ಯೆಯ್ಯಾಡಿ ಬಳಿ ಭೀಕರ ರಸ್ತೆ ಅಪಘಾತ ಇಬ್ಬರ ಸಾವು

Monday, February 18th, 2013
car hit to bike at Yeyyadi

ಮಂಗಳೂರು : ನಗರದ ಯೆಯ್ಯಡಿ ಕೊಂಚಾಡಿ ಖಾಸಗಿ ಶಾಲೆ ಬಳಿ ಶನಿವಾರ  ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡುಶೆಡ್ಡೆ ಚಂದ್ರಹಾಸ್ ಮತ್ತು ಸುನಿತಾ ದಂಪತಿ ಪುತ್ರ ಯೋಗೀಶ್ (27) ಮತ್ತು ಕಲ್ಲಡ್ಕ ವೀರಕಂಭದ ಸೋಮಪ್ಪ ನಾಯಕ್ ಮತ್ತು ನೀಲಮ್ಮ ನಾಯಕ್ ಅವರ ಪುತ್ರ ಜಯಪ್ರಕಾಶ್ (23) ಮೃತಪಟ್ಟವರಾಗಿದ್ದಾರೆ. ಸ್ನೇಹಿತರಾದ ಇವರಿಬ್ಬರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್‌ಗಳಾಗಿದ್ದು, ಸುರತ್ಕಲ್ ಬಳಿ ಕೆಲಸ ನಿರ್ವಹಿಸಿ ಸ್ಕೂಟರ್‌ನಲ್ಲಿ ವಾಪಸಾಗುತ್ತಿದ್ದು, ಯೆಯ್ನಾಡಿ ಪೆಟ್ರೋಲ್‌ ಪಂಪ್‌ ಬಳಿ ಜಯ ಪ್ರಕಾಶ್‌ ಮತ್ತು ಯೋಗೀಶ್‌ […]

ಸದಾನಂದ ಗೌಡ ಜೆಡಿಎಸ್ ಸೇರ್ಪಡೆಗೊಳ್ಳುವ ಸುಳಿವು ನೀಡಿದ ಕೆಜೆಪಿ ಉಪಾಧ್ಯಕ್ಷ ಧನಂಜಯ್ ಕುಮಾರ್

Sunday, February 17th, 2013
Dananjaya Kumar

ಮಂಗಳೂರು  :  ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ  ಜೆಡಿಎಸ್ ಸೇರ್ಪಡೆಗೊಳ್ಳಲು ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿಯೇ ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಚುನಾವಣಾ ಸಿದ್ದತಾ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು  ಕೆಜೆಪಿ ಉಪಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ಹೇಳಿದ್ದಾರೆ. ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಜೆಡಿಎಸ್‌ನೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಆಡಳಿತ ನಡೆಸುವಾಗ ಜೆಡಿಎಸ್ ವರಿಷ್ಟರ ಮಾತಿಗೆ ಮನ್ನಣೆ ನೀಡುತ್ತಿದ್ದರೆಂದರಲ್ಲದೆ, ಈಗಲೂ ಜೆಡಿಎಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸದಾನಂದ ಗೌಡರು ಜೆಡಿಎಸ್ ಸೇರಲಿದ್ದಾರೆ […]

