ಕಾಂಗ್ರೆಸ್ ಸಮಾವೇಶದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ವಾಹನ ಜಾಥಾ

Thursday, October 18th, 2012
KPCC President Parameshwar

ಮಂಗಳೂರು: ಕಾಂಗ್ರೆಸ್ ಹಿಂದುಳಿದ ವರ್ಗದ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೃತ್ ಕದ್ರಿಯವರ ನೇತೃತ್ವದಲ್ಲಿ ನಗರದ ಕದ್ರಿ ಮೈದಾನದಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ರವರು ಧ್ವಜ ಬೀಸುವುದರ ಮುಖಾಂತರ ನಗರದಲ್ಲಿನ ಬೃಹತ್ ವಾಹನ ಜಾಥಕ್ಕೆ ಇಂದು ಮಧ್ಯಾಹ್ನ 12.10 ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ, ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಉಪಸ್ಥಿತರಿದ್ದರು. ಎಮ್ ವೇಣುಗೋಪಾಲ್ ಅವರು ಮಂಗಳೂರಿಗೆ ಸೋನಿಯ ಗಾಂಧಿಯವರ ಭೇಟಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ […]

ಮಂಗಳೂರು ದಸರಾ ಎಷ್ಟೊಂದು ಸುಂದರ…

Wednesday, October 17th, 2012
Mangalore dasara

ಮಂಗಳೂರು : ಮಂಗಳೂರಿನ ದಸರಾ ಕರಾವಳಿ ಪ್ರದೇಶದ ಪ್ರಮುಖ ಉತ್ಸವ. ಕುದ್ರೋಳಿಯ ಗೋಕರ್ಣನಾಥೇಶ್ವರನ ಸನ್ನಿಧಿಯಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ಮೆರವಣಿಗೆ ಮಾಡುವುದು ದಸರಾ ಆಚರಣೆಯ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ನಾಡಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. `ದಸರಾ’ ಅಂದಾಕ್ಷಣ ನೆನಪಾಗುವುದು ಮೈಸೂರಿನ ದಸರಾ. ಆನೆ, ಅಂಬಾರಿ, ಜಂಬೂ ಸವಾರಿ ಇತ್ಯಾದಿಗಳು ಕಣ್ಣಮುಂದೆ ಸುಳಿಯುತ್ತವೆ. `ಮಂಗಳೂರಿನ ದಸರಾ’ ಕರಾವಳಿ ಪ್ರದೇಶದ ಅತ್ಯಂತ ದೊಡ್ಡ ಉತ್ಸವ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ಜನಪ್ರಿಯವಾಗುತ್ತಿದೆ. ಒಂಬತ್ತು ದಿನಗಳ […]

ನವರಾತ್ರಿಯಲ್ಲಿ ನವದುರ್ಗೆಯರ ನವ ವೈಭವ

Wednesday, October 17th, 2012
Navaratri

ಮಂಗಳೂರು: ನವರಾತ್ರಿ ನಮ್ಮ ದೇಶದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯು ಶಕ್ತಿ ದೇವತೆಯ ಹಬ್ಬ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಶಕ್ತಿದೇವತೆಯನ್ನು ಒಂಭತ್ತು ರಾತ್ರಿಗಳು ಹಾಗೂ ಹತ್ತು ಹಗಲುಗಳ ಕಾಲ ಒಂಭತ್ತು ರೂಪಗಳಲ್ಲಿ ಪೂಜಿಸುತ್ತಾರೆ. ಹತ್ತನೆಯ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಕರೆಯುತ್ತಾರೆ. ಭಾರತದಲ್ಲಿ ನವರಾತ್ರಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಉತ್ತರ ಭಾರತೀಯರಿಗೆ ನವರಾತ್ರಿ ಎಂದರೆ ಬಹುದೊಡ್ಡ ಹಬ್ಬವಾಗಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ, ಆರಾಧಿಸುತ್ತಾರೆ. ಭಾರತದ ವಿವಿಧ ಭಾಗಗಳಲ್ಲಿ […]

