ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ ನಡೆದ ಬೃಹತ್ ಮೆರವಣಿಗೆ

Monday, January 14th, 2013
ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ  ನಡೆದ ಬೃಹತ್ ಮೆರವಣಿಗೆ

ಮಂಗಳೂರು : ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ಶನಿವಾರ ನಗರದ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದ.ಕ.ಜಿಲ್ಲಾಧಿಕಾರಿ ಎನ್.ಪ್ರಕಾಶ್ ಮೆರವಣಿಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಮಕೃಷ್ಣ ಮಠ ಮಂಗಳೂರು, ದ.ಕ.ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನೆಹರೂ ಮೈದಾನದ ಮೂಲಕ ನಡೆದ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು […]

ಎಸ್‌ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೈಲು ಚಾಲಕ ಶಿವರಾಮನ್ ರಿಗೆ ಸನ್ಮಾನ

Monday, January 14th, 2013
Shivaram

ಮಂಗಳೂರು : ಜನವರಿ 4 ರಂದು ಸಕಲೇಶಪುರ ಬಳಿ ಕಡಗರವಳ್ಳಿ- ಎಡಕುಮೇರಿ ನಡುವೆ ನಡೆದ ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದಂತೆ ಸಮಯಪ್ರಜ್ಞೆ ಮೆರೆದ ಚಾಲಕ ಮೈಸೂರು ಮೂಲದ ಶಿವರಾಮುರವರನ್ನು ಭಾನುವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶಿವರಾಮನ್ ರಿಗೆ 50 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಜ್ಯ ಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ 1800 […]

ಸೌಪರ್ಣಿಕ ಹೊಳೆಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Monday, January 14th, 2013
youngsters drown in Sowparnika river

ಕುಂದಾಪುರ : ಭಾನುವಾರ ಸೌಪರ್ಣಿಕ ಹೊಳೆಯಲ್ಲಿ ಈಜಲು ತೆರಳಿದ ಒಟ್ಟು ಐವರಲ್ಲಿ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಹುಂತನಗೋಳಿ ನಿವಾಸಿ ರವಿರಾಜ ಶೆಟ್ಟಿ ಪುತ್ರ ಧನರಾಜ ಶೆಟ್ಟಿ (೧೩), ಹಾಗೂ ಸೀತಾರಾಮ ಶೆಟ್ಟಿ ಅವರ ಪುತ್ರ ಶಿವರಾಜ(೧೯) ಎಂದು ಗುರುತಿಸಲಾಗಿದೆ. ಕುಂದಾಪುರ ಸಮೀಪ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಂತನಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿನ ಸೌಪರ್ಣಿಕ ಹೊಳೆಯಲ್ಲಿ ಮಧ್ಯಾಹ್ನ 11.30 ರ ಸುಮಾರಿಗೆ ಸ್ನಾನಕ್ಕೆಂದು ತೆರಳಿದ ಒಂದೇ ಕುಟುಂಬದ ಸಂಪನ್ನ(೧೬), ಕಪಿಲ್(೧೪), ಸಚಿನ್(೧೫) […]

ಲೇಡಿಗೋಶನ್ ಆಸ್ಪತ್ರೆಗೆ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಭೇಟಿ

Monday, January 14th, 2013
Ladygoschen Hospital

ಮಂಗಳೂರು : ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಫೆಬ್ರವರಿ 9ರಂದು ಶಿಲಾನ್ಯಾಸ ನಡೆಸಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು. ಲೇಡಿಗೋಶನ್ ಆಸ್ಪತ್ರೆಯ ನಾನಾ ವಾರ್ಡ್‌ಗಳಿಗೆ ಮತ್ತು ಹೊಸ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಒಎನ್‌ಜಿಸಿ- ಎಂಆರ್‌ಪಿಎಲ್ ನೀಡಿರುವ 21 ಕೋಟಿ ರೂಪಾಯಿ ನೆರವಿನಿಂದ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು ಒಂದು ವೇಳೆ ಹೆಚ್ಚಿನ ಹಣ ಅಗತ್ಯಬಿದ್ದರೆ, ಬೇರೆ ಕಂಪನಿಗಳಿಂದ ಹೊಂದಿಸಲಾಗುವುದು. ಜನವರಿ […]