ಕುದ್ರೋಳಿಯಲ್ಲಿ ನವೀಕೃತ ಜಾಮಿಯ ಮಸೀದಿಯ ಉದ್ಘಾಟನೆ

Saturday, February 16th, 2013
Jamiya Masjid

ಮಂಗಳೂರು : ಮಂಗಳೂರು ನಗರದ ಕುದ್ರೋಳಿ ಪರಿಸರದಲ್ಲಿ ನವಿಕೃತ ಜಾಮಿಯ ಮಸೀದಿಯ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ ಇಂದು ನೆರವೇರಿಸಿದರು. ಉದ್ಘಾಟನೆ ನೆರವೇರಿಸಿದ ಕೇಂದ್ರ ಸರ್ಕಾರದ ಸಚಿವ ಕೆ.ರೆಹಮಾನ್ ಖಾನ್ ಮಾತನಾಡಿ ಧರ್ಮದ ಹೆಸರಿನಲ್ಲಿ ಕಚ್ಚಾಡದೆ ನಮ್ಮ ದೇಶದ ಪ್ರಬಲ ಶಕ್ತಿಯಾಗಿರುವ ವಿವಿಧತೆಯಲ್ಲಿ ಏಕತೆಯನ್ನು ಪಾಲಿಸೋಣ. ನಮ್ಮ ದೇಶವು ಈ ವ್ಯವಸ್ಥೆಯಲ್ಲಿ ಬೇರೂರಿದೆ ಹೊರತು ಧರ್ಮದ ನೆಲೆಯಲ್ಲಿ ಅಲ್ಲ. ಇಲ್ಲಿನ ಈ ನವೀಕೃತ ಮಸೀದಿಯ ಉಪಯೋಗವನ್ನು ಪ್ರತಿಯೊಬ್ಬನು ಪಡೆದುಕೊಳ್ಳಲಿ, ಈ ಮಸೀದಿಯನ್ನು ನವೀಕರಿಸಲು […]

ಶ್ರೀ ಸರಸ್ವತಿ ಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ನಿರಾಕರಿಸುತ್ತಿರುವ ಮಧ್ಯಪ್ರದೇಶ ಸರಕಾರದ ವಿರುದ್ಧ ಪ್ರತಿಭಟನೆ

Saturday, February 16th, 2013
Vasanth Panchami Pooja at Dhara

ಮಂಗಳೂರು : ಶ್ರೀ ಕಾಶಿ ಸುಮೇರೂ ಪೀಠದ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿ ಅಪಹರಣ ಮತ್ತು ಹಿಂದೂ ಧರ್ಮಗುರುಗಳ ಘೋರ ಅಪಮಾನವನ್ನು ಖಂಡಿಸಲು ಇಂದು ಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಮಧ್ಯಪ್ರದೇಶದಲ್ಲಿನ ದಾರದ ಪ್ರಾಚೀನ ಶ್ರೀ ಸರಸ್ವತಿ ಮಂದಿರದಲ್ಲಿ (ಭೋಜಶಾಲೆ) ವಸಂತಪಂಚಮಿಯ ದಿನ ಹಿಂದೂಗಳಿಗೆ ಪೂಜೆ ಮಾಡುವ ಅಧಿಕಾರವಿದೆ. ಈ ಬಾರಿ ವಸಂತಪಂಚಮಿ ಶುಕ್ರವಾರ ಬಂದಿರುವುದರಿಂದ ಅಲ್ಲಿ ಶುಕ್ರವಾರದ ಪೂಜೆಯನ್ನು ನಿಲ್ಲಿಸಿ ಮಧ್ಯಾಹ್ನ ಮುಸಲ್ಮಾನರಿಗೆ ನಮಾಜು ಪಠಿಸಲು ಸರಕಾರವು ಅನುಮತಿ ನೀಡಿತ್ತು. […]

ಮುನಿಸಿಪಲ್ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ

Saturday, February 16th, 2013
SK Municipal Employees Union

ಮಂಗಳೂರು : ಎಸ್ .ಕೆ ಮುನಿಸಿಪಲ್ ಎಂಪ್ಲಾಯಿಸ್ ಯುನಿಯನ್ (ರಿ ) ಮಂಗಳೂರು ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಂದು ಬೆಳಗ್ಗೆ ಮುನಿಸಿಪಾಲ್ ಎಂಪ್ಲಾಯೀಸ್ ಯೂನಿಯನ್ ನ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಜಾರ್ಜ್ ಪಿಂಟೋ ಉದ್ಘಾಟಿಸಿದರು . ಕಾರ್ಯಕ್ರಮದ ಅದ್ಯಕ್ಷತೆಯನ್ನು ಸತೀಶ್ ಕುಮಾರ್ ಬಂಟ್ವಾಳ ವಹಿಸಿದ್ದರು. ಡಾ. ದಾಸ್  ಆಚಾರ್ಯ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥ ಫಾದರ್ ಮುಲ್ಲರ್ ಮೆಡಿಕಲ್ […]

ಮಾದಕ ದ್ರವ್ಯದ ಚಟಕ್ಕೆ ಒಳಗಾದ ಅಸ್ಸಾಂ ಮೂಲದ ವ್ಯಕ್ತಿಗೆ ನವಜೀವನ ನೀಡಿದ ತಲಪಾಡಿ ತೂಮಿನಾಡಿನ ಸ್ನೇಹಾಲಯ

