ಕಳಂಕಿತ ಸದಸ್ಯರನ್ನು ಕೂಡಲೇ ಆಮಾನತುಗೊಳಿಸಿ : ವೀರಪ್ಪ ಮೊಯಿಲಿ
Thursday, February 9th, 2012ಮಂಗಳೂರು: ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಡಾ| ಎಂ. ವೀರಪ್ಪ ಮೊಯಿಲಿ ಅವರು ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ವೀಕ್ಷಿಸಿದ ಸದಸ್ಯರನ್ನು ಆಮಾನತುಗೊಳಿಸಬೇಕು ಹಾಗೂ ಸೈಬರ್ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವಿಷಯದ ಕುರಿತು ಬುಧವಾರ ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತತ್ಕ್ಷಣ ಕ್ರಮಕೈಗೊಳ್ಳಲು ಬಿಜೆಪಿ ನಿರಾಕರಿಸುತ್ತಿರುವುದು ಮತ್ತು ಅವರ ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ ಎಂದು ಹೇಳಿದರು. ಈ ಘಟನೆ ಖಂಡನೀಯ. ಸದನದ ಪಾವಿತ್ರ್ಯವನ್ನು ಕಾಪಾಡಬೇಕಾದ ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರ. ಸಾರ್ವಜನಿಕ ಜೀವನದಲ್ಲಿ […]