ಭಾರತವು ಥಾಯ್ಲೆಂಡ್ ಗೆ ಉತ್ತಮ ಮಾರುಕಟ್ಟೆಯಾಗಿದೆ :ಸೆಥಫನ್ ಬುದ್ದಾನಿ

Saturday, January 12th, 2013
tourism in Thailand

ಮಂಗಳೂರು : ಭಾರತದಿಂದ ಥಾಯ್ಲ್ಯಾಂಡ್ ಗೆ  ಹೆಚ್ಚಿನ ಪ್ರವಾಸಿಗರು ಪ್ರವಾಸ ಹೋಗುತ್ತಿದ್ದು ಇದನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ  ಟೂರಿಸಂ ಅಥಾರಿಟಿ ಆಫ್ ಥಾಯ್ಲೆಂಡ್(ಟಿಎಟಿ) ವತಿಯಿಂದ ನಗರದಲ್ಲಿ ಜನವರಿ 11 ಶುಕ್ರವಾರದಂದು ಹೋಟೆಲ್ ಗೇಟ್ ವೇ ನಲ್ಲಿ ಥಾಯ್ಲೆಂಡ್ ಸಂಸ್ಕೃತಿ, ಪರಂಪರೆಯನ್ನು ಸಾರುವ ನೃತ್ಯ ಕಾರ್ಯಕ್ರಮ ಹಾಗೂ ಕಲೆಗಳನ್ನು ಪ್ರದರ್ಶಿಸಲಾಯಿತು. ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ (ಟಿಎಟಿ) ಮುಂಬಯಿ ಕಚೇರಿಯ ನಿರ್ದೇಶಕ ಸೆಥಫನ್ ಬುದ್ದಾನಿ ಮಾತನಾಡಿ ಮಂಗಳೂರು ಸೇರಿದಂತೆ ದಕ್ಷಿಣ ಭಾರತವನ್ನು ನಮ್ಮ ದೇಶದ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು, ಈಗಾಗಲೆ […]

ಡಾ| ಕಲ್ಲಡ್ಕ ಪ್ರಭಾಕರ ಭಟ್‌ ರಿಂದ ರಾಷ್ಟ್ರೀಯ ಯುವಜನೋತ್ಸವ ಸಮಾವೇಶದ ಉದ್ಘಾಟನೆ

Saturday, January 12th, 2013
150th Vivekananda Birth anniversary

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಗಳೂರಿನ ರಾಮಕೃಷ್ಣ ಆಶ್ರಮದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಸಂವತ್ಸರ ಆಚರಣೆ ಅಂಗವಾಗಿ ಶುಕ್ರವಾರದಿಂದ ನಗರದ ರಾಮಕೃಷ್ಣ ಮಠದಲ್ಲಿ ಆರಂಭವಾದ ಯುವ ಸಮಾವೇಶವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಡಾ| ಪ್ರಭಾಕರ ಭಟ್‌ ಉದ್ಘಾಟಿಸಿದರು. ಭಾರತೀಯ ಸಂಸ್ಕೃತಿ – ಪರಂಪರೆಯ ಬಗ್ಗೆ ಅಗಾಧವಾದವಾದ ಅಭಿಮಾನ, ಅದನ್ನು ಇಡಿ ಜಗತ್ತಿನಾದ್ಯಂತ ಪ್ರಚಾರ ಮಾಡಿ, ದೇಶಭಕ್ತಿಯ ಮಂತ್ರ ಜಪಿಸಿಕೊಂಡು ಜಗತ್ತಿನಲ್ಲೇ ಗುರುತಿಸಿಕೊಂಡ […]

ಜ್ಯುವೆಲ್ಲರಿಯಿಂದ ಚಿನ್ನ ಎಗರಿಸಿದ ವಿದೇಶಿ ಕಳ್ಳರು ಒಬ್ಬ ಆರೋಪಿ ಸೆರೆ

Saturday, January 12th, 2013
Rajadhani Jewellers Tokkotu

ಮಂಗಳೂರು : ತೊಕ್ಕೊಟ್ಟು ಹೊಸ ಬಸ್ ನಿಲ್ದಾಣ ಸಮೀಪವಿರುವ ರಾಜಧಾನಿ ಜ್ಯುವೆಲ್ಲರಿಗೆ ಶುಕ್ರವಾರ ಆಗಮಿಸಿದ ಜಾರ್ಜಿಯ ಮೂಲದ ಇಬ್ಬರು ವ್ಯಕ್ತಿಗಳು ಜ್ಯುವೆಲ್ಲರಿಯಿಂದ ಸುಮಾರು 1.3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿ ಅದರಲ್ಲಿ ಒಬ್ಬ ಸೆರೆ ಸಿಕ್ಕಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ 2;30 ರ ವೇಳೆಗೆ ಗ್ರಾಹಕರ ಸೋಗಿನಲ್ಲಿ ಆಗಮಿಸಿದ ಸನೂಸ್ ಮತ್ತು ಇನ್ನೋರ್ವ ಅಂಗಡಿಯಲ್ಲಿದ್ದ ಕೆಲಸದವರಲ್ಲಿ ಬಳೆ ಹಾಗೂ ಬ್ರಾಸ್ಲೇಟ್ ಗಳ ಬೆಲೆ ಕೇಳಿ ಅವರ ಗಮನವನ್ನು ಬೇರೆಡೆ ಸೆಳೆದು ಎರಡು […]

ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಬೆಂಕಿ, ಕೋಟ್ಯಾಂತರ ರೂಪಾಯಿ ನಷ್ಟ

Saturday, January 12th, 2013
Fire mishap candle factory

ಮಂಗಳೂರು : ಜನವರಿ 10 ಗುರುವಾರ ರಾತ್ರಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಎಂಬ ಸಂಸ್ಥೆಗೆ ಸೇರಿದ ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕಾರ್ಖಾನೆ ಬಹುತೇಕ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಯಂತ್ರಗಳು, 15 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಹಾಗೂ ಕಚ್ಛಾ ಸಾಮಗ್ರಿ ಸಹಿತ ಪ್ರಾಥಮಿಕ ಮಾಹಿತಿ ಪ್ರಕಾರ ನಷ್ಟದ ಪ್ರಮಾಣ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. […]

ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ನಗರದ ಪುರಭವನದಲ್ಲಿ ಜನವರಿ 18 ಶುಕ್ರವಾರ ಸಂಜೆ 4:30ಕ್ಕೆ

Thursday, January 10th, 2013
Mega media

ಮಂಗಳೂರು : ಮೆಗಾ ಮೀಡಿಯಾ ತನ್ನ 10 ನೇ ವರ್ಷಾಚರಣೆಯ ಪ್ರಯುಕ್ತ ನಗರದ ಪುರಭವನದಲ್ಲಿ ಜನವರಿ 18 ಶುಕ್ರವಾರ ಸಂಜೆ 4:30ಕ್ಕೆ ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಮನೋರಂಜನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಹಾಗೂ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಮೆಗಾ ಮೀಡಿಯಾ ನ್ಯೂಸ್ ನ ಪ್ರದಾನ ಸಂಪಾದಕ ಶಿವಪ್ರಸಾದ್ ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮೆಗಾಮೀಡಿಯಾ 2002 ರಲ್ಲಿ ಆರಂಭಗೊಂಡು […]

ಜನವರಿ 27 ಬಜೊಡಿ ಪ್ರೇಮನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ

Thursday, January 10th, 2013
Sandesha awards

ಮಂಗಳೂರು : ನಗರದ ಸಂದೇಶ ಫೌಂಡೇಶನ್‌ ವತಿಯಿಂದ ನೀಡಲಾಗುವ ಸಂದೇಶ ಪ್ರಶಸ್ತಿಗೆ 2013ನೇ ಸಾಲಿನಲ್ಲಿ ಒಟ್ಟು 9 ಮಂದಿ ಆಯ್ಕೆಯಾಗಿದ್ದಾರೆ ಎಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಸಂದೇಶ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜಾ ತಿಳಿಸಿದರು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಕಳೆದ 22 ವರ್ಷ ಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಯು ತಲಾ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ […]