ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ದೋಚಿದ ಲೈಫ್ ಆಪ್‌ ಪೈ

Monday, February 25th, 2013
Life of Pi

ಲಾಸ್‌ ಏಂಜಲಿಸ್‌ : ಈ ಬಾರಿಯ 85ನೇ ಅಕಾಡೆಮಿ ಆಸ್ಕರ್‌ ಪ್ರಶಸ್ತಿ ಭಾನುವಾರ ರಾತ್ರಿ ಘೋಷಣೆಯಾಗಿದ್ದು, ನಾವೆಯ ಭಾರತೀಯ ಯುವಕನ ಜೀವನ್‌ಮರಣ ಹೋರಾಟವನ್ನು ಚಿತ್ರಿಸುವ ಲೈಫ್ ಆಪ್‌ ಪೈ ಚಲನಚಿತ್ರ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ವಿಷುವಲ್ ಎಫೆಕ್ಟ್ ಸಹಿತ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ, “ಅರ್ಗೋ” ಅತ್ಯುತ್ತಮ ಚಿತ್ರ ಪುರಸ್ಕಾರಕ್ಕೆ ಪಾತ್ರಗಿದೆ. ಭಾರತದ ಕಥಾವಸ್ತುವನ್ನೊಳಗೊಂಡ ‘ಲೈಫ್ ಆಫ್ ಪೈ’ ಚಿತ್ರವನ್ನು ಆಂಗ್ ಲೀ ನಿರ್ದೇಶಿಸಿದ್ದು, ಭಾರತೀಯರಾದ ಸೂರಜ್ ಶರ್ಮಾ, ಇರ್ಫಾನ್ […]

ಹಯಾತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಸಾಮೂಹಿಕ ವಿವಾಹ

Monday, February 25th, 2013
Hayatul Islam Association

ಮಂಗಳೂರು : ನಗರದ ಜಮಿಯ್ಯತುಲ್ ಫಲಾಹ್ ಹಾಲ್ ನಲ್ಲಿ ಬಾನುವಾರ ಹಯಾತುಲ್ ಇಸ್ಲಾಂ ಎಸೋಸಿಯೇಶನ್ ಮಂಗಳೂರು ಇದರ ವತಿಯಿಂದ ನಡೆದ ಸಾಮೂಹಿಕ ವಿವಾಹ ದಲ್ಲಿ ಆರು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು.  ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್  ರವರ ನೇತೃತ್ವದಲ್ಲಿ ವಿವಾಹ ನೆರವೆರಿಲ್ಪಟ್ಟಿತು. ಕಾರ್ಯಕ್ರಮ ಉದ್ಘಾಟಿನೆಯನ್ನು ನೆರವೇರಿಸಿ ಮಾತನಾಡಿದ ಕುದ್ರೋಳಿಯ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಖತೀಬ್ ಹಾಜಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇಂತಹ ಸರಳ ವಿವಾಹ ಪ್ರತಿಯೊಂದು ಮುಸ್ಲಿಂ ಕುಟುಂಬದಲ್ಲೂ ನಡೆಸುವ ಮೂಲಕ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯುವ ಮದುವೆಗೆ […]