Saturday, February 16th, 2013
Snehalaya Charitable Trust

ಮಂಗಳೂರು : ಮಾದಕ ದ್ರವ್ಯದ ಚಟಕ್ಕೆ ಒಳಗಾಗಿ, ಮನೆ ಬಿಟ್ಟು ಬೀದಿಪಾಲದ  ಅಸ್ಸಾಂ ಮೂಲದ ದೀಪಕ್ ಛಾತ್ರಿ ಎಂಬಾತನಿಗೆ ತಲಪಾಡಿ ತೂಮಿನಾಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನೀಡಿದ  ಆಶ್ರಯದಿಂದಾಗಿ  ಇದೀಗ ಗುಣಮುಖನಾದ ಈತ ಸುಮಾರು ೬ ವರ್ಷಗಳ ಬಳಿಕ ತನ್ನ ಮನೆ ಸೇರುವಂತಾಗಿದೆ. ಮೂಲತಃ ಅಸ್ಸಾಂ ರಾಜ್ಯದ ಅಫ್ಲಾಂಗ್ ನಿವಾಸಿ, ದಿ. ಅಮೃತ್ ಬಹದ್ದೂರ್ ಛಾತ್ರಿ ಹಾಗೂ ರಾಧಾ ಛಾತ್ರಿ ದಂಪತಿ ಪುತ್ರ ದೀಪಕ್ ಛಾತ್ರಿ (26)  ಎಳೆವಯಸ್ಸಿನಲ್ಲಿಯೇ ಸ್ನೇಹಿತರ ಸಹವಾಸದಿಂದ ಗಾಂಜಾ, ಕುಡಿತ ಇನ್ನಿತರ ದುರಾಭ್ಯಾಸಗಳನ್ನು […]

ಕಿನ್ನಿಪದವು ಕೊಲೆ ಚಿನ್ನ ದೋಚುವ ಉದ್ದೇಶದಿಂದ ಕೃತ್ಯ , ಆರೋಪಿಯ ಬಂಧನ

Saturday, February 16th, 2013
Kinnipadavu maurder case

ಮಂಗಳೂರು : ಬುಧವಾರ ರಾತ್ರಿ ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಕೊಲೆಯಾದ ಸಂಕಲರಿಯ ನಿವಾಸಿ ಯಶವಂತ ಮಡಿವಾಳ ಕೊಲೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಿನ್ನಿಪದವು ನಿವಾಸಿ ದತ್ತ ಕೃಷ್ಣ ಶೆಟ್ಟಿ(21) ಬಂಧಿತ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಯಶವಂತ ಮಡಿವಾಳ ಮತ್ತು  ದತ್ತ ಸ್ನೇಹಿತರಾಗಿದ್ದರು. ಯಾವಾಗಲೂ ಜತೆಯಾಗಿಯೇ ಓಡಾಡುತ್ತಿದ್ದ ಇವರು ಘಟನೆಯ ಮುನ್ನಾ ದಿನ ಕಿನ್ನಿಪದವಿನ ಮಾಂಕಾಳಿ ದೈವಸ್ಥಾನದಲ್ಲಿನ ನೇಮದಲ್ಲಿ ಯಶವಂತ ಮತ್ತು ದತ್ತ ಒಟ್ಟಾಗಿ ಕೋಲದಲ್ಲಿ ಭಾಗವಹಿಸಿದ್ದರು ಆದರೆ ಯಶವಂತರು ಹಾಕಿದ್ದ ಚಿನ್ನದ ಉಂಗುರ,ಬ್ರಾಸ್‌ ಲೈಟ್‌ನ್ನು […]

ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿನ ಬದಲು ಫರ್ಡಿನೆಂಡ್ ಕಿಟ್ಟೆಲ್ ಹೆಸರಿಡುವುದು ಸೂಕ್ತ : ಟಿ. ಜೆ. ಅಬ್ರಹಾಂ

Saturday, February 16th, 2013
University in Srirangapatna

ಮಂಗಳೂರು : ಕೇಂದ್ರ ಸರ್ಕಾರವು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ನಿರ್ಧರಿಸಿರುವ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿನ ಬದಲು  ಶಿಕ್ಷಣ ಕ್ಷೇತ್ರಕ್ಕೆ ಗಣನೀಯವಾದ ಸೇವೆ ಸಲ್ಲಿಸಿದ್ದ ರೆ.ಫಾ.ಫರ್ಡಿನೆಂಡ್ ಕಿಟ್ಟೆಲ್  ಹೆಸರಿಡುವುದು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಆ್ಯಂಟಿ ಗ್ರಾಫ್ಟ್ ಮತ್ತು ಎನ್ವಿರಾನ್‌ಮೆಂಟ್ ಫೋರಂನ ಅಧ್ಯಕ್ಷ ಟಿ. ಜೆ. ಅಬ್ರಹಾಂ ಹೇಳಿದರು. ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಟಿಪ್ಪು ಸುಲ್ತಾನ್ ಒಬ್ಬ ಶ್ರೇಷ್ಟ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂಬುದು ನಿಜ. ಆದರೆ ಆತ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ […]

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಧ್ಯಮಗಳಿಗೆ ನೀಡುವ ಜಾಹೀರಾತು ಪರಿಶೀಲಿಸಲು ಸಮಿತಿ ; ಜಿಲ್ಲಾಧಿಕಾರಿ

Friday, February 15th, 2013
DC prakash

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ ಏಳರಂದು ಚುನಾವಣೆ ನಡೆಯಲಿದ್ದು,  ಎಂಸಿಸಿಯನ್ನು ಹೊರತುಪಡಿಸಿ ಮೂಡಬಿದ್ರೆ, ಉಳ್ಳಾಲ, ಪುತ್ತೂರು ನಗರಸಭೆ, ಬೆಳ್ತಂಗಡಿ ಮತ್ತು ಸುಳ್ಯದ ಪಟ್ಟಣ ಪಂಚಾಯತ್ ಚುನಾವಣೆಗಳು ಮಾರ್ಚ್ 7ರಂದು ನಡೆಯಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತದೆ. ಎಂಸಿಸಿ ಚುನಾವಣೆಗೆ ನಿಲ್ಲುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 3 ಸಾವಿರ ರೂ. ಠೇವಣೆ ಮತ್ತು ಇತರ ವರ್ಗದ ಅಭ್ಯರ್ಥಿಗಳು 1500 ರೂ. ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಇಂದು […]

ಕುಂಟಿಕಾನ್, ಕೆಪಿಟಿ ಜಂಕ್ಷನ್ ನಡುವೆ ಉರುಳಿ ಬಿದ್ದ ಮೀನಿನ ಲಾರಿ ಚಾಲಕ ಪಾರು

Friday, February 15th, 2013
Fish lorry overturns

ಮಂಗಳೂರು : ಕೇರಳದ ಕೋಯಿಕೋಡ್ ನಿಂದ ಉಡುಪಿಗೆ ಸಾಗುತ್ತಿದ್ದ ಮೀನಿನ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕುಂಟಿಕಾನ್ ಹಾಗೂ ಕೆಪಿಟಿ ಜಂಕ್ಷನ್ ನಡುವೆ ಉರುಳಿ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಚಾಲಕನು ಅತೀ ವೇಗದಲ್ಲಿ ಲಾರಿಯನ್ನು ಚಲಾಯಿಸಿದ ಕಾರಣದಿಂದಾಗಿ ಈ ಘಟನೆಯು ಸಂಭವಿಸಿದ್ದು, ಲಾರಿಯಲ್ಲಿದ್ದ ಚಾಲಕ ರಿಯಾಜ್ ಹಾಗೂ ಕ್ಲೀನರ್ ನಜೀಬ್ ಗೆ ಯಾವುದೇ ಪ್ರಾಣಾಪಾಯವಿಲ್ಲದೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿಯಲ್ಲಿದ್ದ 195 ಮೀನಿನ ಪಟ್ಟಿಗೆಗಳು  ರಸ್ತೆಗೆ ಬಿದ್ದು, ಚೆಲ್ಲಾಪಿಲ್ಲಿಯಾಗಿವೆ. ಸುದ್ದಿ ಹರಡುತ್ತಿದ್ದಂತೆ ರಾಶಿ ರಾಶಿ ಮೀನನ್ನು ಕಂಡ ಸ್ಥಳೀಯರು […]