Blog Archive

ಕರಾವಳಿಯ ತುಳು ಭಾಷೆಗೆ ವಿಕಿಪೀಡಿಯ ಮನ್ನಣೆ

Monday, August 8th, 2016
Thulu-lipi

ಮಂಗಳೂರು: ಇಂದಲ್ಲ ನಾಳೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುತ್ತದೆ ಎಂಬ ಆಶಯದಲ್ಲೇ ಇರುವ ಕರಾವಳಿಯ ತುಳು ಭಾಷೆಗೆ ವಿಕಿಪೀಡಿಯ ಮನ್ನಣೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ವಿಕಿಪೀಡಿಯ ಫೌಂಡೇಷನ್‍ನ ವ್ಯವಸ್ಥಾಪಕ ನಿರ್ದೇಶಕಿ ಕ್ಯಾಥರಿನ್ ಮಹೆರ್ ಶನಿವಾರ ಪಂಜಾಬಿನ ಚಂಡೀಗಡದಲ್ಲಿ ನಡೆದ ‘ವಿಕಿ ಕಾನ್ಫರೆನ್ಸ್ ಇಂಡಿಯಾ-2016’ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಇದುವರೆಗೆ ಇನ್‍ಕ್ಯುಬೇಟರ್‌‌ನಲ್ಲಿ ಇದ್ದ ತುಳು ಲಿಪಿಯನ್ನು ಈಗ ಲೈವ್ ಸ್ಥಾನಕ್ಕೆ ತರಲಾಗಿದೆ. ಅಂದರೆ ತುಳು ಜಾನಪದಕ್ಕೆ ಸಂಬಂಧಿಸಿ ಯಾವುದೇ ವಿಷಯ ಟೈಪ್ ಮಾಡಿದರೆ […]

ಬಹುಭಾಷಾ ಭೂಮಿಯಲ್ಲಿ ತುಳು ಭಾಷೆ ಸಂಸ್ಕೃತಿ ಸಮ್ಮಿಳಿತವಾಗಿದೆ-ಕೋಳಾರು ಸತೀಶ್ಚಂದ್ರ ಭಂಡಾರಿ

Tuesday, July 26th, 2016
Thulu-lipi-karyagara

ಉಪ್ಪಳ: ಮನಸ್ಸಿಗೆ ಭಾರೀ ಶಕ್ತಿಯಿದ್ದು,ಬುದ್ಧಿ ಶಕ್ತಿಯೊಂದಿಗೆ ಇಚ್ಛಾಶಕಿಯೂ ಸಮ್ಮಿಳಿತವಾದರೆ ಸಮಾಜಮುಖಿ ಕಾರ್ಯಗಳನ್ನು ಸುಲಲಿತವಾಗಿ ಮಾಡಬಹುದು ಎಂದು ಕ್ಯಾಂಪ್ಕೊ ನಿರ್ದೇಶಕ ಕೋಳಾರ ಸತಿಶ್ಚಂದ್ರ ಭಂಡಾರಿ ಹೇಳಿದರು. ಪೈವಳಿಕೆ ನಗರ ಶಾಲೆಯಲ್ಲಿ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ತುಳು ಲಿಪಿ ಕಾರ‍್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಸರಗೋಡು ಜಿಲ್ಲೆ ಸಪ್ತ ಭಾಷಾ ಸಂಗಮಭೂಮಿ. ಇಲ್ಲಿ ಕೇವಲ ಏಳು ಭಾಷೆಗಳನ್ನು ಮಾತ್ರವೇ ಮಾತನಾಡುವವರಿಲ್ಲ, ತುಳು ಉರ್ದು ಮರಾಠಿ ಕೊಂಕಣಿ ಸಹಿತ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿದ್ದು, ಎಲ್ಲರಲ್ಲೂ […]

ದೆಹಲಿ ತುಳು ಸಿರಿ ಅಧ್ಯಕ್ಷರಾಗಿ ಡಾ. ಪುರುಷೋತ್ತಮ ಬಿಳಿಮಲೆ ಆಯ್ಕೆ

Wednesday, August 12th, 2015
Purushatama

ನವದೆಹಲಿ: ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ದೆಹಲಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಸ್ಥೆ ದೆಹಲಿ ತುಳು ಸಿರಿಯ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿದ್ದು ಕನ್ನಡ ಮತ್ತು ತುಳು ಭಾಷೆಗಳಿಗೆ ಅಪೂರ್ವ ಕೊಡುಗೆಗಳನ್ನು ನೀಡಿರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಡಾ. ಬಿಳಿಮಲೆ ಅವರು ದೆಹಲಿ ಕರ್ನಾಟಕ ಸಂಘದಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣವಾಯಿತು. ಇದೇ ಆಗಸ್ಟ್ ೯ರಂದು […]

ದೆಹಲಿಯಲ್ಲಿ ಬಿಸು ಪರ್ಬ, ತುಳುವಿಗೆ ಸಂವಿಧಾನದ ಮಾನ್ಯತೆಗಾಗಿ ಹೋರಾಟ

Thursday, May 1st, 2014
Delhi Tulu Siri

ನವದೆಹಲಿ: ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ಭಾನುವಾರ ದೆಹಲಿಯ ನೆಹರು ಪಾಕರ್್ನಲ್ಲಿ ಸೇರಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಚೇದಕ್ಕೆ ಸೇರಿಸುವ ತಮ್ಮ ಹೋರಾಟಕ್ಕೆ ಮರುಜೀವ ನೀಡುವ ಬಗ್ಗೆತೀರ್ಮಾನಿಸಿದ್ದಾರೆ. ದೆಹಲಿ ತುಳು ಸಿರಿ ಆಯೋಜಿಸಿದ್ದ ‘ಬಿಸು ಪರ್ಬ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಮಿಕ್ಕ ತುಳುವರು ಭಾಗವಹಿಸಿದ್ದರು. ದೆಹಲಿಯಲ್ಲಿ ವಿವಿಧ ವೃತ್ತಿಯಲ್ಲಿರುವ ರಾಜ್ಯದ ಕರಾವಳಿ ಭಾಗಕ್ಕೆ ಸೇರಿದ ಉತ್ಸಾಹಿಗಳು ದೆಹಲಿಯ ಬಿಸಿಲ ಧಗೆಗೆ ಸಡ್ಡು ಹೊಡೆದು `ಪರ್ಬ’ದ ಸಡಗರವನ್ನು ಅನುಭವಿಸಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು […]

ತುಳು ಭಾಷೆಯನ್ನೇ ಅಲ್ಲಗಳೆದ “ಪ್ರತಿಭಾ ಕಾರಂಜಿ”

Thursday, November 28th, 2013
prathibha-karanji

ಬಂಟ್ವಾಳ : ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ. ತುಳುನಾಡಿನ ಎಲ್ಲೆಡೆ ಭಾಷಾಭಿಮಾನ ಉಕ್ಕಿ ಹರಿಯುತ್ತಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಿಂದ ತುಳು ಭಾಷೆಯನ್ನು ದೂರವಿಟ್ಟಿದೆ. ಈ 29 ಸ್ಪರ್ಧೆಗಳ ಜೊತೆ ಜನಪದ ಗೀತೆ, ನೃತ್ಯ ಸ್ಪರ್ಧೆಗಳು ಇವೆ. ಆದರೆ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲೆಗಳಿಗೆ ನೀಡಿರುವ ಸುತ್ತೋಲೆಯಲ್ಲಿ ಜನಪದ ಗೀತೆ ಹಾಗೂ […]

ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆಯಾಗಬೇಕು : ಹರಿಕೃಷ್ಣ ಪುನರೂರು

Monday, August 12th, 2013
Harikrishna Punarooru

ಮಂಗಳೂರು: ತುಳುನಾಡು ಟ್ರಸ್ಟ್ ನೇತೃತ್ವದಲ್ಲಿ ದ.ಕ. ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ತುಳು ಸಂಘಟನೆಗಳ ಪದಾಧಿಕಾರಿಗಳಿಂದ ಶನಿವಾರ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಂಭಾಗಣದಲ್ಲಿ ಪೂರ್ವಭಾವಿ ಸಭೆಯು ನಡೆಯಿತು. ಈ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೆತ್ತಿಗೋಳ್ಳಲಾಯಿತು. ತುಳುಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುಭಾಷೆಯನ್ನು ಸೇರ್ಪಡೆಗೋಳಿಸಬೇಕು, ಅದಲ್ಲದೆ ಪ್ರತ್ಯೇಕ ತುಳುರಾಜ್ಯದ ಬೇಡಿಕೆಯನ್ನು ಈಡೇರಿಸಬೇಕು ಇವು ಪೂರ್ವಭಾವಿ ಸಭೆಯಲ್ಲಿ ಕೈಗೆತ್ತಿಕ್ಕೊಂಡ ಪ್ರಮುಖ ನಿಣರ್ಾಯಗಳು. ಸೆಪ್ಟೆಂಬರ್ 7ರಂದು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿಯವರ ಕಛೇರಿಯವರೆಗೆ ಬೃಹತ್ […]

ತುಳುನಾಡಿನ ಉದಯಕ್ಕೆ ಹೋರಾಟಕ್ಕೂ ಸಿದ್ಧ – ಒಡಿಯೂರು ಶ್ರೀ

Friday, August 9th, 2013
odiyooru Tulu Nadu

ವಿಟ್ಲ : ತುಳು ಭಾಷೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತುಳುನಾಡು, ತುಳು ಭಾಷೆ ಉಳಿವಿಗಾಗಿ ನಾವು ಒಟ್ಟಾಗಿ ಹೋರಾಡಬೇಕು. ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುನಾಡು; ತುಳುವರು. ತುಳು ಮಾತನಾಡುವಾಗ ನಮ್ಮಲ್ಲಿ ಆತ್ಮೀಯತೆ ಉಕ್ಕಿ ಬರುವುದರೊಂದಿಗೆ ಪ್ರತಿಯೊಂದು ಶಬ್ದದ ಹಿಂದೆಯೂ ಪ್ರೀತಿಯ ಸೆಳೆ ಇದೆ. ಈ ನಿಟ್ಟಿನಲ್ಲಿ ತುಳು ಒರಿಪು ಕೇಂದ್ರ ಸ್ಥಾಪಿಸುವ ಇರಾದೆ ಇದೆ. ತುಳು ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪ ಇದೆ. ತುಳುನಾಡಿನಲ್ಲಿ ಯಾರೆಲ್ಲ ಇದ್ದಾರೆಯೋ ಅವರೆಲ್ಲರೂ ತುಳುವರೇ. […]

ಶಾಸಕ ವಸಂತ ಬಂಗೇರ ವಿಧಾನಸಭೆಯಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ವಚನಕ್ಕೆ ಸ್ಪೀಕರ್ ಆಕ್ಷೇಪ

Wednesday, June 5th, 2013
Vasanth Bangera

ಬೆಳ್ತಂಗಡಿ  : ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು ವಿಧಾನಸಭೆಯಲ್ಲಿ ಮೇ 30ರಂದು ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರೆ, ಆ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್ ಆಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ತುಳುಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಲ್ಲ. ನೀವು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಅದು ಅಸಿಂಧುವಾಗಲಿದೆ ಎಂದಿದ್ದರು. ಶಾಸಕ ವಸಂತ ಬಂಗೇರ ಅವರು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷೆಯ ಅಸ್ತಿತ್ವ ಹಾಗೂ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.  ಇದು ತುಳುವರ […]

ಫೆಬ್ರವರಿ 24 ರಂದು ದೆಹಲಿಯಲ್ಲಿ ನಡೆಯಲಿರುವ ತುಳುವರ ಜಾಗತಿಕ ಸಮ್ಮೇಳನ ‘ದೆಹಲಿ ತುಳು ಸಿರಿ’

Tuesday, February 19th, 2013
Delhi Tulu Siri

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಫೆಬ್ರವರಿ 24 ರಂದು ಬಾನುವಾರ ದೆಹಲಿಯಲ್ಲಿ ಬೃಹತ್ ‘ದೆಹಲಿ ತುಳು ಸಿರಿ’ ತುಳುವರ ಸಮ್ಮೇಳನವನ್ನು ಅಯೋಜಿಸಲಾಗಿದ್ದು. ಈ ಸಮ್ಮೆಳನದಲ್ಲಿ  ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಲುವಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಉಮಾನಾಥ ಎ.ಕೋಟ್ಯಾನ್ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಾಗೂ ಮಾನ್ಯತೆಗಾಗಿ ಕರ್ನಾಟಕ ತುಳು […]

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮಾನಾಥ ಕೋಟ್ಯಾನ್‌ ಅಧಿಕಾರ ಸ್ವೀಕಾರ

Tuesday, December 13th, 2011
umanath kotian

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮಾನಾಥ ಕೋಟ್ಯಾನ್‌ ಅವರು ತುಳು ಅಕಾಡೆಮಿ ಕಛೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಬಲಿಕ ಮಾತನಾಡಿದ ಅವರು, ತುಳು ಭಾಷೆ, ಸಂಸ್ಕೃತಿಯ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. 10ನೇ ತರಗತಿ ತನಕ ತುಳು ಭಾಷೆಯ ಪಠ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತೇನೆ. 8 ನೇ ಪರಿಚ್ಛೇದಲ್ಲಿ ತುಳು ಸೇರ್ಪಡೆಗೆ ಅಗತ್ಯ […]