ರೋಶನಿ ನಿಲಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಏಳನೇ ವರ್ಷಾಚರಣೆ

Saturday, October 13th, 2012
RTI Act

ಮಂಗಳೂರು : ವೈಟ್ ವಿಸ್ಟಲ್  ಮಂಗಳೂರು, ಸೋಶಿಯಲ್ ಚೇಂಜ್ ಮ್ಯಾನೇಜ್ ಮೆಂಟ್ ಪೋರಮ್, ಸ್ಕೂಲ್ ಅಪ್ ಸೋಶಿಯಲ್  ವರ್ಕ್ಸ್ ರೋಶನಿ ನಿಲಯ ಇವುಗಳ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಇಂದು ಬೆಳಿಗ್ಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಏಳನೇ ವರ್ಷಾಚರಣೆಯ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ರವೀಂದ್ರ ಶಾನ್ ಭೋಗ್, ವಿದ್ಯಾವಂತರು ಮಾಹಿತಿಯನ್ನು ಪಡೆದುಕೊಳ್ಳುವುದು ಸುಲಭ. ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಬಗ್ಗೆ ಅರಿವಿರುವುದಿಲ್ಲ. ಅದನ್ನು ತಿಳಿಯಪಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. […]

ಕಾಣೆಯಾದ ಹೈಸ್ಕೂಲ್ ಹುಡುಗಿಯರು ಮಹಿಳೆಯೊಬ್ಬರ ಮನೆಯಲ್ಲಿ ಪತ್ತೆ

Saturday, October 13th, 2012
Capitanio High School

ಮಂಗಳೂರು : ಅಕ್ಟೋಬರ್ 12 ಶುಕ್ರವಾರ ರಂದು ನಗರದ ಕಪಿತಾನಿಯೊ ಹೈಸ್ಕೂಲ್ ನ ನಾಪತ್ತೆಯಾಗಿದ್ದ ನಾಲ್ಕು ಬಾಲಕಿಯರನ್ನು ಇಂದು ಮುಂಜಾನೆ ನಗರದ ಇಎಸ್ಐ ಆಸ್ಪತ್ರೆಯ ಶಿವಬಾಗ್ ಬಳಿಯ ಮಹಿಳೆಯೊಬ್ಬರ ಮನೆಯಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಕ್ಷಿತಾ, ಲಾವಣ್ಯ, ಧನ್ಯ, ನಿಶ್ಮಿತಾ 8 ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದು ಶುಕ್ರವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ಹಿಂದಿರುಗದ ಕಾರಣ ಆತಂಕಗೊಂಡ ಮನೆಯವರು ಸಂಜೆ ವೇಳೆ ಗ್ರಾಮಾಂತರ ಪೋಲಿಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು. ಪೋಲೀಸರು ಕೂಡಲೆ ಕಾರ್ಯಪ್ರವೃತ್ತರಾಗಿ ಶೋಧ ಕಾರ್ಯ […]

ಬಿಜೆಪಿ ಮಹಿಳಾಮೋರ್ಚಾದಿಂದ ಗ್ಯಾಸ್ ಸಿಲಿಂಡರ್ ಮಿತಿಯ ರದ್ದುಗೊಳಿಸಲು ಬೃಹತ್ ಪ್ರತಿಭಟನೆ

Friday, October 12th, 2012
Bjp Mahila Morcha

ಮಂಗಳೂರು: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗ್ಯಾಸ್ ಸಿಲಿಂಡರ್ ಮಿತಿಯನ್ನು ರದ್ದು ಗೊಳಿಸಲು ದ. ಕ. ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ಇಂದು ಬೆಳಿಗ್ಗೆ ನಡೆಯಿತು. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ನಗರದ ಜ್ಯೋತಿ ವೃತ್ತದಿಂದ ಕಾಲ್ನಡಿಗೆಯಲ್ಲಿ ಜಾಥಾ ಹೊರಟು ಜಿಲ್ಲಾಧಿಕಾರಿ ಮುಖ್ಯ ದ್ವಾರದ ಬಳಿ ಜಮಾಹಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷೆ ಪುಲಸ್ಯ ರೈ ಮಾತನಾಡಿ 2004 ರಲ್ಲಿ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಯುಪಿಎ ಸರಕಾರವು […]

ಮಂಗಳೂರು ತಾಲೂಕಿನಲ್ಲಿ ನ. 1ರಿಂದ ಪ್ಲಾಸ್ತಿಕ್ ನಿಷೇಧ

Friday, October 12th, 2012
Dr N S Channappa Gowda.

ಮಂಗಳೂರು : ಪ್ಲಾಸ್ಟಿಕ್  ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್‌ ನಿಷೇಧ ಜಾರಿಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪಗೌಡ ಅವರು ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ  ಗುರುವಾರ  ಮಾತನಾಡಿದ  ಅವರು ನವೆಂಬರ್ ೧ರಿಂದ ಪ್ಲಾಸ್ಟಿಕ್‌ ನಿಷೇದ ಮಂಗಳೂರು ನಗರ, ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.  ಜಿಲ್ಲೆಯ ನಾಗರಿಕರ ಸಹಕಾರ ಪ್ಲಾಸ್ಟಿಕ್‌ ಹಾವಳಿಯನ್ನು ನಿಷೇಧಿಸಲು ಅಗತ್ಯವಿದೆ ಎಂದರು. ನಿಷೇಧವನ್ನು ಅನುಷ್ಠಾನಕ್ಕೆ ತರುವಲ್ಲಿ ಜಿಲ್ಲೆಯ ಆಡಳಿತದ ಸಹಕಾರ ಅಗತ್ಯವಿದೆ. […]

ಉಡುಪಿ ತಾ.ಪಂ.ಚುನಾವಣೆ ಗೌರಿಪೂಜಾರಿ ನೂತನ ಅಧ್ಯಕ್ಶೆಯಾಗಿ ಆಯ್ಕೆ

Thursday, October 11th, 2012
Udupi Taluk Panchayat President

ಉಡುಪಿಃ ಬುಧವಾರ ನಡೆದ ಉಡುಪಿ ತಾಲ್ಲೂಕು ಪಂಚಾಯತ್ ಅಧ್ಯ ಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಯಲ್ಲಿ ಬಿಜೆಪಿ ಗೌರಿಪೂಜಾರಿ ಅಧ್ಯಕ್ಷ್ಯೆಯಾಗಿ, ರಾಮ ಕುಲಾಲ್ ಉಪಾಧ್ಯಕ್ಶರಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಾಮಪಪತ್ರ ಸಲ್ಲಿಸಿದ್ದು ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಅಭ್ಯರ್ಥಿ ಡಾ. ಸುನೀತ ಶೆಟ್ಟಿ ಯವರು 18 ಮತಗಳನ್ನು ಗಳಿಸಿದರೆ ಬಿಜೆಪಿ ಅಭ್ಯರ್ಥಿ ಗೌರಿಪೂಜಾರಿ ಯವರು 23 ಮತಗಳನ್ನು ಗಳಿಸಿ ಒಟ್ಟು 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ ರಾಮ ಕುಲಾಲ್ ಅವರು ಕಾಂಗ್ರೆಸ್ […]

ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ ಗಣಪತಿ ಪೈ ನಿಧನ

Thursday, October 11th, 2012
Ganapathy pai

ಮಂಗಳೂರು : ಭಾರತ್ ಗ್ರೂಪ್ ಕಂಪನಿಯ ಗಣಪತಿ ಪೈ ಬುಧವಾರ ರಾತ್ರಿ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ  77 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗಿತ್ತು. ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ್ನು ಸ್ಥಾಪಿಸಿದ ತಂದೆ ಮಂಜುನಾಥ ಪೈಯವರೊಂದಿಗೆ  1954 ರಲ್ಲಿ ಸೇರಿಕೊಂಡರು.  ಅದರ ಬಳಿಕ ಸಹೋದರರಾದ ದಾಮೋದರ್ ಮತ್ತು ಮಾಧವ ಪೈ ಕೂಡ ಕೈ ಜೋಡಿಸಿದರು. ಇವರ ವಿವಿಧ ಸಂಸ್ಥೆಗಳಲ್ಲಿ 50,000ಕ್ಕಿಂತಲೂ ಹೆಚ್ಚು ಮಂದಿ […]

ಧರ್ಮಸ್ಥಳದಲ್ಲಿ ಕಾಡಿನಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ

Wednesday, October 10th, 2012
Dharmasthala Rape

ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಧರ್ಮಸ್ಥಳದ ನಿರ್ಜನ ಪ್ರದೇಶದ ಕಾಡಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಧರ್ಮಸ್ಥಳದ ಪಾಂಗಾಳ ಮನೆ ಚಂದಪ್ಪ ಗೌಡರ ಪುತ್ರಿ ಸೌಜನ್ಯ (17) ಮೃತ ಯುವತಿಯಾಗಿದ್ದು ಕಾಲೇಜು ಬಿಟ್ಟು ಮನೆಗೆ ಬರುವ ವೇಳೆಗೆ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ. ಮಂಗಳವಾರ ಕಾಲೇಜಿಗೆ ತೆರಳಿದ್ದ ಸೌಜನ್ಯ ಸಂಜೆ ಎಂದಿನಂತೆ ಮನೆಗೆ ಬಂದಿರಲಿಲ್ಲ. ಎಂದಿನಂತೆ ಹೊತ್ತು ಕಳೆದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದರು. ರಾತ್ರಿ 10. ಗಂಟೆ ಕಳೆದರೂ […]