ಕಾರ್ ಡಿಕ್ಕಿ ಓರ್ವಳ ಸಾವು ಮತ್ತೊಬ್ಬಳ ಸ್ಥಿತಿ ಗಂಭೀರ

Monday, February 25th, 2013
tragic incident

ಉಡುಪಿ : ಫೆಬ್ರವರಿ ೨೪  ರವಿವಾರ ದಂದು ತೆಂಕ ಬೋರ್ಡ್‌ ಶಾಲಾ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿ ಬಸ್ಸಿಗಾಗಿ ಕಾಯುತ್ತಿದ್ದ ಸಹೋದರಿಯರೀರ್ವರಿಗೆ ಮುಂಬೈನಿಂದ ಕೇರಳದ ಕುಂಬ್ಳೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರೊಂದು  ಢಿಕ್ಕಿಯಾದ ಪರಿಣಾಮ ಸಾದಿಯಾ ಸದಫ್ (೧೩) ಎಂಬಾಕೆ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ರವಿವಾರ ಮಧ್ಯಾಹ್ನ ತಂದೆ ಮೌಲಾನ ಮಹಮ್ಮದ್ ಶೌಕತ್ ಆಲಿ, ತಾಯಿ ಸಂಜರಿ ಖಾತೂನ್ ಮತ್ತು ತಂಗಿ ಸೈಮಾ ಪರ್ವಿನ್‌ಳೊಂದಿಗೆ ನತದೃಷ್ಟೆ ಸಾದಿಯಾ ಸದಫ್ ಉಚ್ಚಿಲಕ್ಕೆ ಸಮಾರಂಭವೊಂದಕ್ಕೆ ತೆರಳುವ ಸಲುವಾಗಿ ಬಸ್‌ಗಾಗಿ ಕಾಯುತ್ತಿದ್ದಳು. […]

ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ನಡೆದ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭ

Monday, February 25th, 2013
Mangalore University

ಮಂಗಳೂರು : ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ರಾಜ್ಯಪಾಲ ಹಾಗೂ ವಿ.ವಿ.ಕುಲಾಧಿಪತಿ ಎಚ್.ಆರ್.ಭಾರದ್ವಾಜ್ ಅವರು ಹಿರಿಯ ಹಾಕಿ ಆಟಗಾರ ಎ,.ಬಿ.ಸುಬ್ಬಯ್ಯ, ಖ್ಯಾತ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಹಾಗೂ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಹೊಸದಿಲ್ಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕಾರ್ಯದರ್ಶಿ ರಾಮಸ್ವಾಮಿ, ದೇಶದಲ್ಲಿರುವ 600 ವಿಶ್ವ ವಿದ್ಯಾನಿಲಯಗಳ ಪೈಕಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ […]

ಪಂಪ್‌ವೆಲ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಫಘಾತ ಪಾದಾಚಾರಿ ಸಹಿತ ಇಬ್ಬರು ಧಾರುಣ ಸಾವು, ಒರ್ವ ಗ್ಂಬೀರ

Sunday, February 24th, 2013
ಪಂಪ್‌ವೆಲ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಫಘಾತ ಪಾದಾಚಾರಿ ಸಹಿತ ಇಬ್ಬರು ಧಾರುಣ ಸಾವು, ಒರ್ವ ಗ್ಂಬೀರ

ಮಂಗಳೂರು : ನಗರದ ಪಂಪ್‌ವೆಲ್‌ ಬಳಿ ಶನಿವಾರ ಸಂಜೆ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಹಲವು ವಾಹನಗಳು ಜಖಂ ಘಟನೆ  ಸಂಭವಿಸಿದೆ. ಮಂಗಳೂರಿನಿಂದ ಹಾಸನಕ್ಕೆ ಪಂಪ್‌ವೆಲ್‌ ಮಾರ್ಗವಾಗಿ ಹೊರಟ್ಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನ ಚಾಲಕ  ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಾಗ ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಟ, ನಿಯಂತ್ರಣ ಕಳೆದುಕೊಂಡ ಚಾಲಕ ಪಕ್ಕದಲ್ಲೇ ಇದ್ದ ಹಲವು ವಾಹನಗಳಿಗೆ ಹಾಗೂ ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಮೃತ […]

ಯೋಗೀಶ್ವರ್‌, ರಾಜೂಗೌಡ ಕಾಂಗ್ರೆಸ್ ಸೇರ್ಪಡೆ, ಕಾಂಗ್ರೆಸ್ ಹೈಕಮಾಂಡ್ ತಡೆ

Saturday, February 23rd, 2013
CP Yogishvar & Raju Gauwda

ಬೆಂಗಳೂರು : ರಾಜ್ಯ ಮಾಜಿ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್‌ ಹಾಗೂ ರಾಜೂಗೌಡ ತಮ್ಮ ಬಿಜೆಪಿ ಪಕ್ಷದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಸಿ.ಪಿ. ಯೋಗೀಶ್ವರ್‌ ಮಡಿಕೇರಿಯಲ್ಲಿ  ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಿಗೆ ರಾಜೀನಾಮೆ ಸಲ್ಲಿಸುವ ಮೂಲಕ ಅವರು ತಮ್ಮ ಬಿ.ಜೆ.ಪಿ.ಯೊಂದಿಗಿನ ನಂಟನ್ನು ಕಡಿದುಕೊಂಡಿದ್ದಾರೆ. ಯೋಗೇಶ್ವರ್‌ ಹಾಗೂ ರಾಜೂಗೌಡ ರಾಜ್ಯ ಕಾಂಗ್ರೆಸ್‌ ನಾಯಕರ ನಿರ್ದೇಶನದಂತೆ ಬಿಜೆಪಿ ಗೆ ರಾಜಿನಾಮೆ ನೀಡಿ ಕಾಂಗ್ರಸ್ ಗೆ ಸೇರುವ ತವಕದಲ್ಲಿದ್ದಾರೆ ಇನ್ನೊಂದೆಡೆ ಕಾಂಗ್ರೆಸ್‌ ಹೈಕಮಾಂಡ್‌ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ರಾಜ್ಯ […]

ತೀವ್ರ ಹಣಕಾಸು ಮುಗ್ಗಟ್ಟು, ಆಸ್ತಿ ತೆರಿಗೆ ಹೆಚ್ಚಿಸಲು ಮುಂದಾದ ಬಿಬಿಎಂಪಿ

Saturday, February 23rd, 2013
BBMP property tax

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಲು ಉದ್ದೇಶಿಸಿದೆ. ಹಣಕಾಸಿನ ತೀವ್ರ ಮುಗ್ಗಟ್ಟನ್ನು  ಬಿಬಿಎಂಪಿ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.  ಅಲ್ಲದೆ  `ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ಕಾಯ್ದೆ ಪ್ರಕಾರ, ಮೂರು ವರ್ಷದಲ್ಲಿ ಒಂದು ಸಲ ಕನಿಷ್ಠ ಶೇಕಡಾ 15 ಮತ್ತು ಗರಿಷ್ಠ 30ರಷ್ಟು ತೆರಿಗೆ ಹೆಚ್ಚಿಸುವುದು ಕಡ್ಡಾಯವಾಗಿದೆ. ಈ ಹಿಂದೆ 2008ರಲ್ಲಿ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಅದಾದ ನಂತರ 2011ರ ಏಪ್ರಿಲ್‌ನಲ್ಲಿ ಬಿಬಿಎಂಪಿ ತೆರಿಗೆ ಹೆಚ್ಚಳಕ್ಕೆ […]

ಬಜಾಲ್ – ಫೈಸಲ್ ನಗರದ ಕಾಂಗ್ರೇಸ್ ಕಾರ್ಯಕರ್ತೆ ಜೆಡಿಎಸ್ ಗೆ ಸೇರ್ಪಡೆ

Saturday, February 23rd, 2013
Congress activist Rehana

ಮಂಗಳೂರು : ಮಂಗಳೂರಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಜಾಲ್ – ಫೈಸಲ್ ನಗರ ವಾರ್ಡ್ ನ  ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾದ ಶ್ರೀಮತಿ ರೆಹನಾರವರು ಕಾಂಗ್ರೇಸ್ ನ ನಡವಳಿಕೆಯ ಬಗ್ಗೆ ಬೇಸತ್ತು ಇಂದು ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು ಇವರನ್ನು ಜೆಡಿಎಸ್ ರಾಜ್ಯಾ ಉಪಾಧ್ಯಕ್ಷರಾದ ಮಾಜಿ ಸಚಿವ ನಾಗರಾಜ್ ಶೆಟ್ಟಿಯವರು ಪಕ್ಷದ ಧ್ವಜ ನೀಡುವುದರೊಂದಿಗೆ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಮಂಗಳೂರು ಮಹಾನಗರ ಪಾಲಿಕೆಯ 53 ನೇ ಬಜಾಲ್ ವಾರ್ಡ್ ನ  ಅಭ್ಯರ್ಥಿಯಾಗಿ  ಅವರು ಈ ಸಂದರ್ಭದಲ್ಲಿ ಘೋಷಿಸಿದರು. […]

ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ಮಾಡುರಿನ ಯುವಕ ಬಲಿ

Saturday, February 23rd, 2013
Mohammad Saleem

ಮಂಗಳೂರು : ಮಾಡೂರು ಜಂಕ್ಷನ್ ನಿವಾಸಿ ಎಂ.ಯು.ಅಬ್ಬಾಸ್ ಅವರ ಪುತ್ರ ಮಹಮ್ಮದ್ ಸಲೀಂ ಎಂಬಾತ ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಈತ  ಮೂರು ತಿಂಗಳ ಹಿಂದೆಷ್ಟೇ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ.  ಕಮೀಸ್ ಮಿಶೀಯತ್ ನಗರದಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸದಲ್ಲಿದ್ದ ಈತನಿಗೆ ಶುಕ್ರವಾರ ಕೆಲಸಕ್ಕೆ ರಜೆಯಿತ್ತು ಆದ ಕಾರಣ ಮೊನ್ನೆ ರಾತ್ರಿ ನಝ್ರಾನ್ ಎಂಬಲ್ಲಿ ಕ್ರಿಕೆಟ್ ಆಡಲೆಂದು ತನ್ನ ಸ್ನೇಹಿತರಾದ ಮಾಡೂರಿನ ಇಮ್ರಾನ್, ಸಲ್ಮಾನ್ ಮತ್ತು ಇನ್ನೋರ್ವ ಕೇರಳ ಮೂಲದ ಸ್ನೇಹಿತನ […]

ಸ್ವ ಸಹಾಯ ಸಂಘದ ಹೆಸರಿನಲ್ಲಿ ಗ್ರಾಮೀಣ ಮಹಿಳೆಯರಿಗೆ ವಂಚಿಸಿದ ಮಹಿಳೆಯ ಬಂಧನ

Saturday, February 23rd, 2013
Nandikeshwak' self help group

ಕುಂದಾಪುರ : ನಕಲಿ ಬ್ಯಾಂಕ್  ಪಾಸ್ ಪುಸ್ತಕಗಳನ್ನು ಸೃಷ್ಟಿಸಿ ಬಡ ಮಹಿಳೆಯರಿಗೆ ಸಾವಿರಾರು ರೂಪಾಯಿಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಬಾಬಿ ಶೆಡ್ತಿ ಎಂಬಾಕೆಯನ್ನು ಕುಂದಾಪುರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಕೊರ್ಗಿ ದೊಡ್ಡೇರಿ ನಂದಿಕೇಶ್ವರ ನಿಲಯದ ಸುಧಾಕರ ಶೆಟ್ಟಿ ಎಂಬವರ ಪತ್ನಿ ಬಾಬಿ ಶೆಡ್ತಿ ಎಂಬುವವರು  ನಂದಿಕೇಶ್ವರ ಸ್ವ-ಸಹಾಯ ಸಂಘ ಎಂಬ ಹೆಸರಿನಲ್ಲಿ ಸಂಘವನ್ನು ಹುಟ್ಟುಹಾಕಿ ಹೊಂಬಾಡಿ-ಮಂಡಾಡಿ, ದೊಡ್ಡೇರಿ, ಹೆಸ್ಕತ್ತೂರು ಮುಂತಾದ ಗ್ರಾಮಗಳ ಮಹಿಳೆಯರು ಈ ಸಂಘಕ್ಕೆ ಸೇರುವಂತೆ ಮಾಡಿ ಅವರಿಂದ […]