ಮಸ್ಕತ್‌ನಲ್ಲಿ ಮಂಗಳೂರು ಸಹೋದರ ಸಂಬಂಧಿಗಳ ಸಾವು

Thursday, December 27th, 2012
Mangaloreans dies at Muscat

ಮಂಗಳೂರು : ಮಂಗಳೂರು ಜೆಪ್ಪು ಬಪ್ಪಲ್ ನಿವಾಸಿಗಳಾದ ಲ್ಯಾನ್ಸಿಲಾಟ್ ಡಿಸೋಜ (40) ಮತ್ತು ಆತನ ಸಹೋದರ ಸಂಬಂಧಿ ಶರುಣ್ ಡಿಸೋಜ (26) ಎಂಬವರು ಸೋಮವಾರ ರಾತ್ರಿ ಮಸ್ಕತ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಶರುಣ್ ಡಿಸೋಜ ಕಳೆದ ಕೆಲವು ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದರು. ಆದರೆ ಲ್ಯಾನ್ಸಿಲಾಟ್ ಡಿಸೋಜ ಕಳೆದ 15 ದಿನಗಳ ಹಿಂದಷ್ಟೇ ವೀಸಾ ಪಡೆದು ಮಸ್ಕತ್‌ಗೆ ತೆರಳಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಸ್ಕತ್‌ನ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. […]

ಪತ್ರಕರ್ತ ನವೀನ್ ಸೂರಿಂಜೆ ಆಸ್ಪತ್ರೆಗೆ ದಾಖಲು

Wednesday, December 26th, 2012
Naveen Soorinje

ಮಂಗಳೂರು :ಕಸ್ತೂರಿ ವಾಹಿನಿಯ ವರದಿಗಾರ, ಹೋಮ್ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನವೀನ್ ಸೂರಿಂಜೆ ಚಿಕನ್ ಪಾಕ್ಸ್ ಪೀಡಿತರಾಗಿದ್ದು ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನನದ ನಂತರ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ನವೆಂಬರ್ 7ರಿಂದ ಸೂರಿಂಜೆ ಜೈಲಿನಲ್ಲಿದ್ದು ಡಿಸೆಂಬರ್ 26ರಂದು ಅವರ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸೂರಿಂಜೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಜೆಎಂಎಫ್ ಸಿ ಕೋರ್ಟ್ ಮತ್ತು ಸೆಶನ್ಸ್ ಕೋರ್ಟ್ ನಲ್ಲಿ ತನ್ನ ಜಾಮೀನು […]

ಕದ್ರಿ ಪಾರ್ಕ್ ಬಳಿ ಅಪರಿಚತ ಯುವಕನ ಶವ ಪತ್ತೆ ಕೊಲೆ ಶಂಕೆ

Wednesday, December 26th, 2012
Kadri Park

ಮಂಗಳೂರು :ಮಂಗಳವಾರ ಕದ್ರಿ ಪಾರ್ಕ್ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು ಇದೊಂದು ಸಲಿಂಗ ಕಾಮದ ಉದ್ದೇಶದಿಂದ ನಡೆದ ಕೊಲೆ ಎಂದು ಶಂಕಿಸಲಾಗಿದೆ. ಕದ್ರಿ ಪಾರ್ಕ್ ಹೊರಗಡೆಯಿರುವ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಯುವಕನಿಗೆ ಸುಮಾರು 20 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಗಿಸಲಾಗಿದೆ. ಬಲಕಿವಿಯ ಪಕ್ಕ ರಕ್ತ ಮಡುಗಟ್ಟಿದ ಗುರುತು ಕಂಡುಬಂದಿದ್ದು, ಮೂಗಿನಲ್ಲಿ ರಕ್ತದ ಗುರುತಿದೆ. ದಾರಿಹೊಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವಿದ್ದ ಸ್ಥಳದಲ್ಲಿ ದೊಡ್ಡ ಗಾತ್ರದ ಕಲ್ಲೊಂದು ಪತ್ತೆಯಾದರು ಈತನ ಸಾವಿಗೂ ಕಲ್ಲಿಗೂ […]

ಕುದ್ರೋಳಿಯಲ್ಲಿ ಜನವರಿ 1 ರಂದು ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ

Wednesday, December 26th, 2012
Urulu Seve

ಮಂಗಳೂರು :ಜನವರಿ 1 ರಂದು ಶ್ರೀ ಕ್ಷೇತ್ರ ಕುದ್ರೋಳಿ ಯಲ್ಲಿ ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ಆಯೋಜಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ತಿಳಿಸಿದರು. ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ನಡೆಸುವುದಲ್ಲದೆ ಇದಾದ ನಂತರ ಪತಿಯನ್ನು ಕಳೆದುಕೊಂಡ ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ ಮಾಡಲಾಗುವುದು ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ ದೇವರು ಎಲ್ಲರಿಗೂ ಸಮಾನವಾದ ಅವಕಾಶ ನೀಡಿರುವಾಗ ಮನುಷ್ಯರಾದ ನಾವೇಕೆ ತಾರತಮ್ಯ […]

ಕರಾವಳಿಯೆಲ್ಲೆಡೆ ಸಂಭ್ರಮ ಸಡಗರದ ಕ್ರಿಸ್ ಮಸ್ ಹಬ್ಬ

Wednesday, December 26th, 2012
Chirstmas

ಮಂಗಳೂರು : ಕರಾವಳಿಯಲ್ಲಿ ಸೋಮವಾರ ರಾತ್ರಿ ಕ್ರಿಸ್ತನ ಜನ್ಮ ಸಂಭ್ರಮವನ್ನು ಆಚರಿಸಲಾಯಿತು. ಕ್ರೈಸ್ತ ಬಾಂಧವರು ಸೋಮವಾರ ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸ್ವಾಗತಿಸಿದರು. ಮಂಗಳವಾರ ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಬೆಂದೂರ್‌ವೆಲ್, ಬಿಜೈ, ಲೇಡಿಹಿಲ್, ಕೋಡಿಕಲ್, ಕೂಳೂರು, ಬೊಂದೆಲ್, ದೇರೆಬೈಲ್, ಕುಲಶೇಖರ, ಉರ್ವ, ಪಾಲ್ದನೆ, ವಾಮಂಜೂರು, ಪೆರ್ಮನ್ನೂರು, ಕುತ್ತಾರುಪದವು, ಕೋಡಿಕಲ್ ಮುಂತಾದ ಚರ್ಚ್‌ಗಳಲ್ಲಿ ಸಹಸ್ರಾರು ಕ್ರೈಸ್ತ ಬಾಂಧವರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲರೂ […]

ಕ್ರಿಸ್ಮಸ್ ಮನುಷ್ಯರನ್ನು ಪ್ರೀತಿಸುವ ಹಬ್ಬ

Monday, December 24th, 2012
Christmas Celebrations

ಮಂಗಳೂರು :ಭಾರತ ಹಬ್ಬಗಳ ನಾಡು. ನಮ್ಮ ಆಚಾರ – ವಿಚಾರಗಳು, ನಮ್ಮಲ್ಲಿ ಹೂತು ಹೋಗಿರುವ ನಂಬಿಕೆ, ಋತುಗಳ ಬದಲಾವಣೆಯಿಂದ ಬೆಳೆದು ಬಂದಿರುವ ಸಂಸ್ಕಾರ, ಸಂಭ್ರಮಗಳೆಲ್ಲ ಹಬ್ಬ ಹರಿದಿನಗಳ ಹೊನಲನ್ನೇ ಹರಿಸಿವೆ ಎಂದರೂ ತಪ್ಪಾಗಲಾರದು. ಹಬ್ಬಗಳು ಒಂದು ರೀತಿಯಲ್ಲಿ ನಮಗೆ ಜೀವಾಳವಾಗಿಬಿಟ್ಟಿವೆ. ನಾವಾಚರಿಸುವ ಪ್ರತಿಯೊಂದು ಹಬ್ಬಕ್ಕೂ ತನದೇ ಆದ ವೈಶಿಷ್ಟ್ಯವಿದೆ. ಪ್ರತಿ ಹಬ್ಬಕ್ಕೂ ಇತಿಹಾಸವಿದೆ. ಒಂದು ನಿರ್ಧಿಷ್ಟ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿಯ ದೇಗುಲದಲ್ಲಿ ಹಬ್ಬಗಳು ದೀಪವಾಗಿ ನಿರಂತರ ಉರಿಯುತ್ತಲೇ ಇರುತ್ತವೆ. ಸಾವಿರಾರು ವರುಷಗಳ ಚರಿತ್ರೆ ಹೊಂದಿರುವ ನಮ್ಮ […]

ಹೆಣ್ಣು ಸಂಕಷ್ಟದಲ್ಲಿರುವಾಗ ಆಕೆಗೆ ನೆರವಾಗುವ ತಂತ್ರಜ್ಞಾನವೊಂದು ಸೃಷ್ಟಿಯಾಗಬಾರದೆ :ವೈದೇಹಿ

Monday, December 24th, 2012
Karavali Lekhakiyara Vachakiyara Sangha

ಮಂಗಳೂರು :ಭಾನುವಾರ ನಗರದ ಸಾಹಿತ್ಯ ಸದನದಲ್ಲಿ ನಡೆದ ಕರಾವಳಿ ಲೇಖಕಿಯರ-ವಾಚಕಿಯರ ಬೆಳ್ಳಿ ಹಬ್ಬದ ಸಮಾರೋಪಾ ಸಮಾರಂಭವನ್ನು ಖ್ಯಾತ ಲೇಖಕಿ ವೈದೇಹಿಯವರು ಉದ್ಘಾಟಿಸಿ ಮಾತನಾಡಿದರು, ಪ್ರಸ್ತುತ ನಮ್ಮ ಸುತ್ತಮುತ್ತಲ ಘಟನೆಗಳನ್ನು ಗಮನಿಸಿದಾಗ ಹೆಣ್ಣಿಗೆ ಹೆಣ್ಣಿನ ದೇಹವೇ ಶತ್ರು ಎಂಬಂಥಹ ಮಾತುಗಳು ಕೇಳಿಬರುತ್ತಿವೆ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಗಮನಿಸಿದಾಗ ಆಕೆ ಅಪಾಯದಲ್ಲಿರುವಾಗ ಆಕೆಗೆ ನೆರವಾಗುವ ತಂತ್ರಜ್ಞಾನವೊಂದು ಸೃಷ್ಟಿಯಾಗಬಾರದೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. ಆಧುನಿಕ ಯುಗದಲ್ಲಿ ಮಹಿಳೆಯನ್ನು ತುಚ್ಛವಾಗಿ ಕಾಣುವ ಪರಿಪಾಠ ಹೆಚ್ಚುತ್ತಿದ್ದು […]

ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ಕೊಲೆ, ಮೃತ ದೇಹ ಪತ್ತೆ

Monday, December 24th, 2012
Girish Putran

ಮಂಗಳೂರು :ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಜೆಡಿಎಸ್ ಹೊಯ್ ಗೆ ಬಜಾರ್ ಮೀನುಗಾರಿಕಾ ಘಟಕದ ಅಧ್ಯಕ್ಷರಾಗಿದ್ದ ಗಿರೀಶ್ ಪುತ್ರನ್(50) ಎಂಬವರ ಮೃತದೇಹ ಭೀಕರವಾಗಿ ಕೊಲೆಗೀಡಾದ ಸ್ಥಿತಿಯಲ್ಲಿ ಶನಿವಾರ ರಾತ್ರಿ ಪೆರ್ಮುದೆ ಗ್ರಾಮದ ಬೊಳ್ಳುಳ್ಳಿಮಾರ್ ಮೂರುಕೋಡಿ ಎಂಬಲ್ಲಿ ಪತ್ತೆಯಾಗಿದೆ. ಗಿರೀಶ್ ಕಳೆದ ಡಿಸೆಂಬರ್ 21 ಶುಕ್ರವಾರದಂದು ಸಂಜೆ ಮನೆಯಿಂದ ಹೊರಗೆ ತೆರಳಿದ್ದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ಪ್ರಫುಲ್ಲ ಅವರು ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಹಾಗೂ ಮನೆಯವರು ಹುಡುಕಾಟ ನಡೆಸುತ್ತಿದ್ದು ನಿನ್ನೆ ಸಂಜೆ ಎಂಆರ್‌ಪಿಎಲ್‌ನ […]

ಒಳ ಚರಂಡಿ ಕಾಮಗಾರಿ, ನೀರಿನಲ್ಲಿ ಮುಳುಗಿ ಕಾರ್ಮಿಕನ ಸಾವು

Monday, December 24th, 2012
water pipe burst Nagori

ಮಂಗಳೂರು : ಕಪಿತಾನಿಯೊ ಬಳಿ ಸೈಮನ್‌ ಲೇನ್‌ನಲ್ಲಿ ಶನಿವಾರ ಒಳ ಚರಂಡಿ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದ ವೇಳೆ ನೀರಿನ ಕೊಳವೆ ಒಡೆದ ಪರಿಣಾಮ, ಕಾರ್ಮಿಕ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ವ್ಯಕ್ತಿ ಆಂಧ್ರಪ್ರದೇಶ ಮೂಲದ ಕಾರ್ಮಿಕ ರಾಜು(25). ಸೈಮನ್ ಲೇನ್ ಗೆ ಕುಡ್ಸೆಂಪ್ ಯೋಜನೆಯಡಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕಳೆದ ಕೆಲವು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಸುಮಾರು 10 ಮಂದಿ ಕಾರ್ಮಿಕರು ಈ ಕಾರ್ಯಕ್ಕೆ ಕೊಳವೆ ಹಾಯಿಸಲು ಹೊಂಡ ತೆಗೆಯುವ […]

ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಚಾಲನೆ

Saturday, December 22nd, 2012
Pilikula Nisargadhama

ಮಂಗಳೂರು :ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಶುಕ್ರವಾರ ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ವಾಟರ್ ಝೋರ್ಬ್ ಬಾಲ್ ಪಿಲಿಕುಳ ನಿಸರ್ಗಧಾಮ ಮತ್ತು ಫನ್ 360 ಸಂಸ್ಥೆಯ ಜಂಟಿ ಯೋಜನೆಯಾಗಿದ್ದು, ಇದು ಈಗಾಗಲೇ ಪಾಶ್ಚಾತ್ಯ ಹಾಗು ಮುಂದುವರಿದ ರಾಷ್ಟ್ರಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಯಾಗಿದೆ. ಇದು ಹೆಚ್ಚು ಮೋಜು ಮತ್ತು ಸಂತೋಷವನ್ನು ನೀಡುವ ಕ್ರೀಡೆಯಾಗಿದ್ದು ದಕ್ಷಿಣ ಕನ್ನಡ ಜನರ ಅದರಲ್ಲೂ ಪ್ರಮುಖವಾಗಿ ಮಕ್ಕಳ ಆನಂದ ನಿರೀಕ್ಷಿಸಲಾಗಿದೆ. […]