದರು. ಬುಧವಾರ ಜಿಲ್ಲಾಧಿಕಾರಿ […]

ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ :ಇಲ್ಲದ ನಿಯಮಗಳನ್ನು ಸೃಷ್ಟಿಸುತ್ತಿರುವ ಪೊಲೀಸರು : ಖಾದರ್ ಆರೋಪ

Thursday, March 21st, 2013
Passport applicants

ಮಂಗಳೂರು : ಪೊಲೀಸರೇ ಪಾಸ್ ಪೋರ್ಟ್ ಅರ್ಜಿದಾರರ ಮನೆಗೆ ಭೇಟಿ ನೀಡಿ, ಅರ್ಜಿದಾರನ ಪೂರ್ವಾಪರತೆಯ ಬಗ್ಗೆ ತಿಳಿದುಕೊಂಡು ನಂತರ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸುವ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಇತ್ತೀಚೆಗೆ ಪಾಸ್‌ಪೋರ್ಟ್ ಅರ್ಜಿದಾರರು ವಾಸದ ಮನೆ ಎದುರು ನಿಂತು ಪೊಟೊ ತೆಗೆಯಬೇಕು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಸಹಿ ಹಾಕಿದ ಸಾಕ್ಷಿದಾರರೇ ಪೊಲೀಸ್ ವಿಚಾರಣೆಯ ಸಂದರ್ಭದಲ್ಲೂ ಠಾಣೆಗೆ ಹಾಜರಾಗಬೇಕು ಎಂಬ ಕೆಲವು ಹೊಸ ಕ್ರಮಗಳನ್ನು ಪೊಲೀಸರು ಪ್ರಾರಂಭಿಸಿದ್ದಾರೆ ಇದರಿಂದ ಪಾಸ್ ಪೋರ್ಟ್ ಗೆ ಅರ್ಜಿ ದಾರರು ಅನಗತ್ಯ […]

ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜನಜಾಗೃತಿ ರಥಕ್ಕೆ ಚಾಲನೆ

Thursday, March 21st, 2013
Child Labour Prohibition Act

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಹಾಗೂ ಜಿಲ್ಲಾ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ, ಕಾರ್ಮಿಕ ಇಲಾಖೆ ಇವುಗಳ ಆಶ್ರಯದಲ್ಲಿ  ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಚಲಿಸುವ ಜನಜಾಗೃತಿ ರಥಕ್ಕೆ ಬುಧವಾರ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಚಾಲನೆ ನೀಡಿದರು. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಅನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಅಪರಾಧ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ 10,000 […]

ಕದ್ರಿ ಪಾರ್ಕ್ ಬಳಿ ಯುವತಿ ಸಾವು :ಕೊಲೆ ಶಂಕೆ

Thursday, March 21st, 2013
Pramila death case

ಮಂಗಳೂರು : ಕದ್ರಿ ಪಾರ್ಕ್ ಬಳಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಮಿಳಾಳ ಸಾವು ಆತ್ಮಹತೆಯಲ್ಲ ಬದಲಿಗೆ ಕೊಲೆ ಎಂಬುದಾಗಿ ಆಕೆಯ ಮನೆಯವರು ಆರೋಪಿಸಿದ್ದಾರೆ. ಬುಧವಾರ ಮಾರ್ಚ್ ೨೦ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೀಳಲ ತಂದೆ ಅಮ್ಮು ಪೂಜಾರಿ,  ವರ್ಷದ ಹಿಂದೆ ಮಂಗಳೂರಿಗೆ ಬಂದಿದ್ದ ಆಕೆ  ಕಂಪ್ಯೂಟರ್ ಕೋರ್ಸನ್ನು ಕಲಿಯುತ್ತಿದ್ದು, ಕಲಿಕೆಯ ಜೊತೆ ಪಾರ್ಟ್ ಟೈಮ್ ಉದ್ಯೋಗವನ್ನು ಮಾಡುತ್ತಾ, ಕದ್ರಿ ಸಮೀಪದ ಹಾಸ್ಟೆಲ್ ಒಂದರಲ್ಲಿ ವಾಸಿಸುತ್ತಿದ್ದಳು. ಮಾರ್ಚ್ 17 ಆದಿತ್ಯವಾರ ಎಂದಿನಂತೆ ಮನೆಗೆ ಕರೆ […]

ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕು ಮತ್ತು ಅದರ ಅನುಷ್ಠಾನ ಕ್ಕೆ ಕಾರ್ಯಪ್ರವೃತ್ತರಾಗಬೇಕು : ಪ್ರತಾಪ್ ರೆಡ್ಡಿ

Wednesday, March 20th, 2013
Human rights protection

ಮಂಗಳೂರು : ಮಾನವ ಹಕ್ಕುಗಳನ್ನು ರಕ್ಷಿಸುವ ಕಾರ್ಯವು  ಕೇವಲ ಕಾನೂನಿಗೆ ಮಾತ್ರ ಸಂಬಂಧಿಸಿರದೆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕು ಮತ್ತು ಅದರ ಅನುಷ್ಠಾನ ಕ್ಕೆ ಕಾರ್ಯಪ್ರವೃತ್ತರಾಗಬೇಕು. ಎಂದು ಪ್ರತಿಯೊಬ್ಬ ವ್ಯಕ್ತಿಯು ಈ ಹಕ್ಕುಗಳ ಬಗೆಗೆ ಜಾಗೃತಿಯನ್ನು ಹೊಂದುತ್ತಾನೋ ಅಂದು ಮಾನವ ಹಕ್ಕುಗಳ ಉಲ್ಲಂಘನೆ ಕಡಿಮೆಯಾಗುತ್ತದೆ ಎಂದು  ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಸಂತ ಅಲೋಶಿಯಸ್ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ಪ್ರತಿಪಾದನೆ  ವಿಷಯವಾಗಿ ಏರ್ಪಡಿಸಲಾದ […]

ಕದ್ರಿ ಪಾರ್ಕ್ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆ

Wednesday, March 20th, 2013
Young girl hanging Kadri hills

ಮಂಗಳೂರು : ಕದ್ರಿ ಪಾರ್ಕ್ ಎದುರುಗಡೆ ಇರುವ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಮರವೊಂದಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಪುತ್ತೂರಿನ ಪ್ರಮೀಳಾ(18) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ  ಈ ದಾರಿಯಲ್ಲಿ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ಪೊದೆಯ ಮರದಲ್ಲಿ ಯುವತಿಯ ಶವ ನೇತಾಡುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ದಿನಗಳ ಹಿಂದೆಯೇ ಈ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ. […]

ಶ್ರೀ ಭೂತನಾಥೇಶ್ವರ ದೇವಸ್ಥಾನ ಇದರ ಆಶ್ರಯದಲ್ಲಿ ಮಾರ್ಚ್ 24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Wednesday, March 20th, 2013
Free health check up camp

ಮಂಗಳೂರು : ನಗರದ ಎ.ಜೆ. ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಆಸ್ಪತ್ರೆಯಲ್ಲಿ ಮಾರ್ಚ್ 24ರಂದು  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು ಇದರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು ಈ ಶಿಬಿರದ ಹೆಚ್ಚಿನ  ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕೆಂದು ಶ್ರೀ ಭೂತನಾಥೇಶ್ವರ ದೇವಸ್ಥಾನದ ಮುಖ್ಯ ಸಂಘಟಕ ವಿಜಯನಾಥ ವಿಠಲ ಶೆಟ್ಟಿ ತಿಳಿಸಿದರು. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಮಾರ್ಚ್ 24ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ […]