ಮೀನು ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ ಓರ್ವನ ಸಾವು, ಇಬ್ಬರು ಗಂಭೀರ

Thursday, February 14th, 2013
Indo Fisheries factory

ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಹರೇಕಳದ ಏಲಿಯಾರಪದವಿನಲ್ಲಿರುವ ಇಂಡೋ ಫಿಶರೀಸ್ ಮೀನಿನ ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರುವಿಕೆಯಿಂದ ಓರ್ವ ಕಾರ್ಮಿಕ ಮೃತ ಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ರಿಯಾಜ್(22) ಮೃತಪಟ್ಟಿದ್ದು, ಕೋಟೆಕಾರು ಬೀರಿ ನಿವಾಸಿ ಹನೀಫ್(23) ಹಾಗೂ ಕಾಸರಗೋಡಿನ ಕುಂಬಳೆಯ ಸಂಕೇತ್(23)  ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರಾತ್ರಿ 8.30ರ ಸುಮಾರಿಗೆ ಫ್ಯಾಕ್ಟರಿಯಲ್ಲಿ ಮೀನಿನ ರಫ್ತಿಗಾಗಿ ಅವುಗಳನ್ನು ಸಂಗ್ರಹಿಸುತ್ತಿರುವಾಗ ಫ್ರೀಜರ್ ನಲ್ಲಿ ಹಠಾತ್ತಾಗಿ ಅಮೋನಿಯಾ ಅನಿಲ ಸೋರುವಿಕೆ ಉಂಟಾಯಿತು. ಇದನ್ನು ಗಮನಿಸಿದ ರಿಯಾಜ್ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ 15 ರಿಂದ ಕಾರ್ಯಾರಂಭಿಸಲಿರುವ ಆಮ್ ಆದ್ಮಿ ಪಾರ್ಟಿ

Thursday, February 14th, 2013
Aam Admi Party

ಮಂಗಳೂರು : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜನಲೋಕಪಾಲ ಮಸೂದೆಯೆ ಸೂಕ್ತ ಎಂದು ಹೇಳಿದ ಆರ್ ಟಿಐ ಕಾರಯಕರ್ತ ಅರವಿಂದ್ ಕೆಜ್ರೀವಾಲರ ಆಮ್ ಆದ್ಮಿ ಪಕ್ಷ ಫೆಬ್ರವರಿ 15 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿದೆ ಎಂದು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಎಸ್. ನಂದಗೋಪಾಲ್ ತಿಳಿಸಿದರು. ಅವರು ನಿನ್ನೆ ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಪ್ರಾರಂಭವಾದ ಪಕ್ಷವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ […]

ವೇತನ,ಮನೆ ಬಾಡಿಗೆ ಭತ್ಯೆ ಹೆಚ್ಚಿಸುವಂತೆ ಕೋರಿ ಕರ್ನಾಟಕ ರಾಜ್ಯ ಶಿಕ್ಷಕರ ಹಾಗೂ ಉಪನ್ಯಾಸಕರ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ

Wednesday, February 13th, 2013
Teachers Protest

ಮಂಗಳೂರು : ಕರ್ನಾಟಕ ರಾಜ್ಯ ಶಿಕ್ಷಕರ ಹಾಗೂ ಉಪನ್ಯಾಸಕರ ಕ್ರಿಯಾ ಸಮಿತಿ ವತಿಯಿಂದ ಬುಧವಾರ ಬೆಳಗ್ಗೆ 9 ಗಂಟೆಗೆ  ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಬಾಗದಲ್ಲಿ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವಂತೆ ಹಾಗೂ ಗ್ರಾಮೀಣ ಪಟ್ಟಣ ಪ್ರದೇಶಗಳ ಮನೆ ಬಾಡಿಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾದ  ಶಿವಶಂಕರ್ ಭಟ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡುವ ಶಿಕ್ಷಕರಿಗೆ ರಾಜ್ಯದ ಬೇರೆ […]

ಮಂಗಳೂರಿನ ಬಂಗ್ರಕೂಳೂರು ಕಾವೂರಿನ ಮಾಲಾಡಿ ಕೋರ್ಟ್‌ನಲ್ಲಿ ವೈಭವದಿಂದ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವ

Wednesday, February 13th, 2013
Srinivasa Kalyanotsava

ಮಂಗಳೂರು : ತಿರುಮಲ ತಿರುಪತಿ ದೇವಸ್ಥಾನ ಹಾಗೂ ಮಂಗಳೂರಿನ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವು ಮಂಗಳವಾರ ಸಂಜೆ ಬಂಗ್ರಕೂಳೂರು ಕಾವೂರಿನ ಮಾಲಾಡಿ ಕೋರ್ಟ್‌ನಲ್ಲಿ ನಡೆಯಿತು. ದ.ಕ. ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಮಾಲಾಡಿ ಕೋರ್ಟ್‌ನಲ್ಲಿ ತಿರುಪತಿ ದೇವಸ್ಥಾನದ ನೇರ ವ್ಯವಸ್ಥೆಯಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರಿಗೆ ಕಲ್ಯಾಣೋತ್ಸವ ನೆರವೇರಿತು. ಇದಕ್ಕೂ ಮೊದಲು ಮಂಗಳವಾರ ಬೆಳಗ್ಗೆ ಏಳುಮಲೆ ಬೆಟ್ಟದ ಒಡೆಯ ಶ್ರೀನಿವಾಸ ದೇವರ ಪುರಪ್ರವೇಶ ಬಂಟ್ಸ್‌ ಹಾಸ್ಟೆಲ್‌ನಲ್ಲಿ ನಡೆದಿತ್ತು. ಅಲ್ಲಿಂದ […]

ಗಾಂಜಾ ಮಾರಾಟ ಆರೋಪಿಗಳ ಸೆರೆ

Wednesday, February 13th, 2013
Ganja seized at Sullia

ಮಂಗಳೂರು : ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಬೆಳಗ್ಗಿನ ಜಾವ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಅವರಿಂದ ಕಾರು ಸಹಿತ ೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕುರುಂಜಿಭಾಗ್ ದೇವರಕಳಿಯ ನಿವಾಸಿ ತೀರ್ಥಪ್ರಸಾದ್(೨೧), ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಇರ್ಫಾನ್ (೨೦) ಮತ್ತು ಜೂನಿಯರ್ ಕಾಲೇಜು ನಿವಾಸಿ ವಿನೋದ್(೨೩) ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡಿನ ಚೆರ್ಕ ಎಂಬವನು ತಲೆಮರೆಸಿಕೊಂಡಿದ್ದಾನೆ. ಸುಳ್ಯದ ಕ್ಯಾಂಪಸ್ ರಸ್ತೆಯ […]

ಕರಾವಳಿಯಲ್ಲಿ ನಾವಿಕನಿಲ್ಲದ ಹಡಗಿನಂತಾದ ಕಾಂಗ್ರೆಸ್ !

Wednesday, February 13th, 2013

ಮಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಅಥವಾ ಕುಂದಾಪುರ ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿ ಭಾರೀ ಲಾಭಿ ನಡೆಸುತ್ತಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಾಜಿ ಶಾಸಕ ಗೋಪಾಲ ಪೂಜಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡಿದ್ದು, ಪರಿಣಾಮವಾಗಿ ಪಕ್ಷ ಉಡುಪಿ ಜಿಲ್ಲೆಯಲ್ಲಿ ನಾವಿಕನಿಲ್ಲದ ಹಡಗಿನಂತಾಗಿದೆ ಎಂಬ ಅಭಿಪ್ರಾಯ ಪಕ್ಷದೊಳಗೆ ವ್ಯಾಪಕವಾಗಿದೆ. ಎಂ.ಎ.ಗಫೂರ್ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಅವರಿಂದ ತೆರವಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೈಂದೂರಿನ ಮಾಜಿ ಶಾಸಕ, ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮಿ […]

ಉದಾರ ಆರ್ಥಿಕ ನೀತಿಯಿಂದ ಒಳ್ಳೆಯದು ಮಾತ್ರ ಆಗೋದಿಲ್ಲ !

Wednesday, February 13th, 2013
Invest

ಮಂಗಳೂರು : ಕೇಂದ್ರ ಸರಕಾರ ಇತ್ತೀಚಿನ ವರ್ಷಗಳಲ್ಲಿ ಅನುಸರಿಸಿದ ಉದಾರ ಆರ್ಥಿಕ ನೀತಿಗಳಿಂದ ಒಳ್ಳೆಯದೇ ಆಗಿದೆಯೆಂದು ಹೇಳುವಂತಿಲ್ಲ. ಕೆಟ್ಟದ್ದೂ ಆಗಿದೆ. ಕೈಗಾರಿಕೆ ಮತ್ತು ಸೇವಾ ಕ್ಷೇತ್ರವನ್ನು ಸರ್ಕಾರಿ ಏಕಸ್ವಾಮ್ಯದಿಂದ ಬಿಡುಗಡೆ ಗೊಳಿಸಿದ್ದರಿಂದ ಮಾರುಕಟ್ಟೆ ಮುಕ್ತವಾಗಿ ಉದ್ಯಮಕ್ಷೇತ್ರಕ್ಕೆ ಮತ್ತು ಗ್ರಾಹಕರಿಗೆ ಒಳ್ಳೆಯದೇ ಆಯಿತು. ಆದರೆ ಉದಾರವಾದಿ ನೀತಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಉದ್ಯಮ, ಸೇವಾ ಕ್ಷೇತ್ರಗಳು ಖಾಸಗಿ ವಲಯದಿಂದ ಪೈಪೋಟಿ ಎದುರಿಸಲು ಅಗತ್ಯವಾದ ಬದಲಾವಣೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದದ್ದರಿಂದ ಅವೆಲ್ಲ ಇಂದು ನಷ್ಟಕ್ಕೆ ಒಳಗಾಗಿ […]

ಮಂಗಳೂರಿನಲ್ಲಿ ದಂತ ವೈದ್ಯರು ಹೊರಬರುತ್ತಿಲ್ಲ !

Wednesday, February 13th, 2013

ಮಂಗಳೂರು : ದೇಶದ ವಿವಿಧೆಡೆ ಭಾರತೀಯ ದಂತ ವೈದ್ಯಕೀಯ ಮಂಡಳಿ ಸದಸ್ಯರ ಮನೆಗಳಿಗೆ ಸಿಬಿಐ ಮಾಡಿದ ದಾಳಿಯ ಪರಿಣಾಮ ಮಂಗಳೂರಿನ ಮೇಲೆಯೂ ಆಗಿದೆ. ಮಂಗಳೂರಿನಲ್ಲಿಯೂ ಕೆಲ ದಂತ ವೈದ್ಯರ  ಮನೆ ಮೇಲೆ ಸಿಬಿಐ ರೇಡು ಮಾಡಿತ್ತು. ಇದರಲ್ಲಿ ಡಾ.ಭರತ್ ಶೆಟ್ಟಿ ಅವರು ಪ್ರಮುಖ ರಾಗಿದ್ದರು. ಭಾರತೀಯ ದಂತ ವೈದ್ಯ ಮಂಡಳಿಯ ಸದಸ್ಯರಾಗಿರುವ ಭರತ್ ಶೆಟ್ಟಿ ಅವರ ಮೇಲೆ ಹೊಸ ದಂತ ಕಾಲೇಜುಗಳಲ್ಲಿ ಕೋರ್ಸ್ ಗಳನ್ನು ಆರಂಭಿಸಲು ಅನುಮತಿ ನೀಡುವಾಗ ಲಂಚ ಕೇಳಿದರೆನ್ನುವ ಆರೋಪವನ್ನು ಸಿಬಿಐ ಹಾಕುತ್ತಿದೆ. ಈಗಾಗಲೇ […]

ಫರಂಗಿಪೇಟೆಯಲ್ಲಿ ಈಗ ಸಮಸ್ಯೆಗಳ ಭರಾಟೆ

Wednesday, February 13th, 2013

ಮಂಗಳೂರು : ಬಂಟ್ವಾಳ ತಾಲೂಕಿನ ಪ್ರಮುಖ ವಾಣಿಜ್ಯ ನಗರವಾದ ಫರಂಗಿಪೇಟೆ ಈಗ ಸಮಸ್ಯೆಗಳ ಭರಾಟೆಯಲ್ಲೇ ಮುಳುಗಿ ಹೋಗಿದೆ. ಇಲ್ಲಿನ ಬಸ್ ನಿಲ್ದಾಣ-ಪ್ರಯಾಣಿಕರ ತಂಗುದಾಣ, ಸುಗಮ ಸಾರಿಗೆ ವ್ಯವಸ್ಥೆ, ತರಕಾರಿ-ಮೀನು-ಮಾಂಸ ಮಾರುಕಟ್ಟೆ, ಸಾರ್ವಜನಿಕ ಶೌಚಾಲಯ, ತ್ಯಾಜ್ಯ ನಿರ್ವಹಣೆ ಇತ್ಯಾದಿಗಳು ಪೇಟೆಯಲ್ಲಿ ಸುವ್ಯವಸ್ಥಿತವಾಗಿಲ್ಲ. ಸರ್ಕಾರಿ ಅನುದಾನದಲ್ಲಿ ಅನುಷ್ಠಾನಗೊಳಿಸಲಾದ ವಿವಿಧ ನಾಗರಿಕ ಯೋಜನೆಗಳು ಫಲಪ್ರದವಾಗಿಲ್ಲ ಎನ್ನುವುದು ಸಾರ್ವತ್ರಿಕ ಆರೋಪ. ಸರ್ಕಾರಿ ಯೋಜನೆಗಳ ಪುನರ್ ಕಾಯಕಲ್ಪಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ವಿಶೇಷ ಲಕ್ಷ್ಯ ಹರಿಸಿರಲಿಲ್ಲ. ಪೇಟೆಯ ಅಭಿವೃದ್ಧಿಗಾಗಿ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳೂ ಯಶಸ್ವಿಯಾಗದೇ ಇರುವುದು […]

ಕಡಲ್ ನಲ್ಲಿ ಹುಡುಕಬೇಕಾದ ಮಣಿರತ್ನಂ !

Wednesday, February 13th, 2013
Mani Ratnam

ಮಂಗಳೂರು : ಆ ನಿರ್ದೇಶಕನ ಮೊದಲ ಸಿನಿಮಾವದು. ಚೊಚ್ಚಲ ಹೆರಿಗೆಯನ್ನು ನಿರೀಕ್ಷಿಸುತ್ತಿರುವ ಗರ್ಭಿಣಿಯ ಪ್ರಸವ ವೇದನೆಯ ಕಾಲವದು. ಬೆಂಗಳೂರಿನ ಕೆಂಪೇಗೌಡ ಸರ್ಕಲ್ ನಲ್ಲಿರುವ ಥಿಯೇಟರ್ ಒಳಗೆ ಅಳುಕುತ್ತಲೇ ಕಾಲಿಟ್ಟ ಆ ನಿರ್ದೇಶಕನ ದುಗುಡವನ್ನು ಯಾರೂ ಗುರುತಿಸಲಿಲ್ಲ. ಅಸಲಿಗೆ ಆತ ಒಬ್ಬ ನಿರ್ದೇಶಕನೆಂದೇ ಅಲ್ಲಿಯವರೆಗೆ ಗೊತ್ತಿರಲಿಲ್ಲ. ಅದೊಂದು ಆರಂಭ ಅಷ್ಟೇ. ಆನಂತರ ಆ ನಿರ್ದೇಶಕನಿಗೆ ತನ್ನ ಸಿನಿಮಾಕ್ಕೆ ಪ್ರೇಕ್ಷಕರನ್ನು ಹುಡುಕುವುದು ಕಷ್ಟವಾಗಲಿಲ್ಲ. ಪ್ರೇಕ್ಷಕರೇ ಆ ನಿರ್ದೇಶಕನ ಸಿನಿಮಾವನ್ನು ಹುಡುಕಿಕೊಂಡು ಬಂದರು. ಆ ನಿರ್ದೇಶಕನೇ ಮಣಿರತ್ನಂ. ಮಣಿಯ ಚಿತ್ರಗಳು ಉಳಿದ […]