ಮಾದಕ ದ್ರವ್ಯದ ಚಟಕ್ಕೆ ಒಳಗಾದ ಅಸ್ಸಾಂ ಮೂಲದ ವ್ಯಕ್ತಿಗೆ ನವಜೀವನ ನೀಡಿದ ತಲಪಾಡಿ ತೂಮಿನಾಡಿನ ಸ್ನೇಹಾಲಯ

Saturday, February 16th, 2013
Snehalaya Charitable Trust

ಮಂಗಳೂರು : ಮಾದಕ ದ್ರವ್ಯದ ಚಟಕ್ಕೆ ಒಳಗಾಗಿ, ಮನೆ ಬಿಟ್ಟು ಬೀದಿಪಾಲದ  ಅಸ್ಸಾಂ ಮೂಲದ ದೀಪಕ್ ಛಾತ್ರಿ ಎಂಬಾತನಿಗೆ ತಲಪಾಡಿ ತೂಮಿನಾಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನೀಡಿದ  ಆಶ್ರಯದಿಂದಾಗಿ  ಇದೀಗ ಗುಣಮುಖನಾದ ಈತ ಸುಮಾರು ೬ ವರ್ಷಗಳ ಬಳಿಕ ತನ್ನ ಮನೆ ಸೇರುವಂತಾಗಿದೆ. ಮೂಲತಃ ಅಸ್ಸಾಂ ರಾಜ್ಯದ ಅಫ್ಲಾಂಗ್ ನಿವಾಸಿ, ದಿ. ಅಮೃತ್ ಬಹದ್ದೂರ್ ಛಾತ್ರಿ ಹಾಗೂ ರಾಧಾ ಛಾತ್ರಿ ದಂಪತಿ ಪುತ್ರ ದೀಪಕ್ ಛಾತ್ರಿ (26)  ಎಳೆವಯಸ್ಸಿನಲ್ಲಿಯೇ ಸ್ನೇಹಿತರ ಸಹವಾಸದಿಂದ ಗಾಂಜಾ, ಕುಡಿತ ಇನ್ನಿತರ ದುರಾಭ್ಯಾಸಗಳನ್ನು […]

ಕಿನ್ನಿಪದವು ಕೊಲೆ ಚಿನ್ನ ದೋಚುವ ಉದ್ದೇಶದಿಂದ ಕೃತ್ಯ , ಆರೋಪಿಯ ಬಂಧನ

Saturday, February 16th, 2013
Kinnipadavu maurder case

ಮಂಗಳೂರು : ಬುಧವಾರ ರಾತ್ರಿ ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಕೊಲೆಯಾದ ಸಂಕಲರಿಯ ನಿವಾಸಿ ಯಶವಂತ ಮಡಿವಾಳ ಕೊಲೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಿನ್ನಿಪದವು ನಿವಾಸಿ ದತ್ತ ಕೃಷ್ಣ ಶೆಟ್ಟಿ(21) ಬಂಧಿತ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಯಶವಂತ ಮಡಿವಾಳ ಮತ್ತು  ದತ್ತ ಸ್ನೇಹಿತರಾಗಿದ್ದರು. ಯಾವಾಗಲೂ ಜತೆಯಾಗಿಯೇ ಓಡಾಡುತ್ತಿದ್ದ ಇವರು ಘಟನೆಯ ಮುನ್ನಾ ದಿನ ಕಿನ್ನಿಪದವಿನ ಮಾಂಕಾಳಿ ದೈವಸ್ಥಾನದಲ್ಲಿನ ನೇಮದಲ್ಲಿ ಯಶವಂತ ಮತ್ತು ದತ್ತ ಒಟ್ಟಾಗಿ ಕೋಲದಲ್ಲಿ ಭಾಗವಹಿಸಿದ್ದರು ಆದರೆ ಯಶವಂತರು ಹಾಕಿದ್ದ ಚಿನ್ನದ ಉಂಗುರ,ಬ್ರಾಸ್‌ ಲೈಟ್‌ನ್ನು […]

ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿನ ಬದಲು ಫರ್ಡಿನೆಂಡ್ ಕಿಟ್ಟೆಲ್ ಹೆಸರಿಡುವುದು ಸೂಕ್ತ : ಟಿ. ಜೆ. ಅಬ್ರಹಾಂ

Saturday, February 16th, 2013
University in Srirangapatna

ಮಂಗಳೂರು : ಕೇಂದ್ರ ಸರ್ಕಾರವು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ನಿರ್ಧರಿಸಿರುವ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿನ ಬದಲು  ಶಿಕ್ಷಣ ಕ್ಷೇತ್ರಕ್ಕೆ ಗಣನೀಯವಾದ ಸೇವೆ ಸಲ್ಲಿಸಿದ್ದ ರೆ.ಫಾ.ಫರ್ಡಿನೆಂಡ್ ಕಿಟ್ಟೆಲ್  ಹೆಸರಿಡುವುದು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಆ್ಯಂಟಿ ಗ್ರಾಫ್ಟ್ ಮತ್ತು ಎನ್ವಿರಾನ್‌ಮೆಂಟ್ ಫೋರಂನ ಅಧ್ಯಕ್ಷ ಟಿ. ಜೆ. ಅಬ್ರಹಾಂ ಹೇಳಿದರು. ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಟಿಪ್ಪು ಸುಲ್ತಾನ್ ಒಬ್ಬ ಶ್ರೇಷ್ಟ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂಬುದು ನಿಜ. ಆದರೆ ಆತ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ […]

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಧ್ಯಮಗಳಿಗೆ ನೀಡುವ ಜಾಹೀರಾತು ಪರಿಶೀಲಿಸಲು ಸಮಿತಿ ; ಜಿಲ್ಲಾಧಿಕಾರಿ

Friday, February 15th, 2013
DC prakash

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ ಏಳರಂದು ಚುನಾವಣೆ ನಡೆಯಲಿದ್ದು,  ಎಂಸಿಸಿಯನ್ನು ಹೊರತುಪಡಿಸಿ ಮೂಡಬಿದ್ರೆ, ಉಳ್ಳಾಲ, ಪುತ್ತೂರು ನಗರಸಭೆ, ಬೆಳ್ತಂಗಡಿ ಮತ್ತು ಸುಳ್ಯದ ಪಟ್ಟಣ ಪಂಚಾಯತ್ ಚುನಾವಣೆಗಳು ಮಾರ್ಚ್ 7ರಂದು ನಡೆಯಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತದೆ. ಎಂಸಿಸಿ ಚುನಾವಣೆಗೆ ನಿಲ್ಲುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 3 ಸಾವಿರ ರೂ. ಠೇವಣೆ ಮತ್ತು ಇತರ ವರ್ಗದ ಅಭ್ಯರ್ಥಿಗಳು 1500 ರೂ. ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಇಂದು […]

ಕುಂಟಿಕಾನ್, ಕೆಪಿಟಿ ಜಂಕ್ಷನ್ ನಡುವೆ ಉರುಳಿ ಬಿದ್ದ ಮೀನಿನ ಲಾರಿ ಚಾಲಕ ಪಾರು

Friday, February 15th, 2013
Fish lorry overturns

ಮಂಗಳೂರು : ಕೇರಳದ ಕೋಯಿಕೋಡ್ ನಿಂದ ಉಡುಪಿಗೆ ಸಾಗುತ್ತಿದ್ದ ಮೀನಿನ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕುಂಟಿಕಾನ್ ಹಾಗೂ ಕೆಪಿಟಿ ಜಂಕ್ಷನ್ ನಡುವೆ ಉರುಳಿ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಚಾಲಕನು ಅತೀ ವೇಗದಲ್ಲಿ ಲಾರಿಯನ್ನು ಚಲಾಯಿಸಿದ ಕಾರಣದಿಂದಾಗಿ ಈ ಘಟನೆಯು ಸಂಭವಿಸಿದ್ದು, ಲಾರಿಯಲ್ಲಿದ್ದ ಚಾಲಕ ರಿಯಾಜ್ ಹಾಗೂ ಕ್ಲೀನರ್ ನಜೀಬ್ ಗೆ ಯಾವುದೇ ಪ್ರಾಣಾಪಾಯವಿಲ್ಲದೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿಯಲ್ಲಿದ್ದ 195 ಮೀನಿನ ಪಟ್ಟಿಗೆಗಳು  ರಸ್ತೆಗೆ ಬಿದ್ದು, ಚೆಲ್ಲಾಪಿಲ್ಲಿಯಾಗಿವೆ. ಸುದ್ದಿ ಹರಡುತ್ತಿದ್ದಂತೆ ರಾಶಿ ರಾಶಿ ಮೀನನ್ನು ಕಂಡ ಸ್ಥಳೀಯರು […]

ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

Friday, February 15th, 2013
ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

ಮಂಗಳೂರು : ವ್ಯಕ್ತಿಯೋರ್ವನನ್ನು ಮರದ ಸೊಂಟೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ ಘಟನೆ ಫೆಬ್ರವರಿ 13ರ ಬುಧವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿ ಮುಡ್ಕೂರು ಸಮೀಪದ ಸಂಕಲಕರಿಯದ ನಿವಾಸಿ ಯಶವಂತ ಮಡಿವಾಳ(38).  ಬಜ್ಪೆ ಠಾಣಾ ವ್ಯಾಪ್ತಿಯಲ್ಲಿರುವ ಕಿನ್ನಿಪದವು  ಶ್ರೀ ಮಹಾಕಾಳಿ ದೈವಸ್ಥಾನದ ಬುಧವಾರ ಕೋಲಕ್ಕೆ ಬಂದಿದ್ದ ಈತ ನಾಪತ್ತೆಯಾಗಿದ್ದ. ನಾಪತ್ತೆಯಾದ ಯಶವಂತ ಮಡಿವಾಳನ ರಕ್ತಸಿಕ್ತವಾದ ಮೃತ ದೇಹ ಗುರುವಾರ ಮಧ್ಯಾಹ್ನದ ವೇಳೆಗೆ ಕಿನ್ನಿಪದವು ಮಹಾಕಾಳಿ ದೈವಸ್ಥಾನದ ಸಮೀಪದ ಧರ್ಮರಾಜ ಎಂಬರಿಗೆ ಸೇರಿದ ನಿರ್ಮಾಣಹಂತದ ಮನೆಯೊಂದರಲ್ಲಿ ಪತ್ತೆಯಾಗಿದೆ. ದವಡೆಗೆ ಮರದ ಸೊಂಟೆಯಿಂದ ಹೊಡೆದು […]

ಉಡುಪಿಯಲ್ಲಿ ಡಾ| ವಿ.ಎಸ್‌. ಆಚಾರ್ಯ ರ ಸ್ಮರಣಾರ್ಥ ಪ್ರತಿಮೆ ಅನಾವರಣ

Friday, February 15th, 2013
VS Acharya

ಉಡುಪಿ : ಉಡುಪಿ ನಗರಸಭೆ ಕಚೇರಿ ಮತ್ತು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಬಳಿ  ಸ್ಥಾಪಿಸಲಾದ ಡಾ| ವಿ.ಎಸ್‌. ಆಚಾರ್ಯ ರ ಪ್ರತಿಮೆಗಳನ್ನು ಫೆಬ್ರವರಿ  14 ಶುಕ್ರವಾರದಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನಾವರಣಗೊಳಿಸಿದರು. ಹಾಗು ಈ ಸಂದರ್ಭ  ಉಡುಪಿ ಜಿಲ್ಲಾ ಪಂಚಾಯತಿ  ಸಭಾಂಗಣಕ್ಕೆ ಡಾ| ಆಚಾರ್ಯ ಅವರ ಹೆಸರನ್ನಿಡಲಾಯಿತು. ಅನಂತರ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ‘ದಿ| ಡಾ| ವಿ.ಎಸ್‌. ಆಚಾರ್ಯ ಅವರು ಈ ಶತಮಾನ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಓರ್ವರು. ಅವರ […]

ಹಸಿರು ರಕ್ಷಣೆಗಾಗಿ ೧೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ : ಅನಂತ ಹೆಗಡೆ ಅಶೀಸರ

Friday, February 15th, 2013
Ananth Hegde Ashisara

ಮಂಗಳೂರು :  ಅರಣ್ಯ ಸಂರಕ್ಷಣೆಗೆ 18 ಕೋಟಿ ರೂಪಾಯಿ ಹಣವನ್ನು, ರಾಜ್ಯದ ಒಂದು ಗ್ರಾಮವನ್ನು ಹಸಿರು ಗ್ರಾಮವಾಗಿ ಪರಿವರ್ತಿಸಲು 3 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ  ಅರಣ್ಯ ಸಂರಕ್ಷಣೆಗೆ ಇತರೆ ವಿಷಯಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಲು ಯೋಚಿಸಿದ್ದು, ಒಟ್ಟು 18 ಕೋಟಿ ರೂಪಾಯಿ ಹಣವನ್ನು ಹಸಿರು […]

ಕಾಲೇಜು ಆವರಣದ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸ್ಟಾಲ್ ಮೇಲೆ ಅಧಿಕಾರಿಗಳ ದಾಳಿ

Thursday, February 14th, 2013
Stall selling tobacco products

ಮಂಗಳೂರು : ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿ  ಇರುವ ಪಾನ್ ಸ್ಟಾಲ್ ನಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ಇಂದು ಪಾನ್ ಸ್ಟಾಲ್ ಮೇಲೆ ದಾಳಿ ಮಾಡಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಇನ್ನು ಮುಂದೆ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿಯಿದ್ದ ಪಾನ್ ಸ್ಟಾಲ್ ನವರು […]

ಮನೆಮನೆಗೆ ಭರತನಾಟ್ಯದ ಬಾಲ ಕಲಾವಿದೆ, ನಾಟ್ಯಮಯೂರಿ ಕುಮಾರಿ ಅಯನಾ ವಿ. ರಮಣ್

Thursday, February 14th, 2013
Ayana.V.Raman

ಮಂಗಳೂರು :  ಏಕಕಾಲದಲ್ಲಿ ಎರಡು ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), 60 ಸಂವತ್ಸರಗಳ ಹೆಸರುಗಳನ್ನು ಹೇಳುತ್ತಾಳೆ ಈ ಪುಟಾಣಿ ಕಲಾವಿದೆ. 72 ಮೇಳಕರ್ತ ರಾಗಗಳ ಹೆಸರುಗಳನ್ನು, ರಾಗಚಕ್ರ, ಮೇಳ ಸಂಖ್ಯೆ ಮತ್ತು ಆರೋಹಣ – ಅವರೋಹಣ ಸ್ವರಗಳನ್ನು ನಿಖರವಾಗಿ ಹೇಳಬಲ್ಲಳೀಕೆ. 35 ತಾಳಗಳನ್ನು 5 ಗತಿಗಳಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗನುಗುಣವಾಗಿ ಪ್ರತ್ಯಕ್ಷೀಕರಿಸುತ್ತಾಳೀಕೆ. 60 ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು […]